'ಕಾಂಗ್ರೆಸ್ ಪಕ್ಷ ಉಳಿಯಲು, ನಾಯಕರು ಒಗ್ಗಟ್ಟಿನಿಂದ ಇರಲು ಗಾಂಧಿ ಕುಟುಂಬ ಬೇಕೇ ಬೇಕು, ಅವರಿಲ್ಲದೆ ಮತದಾರರನ್ನು ಸೆಳೆಯಲಾಗದು'
ಕಾಂಗ್ರೆಸ್ ಪಕ್ಷ ಉಳಿಯಲು, ದೇಶಾದ್ಯಂತ ಎಲ್ಲ ನಾಯಕರು ಒಗ್ಗಟ್ಟಿನಿಂದ ಇರಲು ಗಾಂಧಿ ಪರಿವಾರ ಬೇಕೇ ಬೇಕು. ಗಾಂಧಿ ಪರಿವಾರ ಕಾಂಗ್ರೆಸ್ ಪಕ್ಷದ ಅತಿ ಪ್ರಮುಖ ಭಾಗ. ಅವರಿಲ್ಲದೆ ನಾವಿಲ್ಲ,
Published: 12th March 2022 09:38 AM | Last Updated: 12th March 2022 01:32 PM | A+A A-

ನಾಯಕರು ಒಗ್ಗಟ್ಟಿನಿಂದ ಇರಲು ಗಾಂಧಿ ಕುಟುಂಬ ಬೇಕೇ ಬೇಕು
ನವದೆಹಲಿ: ಕಾಂಗ್ರೆಸ್ ಪಕ್ಷ ಉಳಿಯಲು, ದೇಶಾದ್ಯಂತ ಎಲ್ಲ ನಾಯಕರು ಒಗ್ಗಟ್ಟಿನಿಂದ ಇರಲು ಗಾಂಧಿ ಪರಿವಾರ ಬೇಕೇ ಬೇಕು. ಗಾಂಧಿ ಪರಿವಾರ ಕಾಂಗ್ರೆಸ್ ಪಕ್ಷದ ಅತಿ ಪ್ರಮುಖ ಭಾಗ. ಅವರಿಲ್ಲದೆ ನಾವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಡಿಕೆ ಶಿವಕುಮಾರ್, ಗಾಂಧಿ ಪರಿವಾರ ಇಲ್ಲದೆ ಕಾಂಗ್ರೆಸ್ ಪಕ್ಷದ ಉಳಿವು ಅಸಾಧ್ಯ ಎಂದು ಹೇಳುವ ಮೂಲಕ ಗಾಂಧಿ ಪರಿವಾರದ ವಿರೋಧಿಗಳ ವಿರುದ್ಧ ಚಾಟಿ ಬೀಸಿದ್ದಾರೆ.
ಅಧಿಕಾರದ ಆಸೆ ಇರುವವರು ಪಕ್ಷ ಬಿಟ್ಟು ಹೋಗಬಹುದು ಎಂದು ಸವಾಲೆಸೆದಿರುವ ಡಿ. ಕೆ. ಶಿವಕುಮಾರ್, ಅಧಿಕಾರದ ಆಸೆ ಇಲ್ಲದ ನಾವುಗಳು ಗಾಂಧಿ ಪರಿವಾರದ ಜೊತೆಗೆ ಇದ್ದು ಪಕ್ಷವನ್ನು ಕಟ್ಟುತ್ತೇವೆ, ಬೆಳೆಸುತ್ತೇವೆ ಎಂದು ಹೇಳಿದ್ದಾರೆ.
ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕಳಪೆ ಸಾಧನೆ ತೋರಿದ ಬೆನ್ನಲ್ಲೇ, ಪಕ್ಷದಲ್ಲಿ ನಾಯಕತ್ವ ಬದಲಾವಣೆ ಕುರಿತ ಕೂಗು ಬಲವಾಗಿತ್ತು. ಪಂಚ ರಾಜ್ಯ ಚುನಾವಣಾ ಫಲಿತಾಂಶ ಮಾತ್ರವಲ್ಲ, ಈ ಹಿಂದಿನ ಹಲವು ಚುನಾವಣೆಗಳಲ್ಲಿನ ಸೋಲು ಕೂಡಾ ಕಾಂಗ್ರೆಸ್ ಪಕ್ಷವನ್ನು ಕಂಗೆಡಿಸಿದೆ.
ಇದನ್ನೂ ಓದಿ: 'ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಶನಿ ಎಂಬ ಪೂಜಾರಿಯವರ ಮಾತು ನೆನಪಾಗುತ್ತಿದೆ; ಶತಮಾನದ ಪಕ್ಷ, ಇತಿಹಾಸದ ಪುಟ ಸೇರುವ ಸಮಯ ಬಂದಿದೆ'
ಕಳೆದ ಕೆಲ ವರ್ಷಗಳಿಂದ ಪಕ್ಷದಿಂದ ಹೊರಹೋಗುವವರ ಸಂಖ್ಯೆ ಹೆಚ್ಚುತ್ತಿರುವ ಕುರಿತು ಮಾತನಾಡಿರು ಅವರು, ‘ವೈಯಕ್ತಿಕ ಲಾಭ ನೋಡುವವರು ಕಾಂಗ್ರೆಸ್ ತೊರೆಯುತ್ತಿದ್ದಾರೆ. ನಾವು ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸಿದ್ಧಾಂತಕ್ಕೆ ನಿಷ್ಠರಾಗಿದ್ದೇವೆ. ಗಾಂಧಿ ಕುಟುಂಬದೊಂದಿಗೆ ಯಾವಾಗಲೂ ನಿಲ್ಲುತ್ತೇವೆ‘ ಎಂದು ಅವರು ತಿಳಿಸಿದರು.
ಐದು ರಾಜ್ಯಗಳ ಚುನಾವಣೆಯಲ್ಲಿನ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವದ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳಿಗೆ ಡಿಕೆಶಿ ತಿರುಗೇಟು ನೀಡಿದ್ದಾರೆ. ಕೇಂದ್ರ ನಾಯಕತ್ವವನ್ನು ಸಮರ್ಥಿಸಿಕೊಂಡಿದ್ದಾರೆ.