
ಸಂಗ್ರಹ ಚಿತ್ರ
ಬೆಂಗಳೂರು: ಮತಾಂತರ ನಿಷೇಧ ಕಾಯಿದೆ ಅಸಂವಿಧಾನಿಕ ಎಂದು ವಿನಿಶಾ ನಿರೋ ಹೇಳಿಕೆ ನೀಡಿದ್ದಾರೆಂಬ ವಿಚಾರಕ್ಕೆ ಕುರಿತಂತೆ ವಿಧಾನಸಭೆಯಲ್ಲಿ ಇಂದು ವಾಕ್ಸಮರಕ್ಕೆ ಕಾರಣವಾಯಿತು.
ಹಿಂದು ಮತಾಂತರ ನಿಷೇಧ ಕಾಯಿದೆ ಅಸಂವಿಧಾನಿಕ ಎಂದು ವಿನಿಶಾ ನಿರೋ ಹೇಳಿದ್ದಾರೆಂದು ಪಿ ರಾಜೀವ್ ಆಕ್ಷೇಪ ವ್ಯಕ್ತಪಡಿಸಿದರು. ಇದೇ ಸದನದಲ್ಲಿ ಪಾಸ್ ಆಗಿರುವ ಬಿಲ್ ಹೇಗೆ ಅಸಂವಿಧಾನಿಕ ಆಗುತ್ತೆ ಎಂದು ಪಿ.ರಾಜೀವ್ ಪ್ರಶ್ನೆ ಮಾಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ಪ್ರಿಯಾಂಕ್ ಖರ್ಗೆ, ಪಿ.ರಾಜೀವ್ ಮಾತಿಗೆ ಗರಂ ಆದರು. ಮತಾಂತರ ನಿಷೇಧ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಬಿಜೆಪಿಗೆ ಸವಾಲು ಹಾಕಿದ ಖರ್ಗೆ, ನಾವು ಮತಾಂತರ ನಿಷೇಧ ವಿರೋಧ ಮಾಡಿದ್ದೇವೆ ಎಂದ ತಿಳಿಸಿದರು.
ಚರ್ಚೆ ಆದ ಬಳಿಕವೇ ಪಾಸ್ ಆಗಿರುವುದು… ಅದು ಹೇಗೆ ಅಸಂವಿಧಾನಿಕ ಆಗುತ್ತೆ ಪಿ.ರಾಜೀವ್ ಪ್ರಶ್ನೆ ಮಾಡಿದರು. ಈ ವೇಳೆ ಉಭಯ ನಾಯಕರ ನಡುವೆ ವಾಕ್ಸಮರವೇ ನಡೆದು ಹೋಯಿತು.
ಮಧ್ಯಪ್ರವೇಶ ಮಾಡಿ ಮಾತನಾಡುವಂತೆ ಎಂಎಲ್ಎ ವಿನಿಶಾ ನಿರೋಗೆ ಸ್ಪೀಕರ್ ಸೂಚಿಸಿದರು. 'ನಾನು ಆ ರೀತಿ ಮಾತನಾಡಿಲ್ಲ.. ರಾಜೀವ್ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ' ಎಂದು ವಿನಿಶಾ ನಿರೋ ಉತ್ತರಿಸಿದರು.