ಬಿಜೆಪಿ ಜಂಬ ಪಡೋ ಅಗತ್ಯ ಇಲ್ಲ, ಪಂಜಾಬ್ ನಲ್ಲಿ ನಮ್ಮ ತಪ್ಪಿನಿಂದ ಅಧಿಕಾರ ಕಳೆದುಕೊಂಡಿದ್ದೇವೆ: ಸಿದ್ದರಾಮಯ್ಯ
ಸದ್ಯ ನಮ್ಮ ತಪ್ಪಿನಿಂದ ಪಂಜಾಬ್ ನಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ ಆದರೆ ಪಂಜಾಬ್ ನಲ್ಲೇನು ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಬಂದಿರುವುದು ಆಮ್ ಆದ್ಮಿ ಪಕ್ಷ. ನಾವು ಈ ಚುನಾವಣೆಗಳಿಂದ ಬಹಳ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ...
Published: 10th March 2022 03:20 PM | Last Updated: 10th March 2022 07:09 PM | A+A A-

ಸಿದ್ದರಾಮಯ್ಯ
ಬೆಂಗಳೂರು: ಸದ್ಯ ನಮ್ಮ ತಪ್ಪಿನಿಂದ ಪಂಜಾಬ್ ನಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ ಆದರೆ ಪಂಜಾಬ್ ನಲ್ಲೇನು ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಬಂದಿರುವುದು ಆಮ್ ಆದ್ಮಿ ಪಕ್ಷ. ನಾವು ಈ ಚುನಾವಣೆಗಳಿಂದ ಬಹಳ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾದ್ಯಮದವರೊಂದಿಗೆ ಮಾನತನಾಡಿದ ಅವರು, ಪಂಚರಾಜ್ಯಗಳಲ್ಲಿ ಒಟ್ಟಾರೆಯಾಗಿ ನಮ್ಮ ಪಕ್ಷ ಅಧಿಕಾರದಲ್ಲಿದ್ದದ್ದೂ ಪಂಜಾಬ್ ನಲ್ಲಿ ಮಾತ್ರ ಬೇರೆ ರಾಜ್ಯಗಳಲ್ಲಿ ನಾವು ಅಧಿಕಾರದಲ್ಲಿರಲಿಲ್ಲ, ನಮ್ಮ ನಿರೀಕ್ಷೆ ಇದ್ದದ್ದೂ ಕೇವಲ ಉತ್ತರಖಂಡ, ಗೋವಾದಲ್ಲಿ ಮಾತ್ರ, ಸದ್ಯ ನಮ್ಮ ತಪ್ಪಿನಿಂದ ಪಂಜಾಬ್ ನಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ. ಆದರೆ ಪಂಜಾಬ್ ನಲ್ಲೇನು ಬಿಜೆಪಿ ಅಧಿಕಾರಕ್ಕೆ ಬಂದಿದೆಯಾ? ಬಂದಿರುವುದು ಆಮ್ ಆದ್ಮಿ ಪಕ್ಷ. ನಾವು ಈ ಚುನಾವಣೆಗಳಿಂದ ಬಹಳ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ ಎಂದರು.
ಇದನ್ನು ಓದಿ: ಸರ್ಕಾರದ ಆಡಳಿತ ಕುರಿತು ವಿಧಾನಸಭೆಯಲ್ಲಿ ಸಿದ್ದರಾಮಯ್ಯ- ಸಿಎಂ ಬೊಮ್ಮಾಯಿ ನಡುವೆ ತೀವ್ರ ವಾಗ್ವಾದ
ಪಂಚಾರಾಜ್ಯಗಳ ಚುನಾವಣಾ ಫಲಿತಾಂಶ ಇನ್ನೂ ಸಂಪೂರ್ಣವಾಗಿ ಬಂದಿಲ್ಲ, ಆದ್ರೆ ಗೋವಾ, ಉತ್ತರಖಂಡದಲ್ಲಿ ಅಧಿಕಾರಕ್ಕೆ ಬರಬಹುದೆಂಬ ಅಂದಾಜು ಇತ್ತು, ಈ ಚುನಾವಣೆಯಿಂದ ಧೈರ್ಯ ಕಳೆದುವಂಥದ್ದೇನಿಲ್ಲ ಪಂಜಾಬ್ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆಯಾ?
ಈಗ ಬಿಜೆಪಿ ಗೆದ್ದಿರುವುದು ಈ ಮೊದಲೇ ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿ ಮಾತ್ರ. ಸಾಮಾನ್ಯವಾಗಿ ಅಧಿಕಾರದಲ್ಲಿರುವ ಪಕ್ಷಗಳಿಗೆ ಸಂಪನ್ಮೂಲಗಳು ಹೆಚ್ಚಿಗಿರುತ್ತದೇ ಇದೇ ಕಾರಣಕ್ಕೆ ಅವರಿಗೆ ಸ್ವಲ್ಪ ಸುಲಭವಾಗಬಹುದು. ಇದರಿಂದ ಬಹಳ ಜಂಬ ಪಡೋ ಅಗತ್ಯ ಇಲ್ಲ ಎಂದ ಸಿದ್ದರಾಮಯ್ಯ ಹೇಳಿದ್ದಾರೆ.