ಹಿಜಾಬ್ ಬಗ್ಗೆ ಮಾತನಾಡಿಲ್ಲ.. ಸ್ವಾಮೀಜಿಗಳ ಬಗ್ಗೆ ಅಪಾರ ಗೌರವವಿದೆ; 'ನಾನು ಹೇಳಿದಷ್ಟು ತೋರಿಸಿ': ಸಿದ್ದರಾಮಯ್ಯ ಫುಲ್ ಗರಂ
ಹಿಜಾಬ್ ಬಗ್ಗೆ ತಾವು ಮಾತನಾಡಿಯೇ ಇಲ್ಲ.. ಸ್ವಾಮೀಜಿಗಳ ಬಗ್ಗೆ ಅಪಾರ ಗೌರವವಿದ್ದು, ಅವರನ್ನು ಅಗೌರವಿಸಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
Published: 26th March 2022 06:12 PM | Last Updated: 26th March 2022 07:08 PM | A+A A-

ಸಿದ್ದರಾಮಯ್ಯ
ಮೈಸೂರು: ಹಿಜಾಬ್ ಬಗ್ಗೆ ತಾವು ಮಾತನಾಡಿಯೇ ಇಲ್ಲ.. ಸ್ವಾಮೀಜಿಗಳ ಬಗ್ಗೆ ಅಪಾರ ಗೌರವವಿದ್ದು, ಅವರನ್ನು ಅಗೌರವಿಸಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಸಿದ್ದರಾಮಯ್ಯ ಏಕಪಾತ್ರಾಭಿನಯ ಆರಂಭಿಸಿದ್ದಾರೆ: ಬಿಜೆಪಿ
It is up to the government to accept it. I have done my duty to ensure that the future of the students should not be spoiled: LoP in Karnataka Assembly, Siddaramaiah pic.twitter.com/9TAxqdZwkx
— ANI (@ANI) March 26, 2022
ನಿನ್ನೆ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ಹಿಜಾಬ್ ಕುರಿತು ಆಡಿದ್ದ ಮಾತುಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.. ಅಲ್ಲದೇ ಅವರ ಮಾತು ರಾಜ್ಯದ ಹಲವು ಮಠಗಳ ಶ್ರೀಗಳ ಕೆಂಗಣ್ಣಿಗೂ ಗುರಿಯಾಗಿತ್ತು. ಈ ಸಂಬಂದ ಕೆಲ ಸ್ವಾಮೀಜಿಗಳು ಬಹಿರಂಗವಾಗಿಯೇ ಮಾದ್ಯಮಗಳ ಎದುರು ಆಕ್ರೋಶ ಹೊರಹಾಕಿದ್ದರು. ಈ ಬೆಳವಣೆಗೆ ಬೆನ್ನಲ್ಲೇ ಬೆಂಗಳೂರಿನ ಟಿ.ಕೆ.ಲೇಔಟ್ನಲ್ಲಿರುವ ಅವರ ಮನೆಯಲ್ಲಿ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ ಅವರು, ನನ್ನ ಹೇಳಿಕೆಯನ್ನು ತಿರುಚಲಾಗಿದ್ದು, ನಾನು ಹಿಜಾಬ್ ಬಗ್ಗೆ ಮಾತನಾಡಿಲ್ಲ.. ಸ್ವಾಮೀಜಿಗಳ ಬಗ್ಗೆ ಅಪಾರ ಗೌರವವಿದ್ದು, ಅವರನ್ನು ಅಗೌರವಿಸಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕಿಕೊಂಡ್ರೆ ಪ್ರಶ್ನಿಸ್ತೀರಾ?: ನನ್ನ ಹೇಳಿಕೆ ತಿರುಚಲಾಗಿದೆ- ಸಿದ್ದರಾಮಯ್ಯ ಸ್ಪಷ್ಟನೆ
When I was speaking in the Assembly, I had suggested Ministers Ashwathnarayan and BC Nagesh that the court ordered not to wear hijab inside classrooms, so students should wear a school uniform & I requested them to allow it dupatta of the same colour: Siddaramaiah, Karnataka LoP
— ANI (@ANI) March 26, 2022
ಅಲ್ಲದೆ 'ನಮ್ಮ ಹೆಣ್ಣು ಮಕ್ಕಳು ಕೂಡ ದುಪ್ಪಟ್ಟಾ ಹಾಕುತ್ತಾರೆ ಎಂದಿದ್ದೆ. ನಾನು ಹೇಳಿದಷ್ಟು ತೋರಿಸಿ, ಇಲ್ಲದಿದ್ದರೆ ಸುಮ್ಮನಿರಿ. ನಾನು ಏನೂ ಹೋಲಿಕೆ ಮಾಡಿಲ್ಲ. ಹಿಜಾಬ್ ಪ್ರಸ್ತಾಪವನ್ನೇ ಮಾಡಿಲ್ಲ. ಅಸೆಂಬ್ಲಿಯಲ್ಲಿ ಕೂಡ ದುಪ್ಪಟ್ಟಾ ಹಾಕೋದಕ್ಕೆ ಅವಕಾಶ ಮಾಡಿಕೊಡಿ ಅಂತ ಹೇಳಿದ್ದೆ ಅಷ್ಟೇ..ಯಾವತ್ತೂ ಕೂಡ ಸ್ವಾಮೀಜಿಗಳಿಗೆ ಅಗೌರವವಾಗಿ ನಡೆದುಕೊಂಡಿರುವ ನಿದರ್ಶನ ಇಲ್ಲ. ಅವರ ಜೊತೆ ಸಂಬಂಧ ಮೊದಲಿನಿಂದಲೂ ಚೆನ್ನಾಗಿದೆ. ಸ್ವಾಮೀಜಿಗಳಿಗೆ ಯಾವತ್ತೂ ಗೌರವ ಕೊಡುತ್ತೇನೆ ಎಂದು ಹೇಳಿದರು.
I've tremendous respect for seers. I never spoke or disrespected seers, I didn't mention hijab y'day. How can I speak about Hijab or seers? I spoke about exams & allowing students to wear dupattas of the same colour as uniforms: Siddaramaiah on his reported remarks in Assembly pic.twitter.com/BDIcnsHTfi
— ANI (@ANI) March 26, 2022
ಸುದ್ದಿಗಾರರ ವಿರುದ್ಧ ಸಿದ್ದು ಗರಂ
ಇದೇ ವೇಳೆ ಪ್ರಶ್ನೆ ಕೇಳಿದ ಸುದ್ದಿಗಾರರ ವಿರುದ್ಧವೂ ಸಿದ್ದರಾಮಯ್ಯ ಗರಂ ಆಗಿದ್ದು, 'ಪ್ರಶ್ನೆನೂ ನೀವೇ ಕೇಳುತ್ತೀರಿ, ವಿವಾದವನ್ನು ನೀವೇ ಮಾಡುತ್ತೀರಿ. ಸ್ಪಷ್ಟವಾಗಿ ಹೇಳುತ್ತೇನೆ ಸ್ವಾಮೀಜಿ ಗಳ ಬಗ್ಗೆ ಅಪಾರವಾದ ಗೌರವ ವಿದೆ. ಈಗಲೂ ಇದೆ ಮುಂದೆಯೂ ಇರತ್ತೆ, ನಾನು ತುಂಬಾ ಮಠಗಳಿಗೆಲ್ಲ ಹೋಗಿದ್ದೇನೆ. ಸ್ವಾಮೀಜಿಗಳನ್ನು ಗೌರವದಿಂದ ಕಾಣುತ್ತೇನೆ ಎಂದು ಹೇಳಿದರು.