ಅನುಕಂಪ ಗಿಟ್ಟಿಸುವ ತಂತ್ರಗಳು ಯಾವಾಗಲೂ ಫಲ ಕೊಡುವುದಿಲ್ಲ: ಸುಮಲತಾ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯ
ಸಂಸದರಾಗಿ ಸುಮಲತಾ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ. ಬೇರೆಯವರನ್ನು ದೂರುವ ಬದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದರು.
Published: 28th March 2022 12:10 PM | Last Updated: 28th March 2022 01:23 PM | A+A A-

ಸುಮಲತಾ ಅಂಬರೀಷ್ ಮತ್ತು ನಿಖಿಲ್ ಕುಮಾರಸ್ವಾಮಿ
ಮಂಡ್ಯ: ಸಂಸದರಾಗಿ ಸುಮಲತಾ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ. ಬೇರೆಯವರನ್ನು ದೂರುವ ಬದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಮದ್ದೂರಿನಲ್ಲಿ ಮಾತನಾಡಿದ ನಿಖಿಲ್, ಬೇರೆಯವರನ್ನು ದೂರುವ ಬದಲು ಸಂಸದರು ಆತ್ಮಾವಲೋಕನ ಮಾಡಿಕೊಳ್ಳಲಿ. ಸಂಸದರಾಗಿ ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಪ್ರಶ್ನೆ ಮಾಡಿಕೊಳ್ಳಲಿ. ಮಂಡ್ಯದ ಶಾಸಕರು ಎರಡು ಮೂರು ಬಾರಿ ಆಯ್ಕೆ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಂಡ್ಯದ ಶಾಸಕರು ಮೂರ್ನಾಲ್ಕು ಬಾರಿ ಆಯ್ಕೆ ಆಗಿದ್ದಾರೆ. ಅಭಿವೃದ್ಧಿ ಆಗಿಲ್ಲ ಅಂದರೆ ಜನರು ಶಾಸಕರನ್ನು ಪ್ರಶ್ನಿಸುತ್ತಾರೆ. 2024ರವರೆಗೂ ಸಂಸದೆ ಸುಮಲತಾ ಅವರಿಗೆ ಅಧಿಕಾರ ಇದೆ. ಜನರ ಜೊತೆ ನಿಂತು ಕೆಲಸ ಮಾಡಲಿ. ಅನುಕಂಪ ಗಿಟ್ಟಿಸುವ ತಂತ್ರಗಳು ಯಾವಾಗಲೂ ಫಲ ಕೊಡುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: ಮುಂದಿನ ವಾರ ರಾಜ್ಯಕ್ಕೆ ಅಮಿತ್ ಶಾ ಭೇಟಿ, ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವ ಸಾಧ್ಯತೆ
ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯಾದರೆ ಜನರು ಶಾಸಕರನ್ನು ಹೊಣೆಯಾಗಿಸಿ ಪ್ರಶ್ನಿಸುತ್ತಾರೆ. ಸಂಸದರನ್ನು ಪ್ರಶ್ನಿಸುವುದು ಯಾರು? ಪ್ರತಿಬಾರಿ ಕಾಲು ಕೆರೆದುಕೊಂಡು ಜಗಳ ಹುಟ್ಟುಹಾಕೋದು. ಯಾರೋ ಏನೋ ಹೇಳಿದರು ಎಂದು ದೂರುವ ಮೂಲಕ ಅನುಕಂಪ ಗಿಟ್ಟಿಸಲು ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.