ಮದರಸಾಗಳು ಏಕೆ ಬೇಕು? ಎಳೆ ಮಕ್ಕಳಿಗೆ ದೇಶ ದ್ರೋಹದ ಪಾಠ ಮಾಡುವ ಅವುಗಳನ್ನು ನಿಷೇಧಿಸಿ: ರೇಣುಕಾಚಾರ್ಯ
ಮದರಸಾಗಳು ಏಕೆ ಬೇಕು? ಮದರಸಾಗಳಲ್ಲಿ ದೇಶದ್ರೋಹದ ಪಾಠ ಮಾಡುತ್ತಾರೆ. ಅವುಗಳನ್ನು ನಿಷೇಧ ಮಾಡಬೇಕು’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
Published: 28th March 2022 10:07 AM | Last Updated: 28th March 2022 01:22 PM | A+A A-

ಎಂ.ಪಿ ರೇಣುಕಾಚಾರ್ಯ
ದಾವಣಗೆರೆ: ಮದರಸಾಗಳು ಏಕೆ ಬೇಕು? ಮದರಸಾಗಳಲ್ಲಿ ದೇಶದ್ರೋಹದ ಪಾಠ ಮಾಡುತ್ತಾರೆ. ಅವುಗಳನ್ನು ನಿಷೇಧ ಮಾಡಬೇಕು’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದೂ ಮಠ, ಮಂದಿರಗಳಲ್ಲಿ ಎಲ್ಲಾ ಧರ್ಮೀಯರಿಗೂ ಪೂಜೆ, ಪ್ರಾರ್ಥನೆ ಸಲ್ಲಿಸುವುದಕ್ಕೆ ಅವಕಾಶಗಳಿವೆ. ಆದರೆ ನಿಮ್ಮ ಮದರಸಾ, ಮಸೀದಿಗಳಲ್ಲಿ ಯಾಕಿಲ್ಲ ಎಂದು ಪ್ರಶ್ನಿಸಿದರು.
‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯರು. ಅವರ ಬಗ್ಗೆ ಅಪಾರ ಗೌರವವಿದೆ. ಅವರು ಹಿಜಾಬ್ ವಿವಾದಲ್ಲಿ ವಿನಾಕಾರಣ ಮಠಾಧೀಶರನ್ನು ಎಳೆತರುವ ಪ್ರಯತ್ನ ಮಾಡಿದ್ದಾರೆ’ ಎಂದು ದೂರಿದರು. ಮದರಸಾ ಶಾಲೆಗಳನ್ನ ಬ್ಯಾನ್ ಮಾಡಬೇಕು. ಅಲ್ಲಿ ಎಳೆ ಮಕ್ಕಳಿಗೆ ದೇಶ ದ್ರೋಹದ ಪಾಠ ಮಾಡಲಾಗುತ್ತದೆ. ಅವರು ಮುಂದೆ ಭಾರತ್ ಮಾತಾ ಕೀ ಜೈ ಅನ್ನಲ್ಲ ಎಂದು ಹೊನ್ನಾಳಿಯಲ್ಲಿ ಆಗ್ರಹ ಪಡಿಸಿದ್ದಾರೆ.
I request the CM and Education Minister to ban madrasas. Don't we have other schools where Hindu and Christian students study? You teach anti-national lessons here. They should be banned or made to teach the syllabus what we teach in other schools: MP Renukacharya pic.twitter.com/QWQVb2vUPA
— ANI (@ANI) March 26, 2022
ರಾಜ್ಯದಲ್ಲಿ ಶಾಲೆಗಳು ಇಲ್ಲವಾ? ಮದರಸಾದಲ್ಲಿ ಎನು ಪಾಠ ಮಾಡಲಾಗುತ್ತದೆ? ಮುಖ್ಯಮಂತ್ರಿಗಳು ಮದರಸಾಗಳನ್ನ ಬ್ಯಾನ್ ಮಾಡಬೇಕು. ಹಿಜಾಬ್ ವಿವಾದ ಹುಟ್ಟಿಸಿದ್ದು ಜಮೀರ್ ಅಹ್ಮದ್, ಖಾದರ್ ಹಾಗೂ ಇತರ ದೇಶ ದ್ರೋಹಿ ಸಂಘಟನೆಗಳು. ರಾಜ್ಯದಲ್ಲಿ ಈಗಾಗಲೇ ಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದೆ. ಈ ನೆಲದ ಕಾನೂನಿಗೆ ಪ್ರತಿಯೊಬ್ಬರು ಬೆಲೆ ಕೊಡಬೇಕು. ಆದರೂ ಸದನದಲ್ಲಿ ಕಾಂಗ್ರೆಸ್ ನವರು ಹಿಜಾಬ್ ಪ್ರಸ್ತಾಪ ಮಾಡಿದ್ದಾರೆ. ಅದರ ಪರವಾಗಿ ಮಾತಾಡಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.