'ವಿಸಿಯಾಗಲು ಸೂಟು-ಬೂಟು ಹಾಕಿಕೊಂಡು ರೆಡಿಯಾಗಿದ್ದಾರೆ, ಬದನೆಗೊಂದು- ಸೌತೆಕಾಯಿಗೊಂದು ಯೂನಿವರ್ಸಿಟಿ ಸ್ಥಾಪಿಸಿ'
ವಿಶ್ವವಿದ್ಯಾಲಯಗಳಿಗೆ ಕುಲಪತಿಗಳಾಗಲು ಬಹಳ ಜನ ಕಾದು ಕುಳಿತಿದ್ದಾರೆ, ಅದಕ್ಕಾಗಿ ಸೂಟು-ಬೂಟು ರೆಡಿ ಮಾಡಿಕೊಂಡು ಕಾಯುತ್ತಿದ್ದಾರೆ, ಹೀಗಾಗಿ ಬದನೆಗೊಂದು, ಸೌತೆಕಾಯಿಗೊಂದು, ವಿ.ವಿ ಸ್ಥಾಪಿಸಿ ಎಂದು ಕಾಂಗ್ರೆಸ್ ಶಾಸಕ ಕೆ.ಆರ್ ರಮೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.
Published: 23rd March 2022 11:38 AM | Last Updated: 23rd March 2022 01:13 PM | A+A A-

ರಮೇಶ್ ಕುಮಾರ್
ಬೆಂಗಳೂರು: ವಿಶ್ವವಿದ್ಯಾಲಯಗಳಿಗೆ ಕುಲಪತಿಗಳಾಗಲು ಬಹಳ ಜನ ಕಾದು ಕುಳಿತಿದ್ದಾರೆ, ಅದಕ್ಕಾಗಿ ಸೂಟು-ಬೂಟು ರೆಡಿ ಮಾಡಿಕೊಂಡು ಕಾಯುತ್ತಿದ್ದಾರೆ, ಹೀಗಾಗಿ ಬದನೆಗೊಂದು, ಸೌತೆಕಾಯಿಗೊಂದು, ವಿ.ವಿ ಸ್ಥಾಪಿಸಿ ಎಂದು ಕಾಂಗ್ರೆಸ್ ಶಾಸಕ ಕೆ.ಆರ್ ರಮೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ವಿಧಾನಸಭೆಯಲ್ಲಿ ಮಂಗಳವಾರ ಇಲಾಖೆಗಳ ಬೇಡಿಕೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗ ಜಿಲ್ಲೆಗೊಂದು ವಿಶ್ವವಿದ್ಯಾಲಯ ಮಾಡುತ್ತಿದ್ದಾರೆ. ಮುಂದೆ ತಾಲ್ಲೂಕಿಗೊಂದು ಮಾಡಲಿ, ನಂತರ ಸೌತೆಕಾಯಿ, ಬದನೆಕಾಯಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು ಸೊಪ್ಪಿಗೂ ವಿಶ್ವವಿದ್ಯಾಲಯಗಳನ್ನು ಮಾಡಲಿ’ ಎಂದು ಲೇವಡಿ ಮಾಡಿದ್ದಾರೆ.
ಕೃಷಿ ವಿಶ್ವವಿದ್ಯಾಲಯಗಳಲ್ಲಿ ಏನು ಸಂಶೋಧನೆ ಮಾಡುತ್ತಿದ್ದಾರೆ. ರಾಜ್ಯದ ಸಾವಿರಾರು ಕೃಷಿ ಭೂಮಿಯಲ್ಲಿ ಬಳ್ಳಾರಿ ಜಾಲಿ ವ್ಯಾಪಿಸಿದೆ. ಕೆರೆಗಳಿಗೂ ಕಳೆಗಳು ಆವರಿಸಿವೆ. ಹೊಲಗಳ ಬದಿಯಲ್ಲಿ ಬೇಲಿಗಾಗಿ ಬಳಸುವ ಕತ್ತಾಳೆಯ ಅಭಿವೃದ್ಧಿಪಡಿಸುವ ಬಗ್ಗೆ ಕೃಷಿ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರಾ? ಪಾರ್ಥೇನಿಯಂ ತಡೆಗೆ ಏನು ಮಾಡಿದ್ದಾರೆ’ ಎಂದು ಅವರು ಪ್ರಶ್ನಿಸಿದರು. ಕೃಷಿ ವಿಶ್ವವಿದ್ಯಾಲಯಗಳು ಏನು ಮಾಡುತ್ತಿವೆ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ ಎಂದು ರಮೇಶ್‌ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.