ನಮ್ ಮನೆ ದೇವ್ರು ಸಿದ್ದರಾಮೇಶ್ವರ, ಅಪ್ಪನ್ ಹೆಸ್ರು ಸಿದ್ದರಾಮೇಗೌಡ, ನಮ್ ಊರ್ ಹೆಸ್ರು ಸಿದ್ದರಾಮನಹುಂಡಿ!
ಸದನದಲ್ಲಿ ಸಿದ್ದರಾಮಯ್ಯ ಮನೆ ದೇವರು ವಿಧಾನಸಭೆ: ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮನೆ ದೇವರ ಕುರಿತು ಸ್ವಾರಸ್ಯಕರ ಚರ್ಚೆ ನಡೆಯಿತು.
Published: 24th March 2022 08:57 AM | Last Updated: 24th March 2022 01:20 PM | A+A A-

ಕರ್ನಾಟಕ ವಿಧಾನಸಭೆ
ಬೆಂಗಳೂರು: ಸದನದಲ್ಲಿ ಸಿದ್ದರಾಮಯ್ಯ ಮನೆ ದೇವರು ವಿಧಾನಸಭೆ: ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮನೆ ದೇವರ ಕುರಿತು ಸ್ವಾರಸ್ಯಕರ ಚರ್ಚೆ ನಡೆಯಿತು.
40 % ಕಮಿಷನ್ ಕುರಿತು ನಿಲುವಳಿ ಸೂಚನೆ ಮಂಡಿಸಲು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದರು.
ಈ ಸಂದರ್ಭದಲಿ ಮಧ್ಯಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಒಂದು ನಿಮಿಷ ಸಾರ್, ದೇವರಾಗಿ, ನಮ್ ಮನೆ ದೇವರ ಹೆಸ್ರು ಇಟ್ಕಂಡಿದೀರಿ, ಹಿಂಗಾಡ್ತಿರಲ್ಲ ಎಂದರು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಸುಧಾಕರ್, ನಿಮ್ಮ ಮನೆ ದೇವರು ಯಾವುದು ಎಂದು ಪ್ರಶ್ನಿಸಿದರು. ಮಾಧುಸ್ವಾಮಿ ಸಿದ್ದರಾಮೇಶ್ವರ ಎಂದರು, ನಿಮ್ ಮನೆ ದೇವರು ಅಂತಿದೀರಾ ಬಿಟ್ ಬಿಡಿ ಸರ್ ಎಂದು ಅಶೋಕ್ ಮಾಧುಸ್ವಾಮಿಗೆ ಮನವಿ ಮಾಡಿದರು.
ನಮ್ ಮನೆ ದೇವ್ರು ಹೆಸ್ರು ಇಟ್ಕಂಡು ಹಿಂಗಾಡ್ತಾರಲ್ರೀ ಅಶೋಕ್ ಇವ್ರು ಎಂದರು ಮಾಧುಸ್ವಾಮಿ, ನಮ್ ಮನೆ ದೇವ್ರು ಸಿದ್ದರಾಮೇಶ್ವರ, ನಮ್ ಅಪ್ಪನ್ ಹೆಸ್ರು ಸಿದ್ದರಾಮೇಗೌಡ, ನಮ್ ಊರ್ ಹೆಸ್ರು ಸಿದ್ದರಾಮನಹುಂಡಿ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
ನಾವೂ ಸಿದ್ದರಾಮನ ಒಕ್ಲು ಕೂತ್ಕಳಿ ಎಂದು ಮಾಧುಸ್ವಾಮಿ ಹೇಳಿದರು. ರಾಮ.. ರಾಮ.. ರಾಮ.. ರಾಮ.. ರಾಮ ಎಂದು ಕಂದಾಯ ಸಚಿವ ಅಶೋಕ್ ರಾಗ ಎಳೆದರು. ಆ ಸಂದರ್ಭದಲ್ಲಿ ಸದನ ನಗೆಗಡಲಲ್ಲಿ ತೇಲಿತು.