ಗೋವಾ, ಪಂಜಾಬ್ ನಲ್ಲಿ ಸರ್ಕಾರ ರಚನೆ ಮಾಡ್ತೀವಿ ಅಂದಿದ್ರಿ; ಸೂತ್ರಧಾರರನ್ನ ಕಳುಹಿಸಿದ್ರಿ: ಕಾಂಗ್ರೆಸ್ ಗೆ ಎಚ್ ಡಿಕೆ ಟಾಂಗ್
ಪಂಚ ರಾಜ್ಯಗಳ ಫಲಿತಾಂಶದ ಬಳಿಕ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂದ್ರೆ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆ ಎಂಬುದು ಕಂಡುಬರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
Published: 10th March 2022 01:38 PM | Last Updated: 11th March 2022 03:15 PM | A+A A-
ಬೆಂಗಳೂರು: ಪಂಚ ರಾಜ್ಯಗಳ ಫಲಿತಾಂಶದ ಬಳಿಕ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂದ್ರೆ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆ ಎಂಬುದು ಕಂಡುಬರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮೊನ್ನೆ ಎಕ್ಸಿಟ್ ಪೋಲ್ ರಿಲೀಸ್ ಆಗಿತ್ತು. ಅದೇ ರೀತಿ ಫಲಿತಾಂಶ ಕಾಣಿಸುತ್ತಿದೆ. ನೂರಾರು ವರ್ಷ ಇತಿಹಾಸ ಇದೆ ಎಂದು ಕಾಂಗ್ರೆಸ್ ಹೇಳುತ್ತೆ. ಪ್ರಾದೇಶಿಕ ಪಕ್ಷ ಮುಗಿಸ್ತೀವಿ ಅಂತ ಹೇಳ್ತಾಯಿದ್ರು. ಕರ್ನಾಟಕದಲ್ಲಿ ಮೇಲಿದ್ದಾರೆ ಅಲ್ವಾ ಅವರಿಗೆ ಜ್ಞಾನೋದಯ ಆಗಬೇಕು. ಪರೋಕ್ಷವಾಗಿ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಎಚ್ ಡಿ ಕೆ ಟಾಂಗ್ ಕೊಟ್ಟರು.
ಇದನ್ನೂ ಓದಿ: ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ಗೋವಾಗೆ ತೆರಳುವಂತೆ ಡಿಕೆಶಿಗೆ ಹೈಕಮಾಂಡ್ ಸೂಚನೆ
ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂದ್ರೆ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆ ಎಂದು ಕಂಡುಬರುತ್ತಿದೆ. ರಾಜ್ಯದಲ್ಲಿ ನೀರಾವರಿ ಸಮಸ್ಯಗಳಿವೆ. ಮುಂದಿನ ಒಂದು ವರ್ಷ ನೀರಾವರಿಗಾಗಿ ಕಾರ್ಯಕ್ರಮ ಮಾಡ್ತಾಯಿದ್ದೇವೆ. ಪಂಜಾಬ್, ಪಶ್ಚಿಮ ಬಂಗಾಳದ ರಿಸಲ್ಟ್ ನಮಗೆ ಸ್ಪೂರ್ತಿ ಎಂದ ಅವರು, ಐದು ರಾಜ್ಯಗಳ ಫಲಿತಾಂಶವೇ ಬೇರೆ. ಅಲ್ಲಿನ ಪರಿಸ್ಥಿತಿಗಳೇ ಬೇರೆ, ನಮ್ಮ ರಾಜ್ಯದ ಪರಿಸ್ಥಿತಿನೇ ಬೇರೆ. ಒಂದು ವರ್ಷ ಇದೆ ನೋಡೋಣ ಏನೆಲ್ಲಾ ಆಗುತ್ತೆ ಎಂದು ಹೇಳಿದರು.
ಗೋವಾ, ಪಂಜಾಬ್ ನಲ್ಲಿ ಸರ್ಕಾರ ರಚನೆ ಮಾಡ್ತೀವಿ ಅಂತ ಹೇಳ್ತಾಯಿದ್ರು. ಶಾಸಕರ ರಕ್ಷಣೆಗೆ ಕರ್ನಾಟಕದಿಂದ ಸೂತ್ರಧಾರರನ್ನ ಗೋವಾಗೆ ಕಳುಹಿಸಿಲ್ವಾ ಡಿಕೆಶಿಗೆ ತಿರುಗೇಟು ಕೊಟ್ಟರು.