ಕಾಂಗ್ರೆಸ್-ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ನೀಡಲು ಎಎಪಿ ಪ್ಲಾನ್: ಆದರೆ ಅಂದುಕೊಂಡಷ್ಟು ಸುಲಭವಲ್ಲ ಕರ್ನಾಟಕ ರಾಜಕೀಯ!
ಮುಂದಿನ ವರ್ಷ ನಡೆಯಲಿರುವ ರಾಜ್ಯವಿಧಾನ ಸಭೆ ಚುನಾವಣೆಗಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಈಗಾಗಲೇ ಚುನಾವಣಾ ತಾಲೀಮು ಆರಂಭಿಸಿವೆ.
Published: 02nd May 2022 09:33 AM | Last Updated: 02nd May 2022 02:15 PM | A+A A-

ಅರವಿಂದ್ ಕೇಜ್ರಿವಾಲ್
ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ರಾಜ್ಯವಿಧಾನ ಸಭೆ ಚುನಾವಣೆಗಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಈಗಾಗಲೇ ಚುನಾವಣಾ ತಾಲೀಮು ಆರಂಭಿಸಿವೆ.
ಈ ಹಿನ್ನೆಲೆಯಲ್ಲಿ ಪಂಜಾಬ್ ಚುನಾವಣೆಯ ಅದ್ಭುತ ಯಶಸ್ಸಿನ ನಂತರ ಎಎಪಿ ಕರ್ನಾಟಕದ ಒಂದು ವರ್ಗದ ಮತದಾರರ ಗಮನ ಸೆಳೆದಿದೆ. ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಕ್ಕೆ ಬಂದ ನಂತರ ಎಎಪಿ ರಾಜ್ಯ ಮತ್ತು ಕೇಂದ್ರದತ್ತ ನಿಧಾನವಾಗಿ ಸಾಗುತ್ತಿದೆ.
2023 ರ ಚುನಾವಣೆಗೆ ಮುಂಚಿತವಾಗಿ ರಾಜಕೀಯ ಸಮೀಕರಣಗಳನ್ನು ಲೆಕ್ಕಹಾಕಲು ಪಕ್ಷಕ್ಕೆ ಕಷ್ಟವಾಗಿದ್ದರೂ, ಅರವಿಂದ್ ಕೇಜ್ರಿವಾಲ್ ಅವರ ತಂಡವು ಕರ್ನಾಟಕದಲ್ಲಿ ನೆಲೆಗೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. 1980 ರಲ್ಲಿ ರಾಜ್ಯದಲ್ಲಿ ಬಿಜೆಪಿ ಇದ್ದ ಪರಿಸ್ಥಿತಿಯಲ್ಲಿ ಇಂದು ಎಎಪಿ ಪಕ್ಷವಿದೆ.
ಇದನ್ನೂ ಓದಿ: ಸಂಕೀರ್ಣ ರಾಜಕೀಯದಲ್ಲಿ ಎಎಪಿ ಮುಂದಿರುವ ಸವಾಲು: ಕಾಂಗ್ರೆಸ್ -ಜೆಡಿಎಸ್ ಪ್ರಾಬಲ್ಯ ಹತ್ತಿಕ್ಕಲು ಬೇಕು ಪ್ಯಾನ್ ಕರ್ನಾಟಕ ಲೀಡರ್ಸ್!
ಚುನಾವಣೆಯಲ್ಲಿ ಗೆಲ್ಲಲು ಅಗತ್ಯವಾದ ನಿರ್ಣಾಯಕ ನಾಯಕರ ಕೊರತೆಯಿತ್ತು, ಆಸಮಯದಲ್ಲಿ ಸಮಾಜದ ಒಂದು ವರ್ಗ ಬಿಜೆಪಿಯನ್ನು ಬೆಂಬಲಿಸಿತ್ತು, ಆದರೆ 1990 ರಲ್ಲಿ ಎಲ್ ಕೆ ಆಡ್ವಾಣಿಯವರ ರಥಯಾತ್ರೆ ಎಲ್ಲವನ್ನು ಬದಲಾಯಿಸಿತು.
ಎಎಪಿಯ ಬೆಂಬಲಿಗರಿಗೆ, ಪಂಜಾಬ್‌ನಲ್ಲಿ ನಡೆದ ಅದ್ಭುತ ಪ್ರದರ್ಶನವು ದೆಹಲಿಯ ಹೊರಗೆ ದೊಡ್ಡ ಪಕ್ಷಗಳನ್ನು ಎದುರಿಸಲು ಆತ್ಮವಿಶ್ವಾಸ ಒದಗಿಸಿತು. ನಿವೃತ್ತ ಅಧಿಕಾರಿಗಳು ಮತ್ತು ರೈತ ಸಂಘಟನೆಗಳ ಮುಖಂಡರು ಸೇರಿದಂತೆ ಕೆಲವು ಪ್ರಮುಖ ವ್ಯಕ್ತಿಗಳ ಪ್ರವೇಶವು ಪಕ್ಷ ನೈತಿಕತೆಯನ್ನು ಹೆಚ್ಚಿಸಿದೆ.
ಆದರೆ ಅದರ ಮುಂದಿನ ಹಾದಿ ಸುಲಭವಾಗಿಲ್ಲ, ದುರ್ಗಮವಾಗಿದೆ, ಬಿಜೆಪಿಯನ್ನು ಎದುರಿಸಿ, ಕಾಂಗ್ರೆಸ್ ಜಾಗವನ್ನು ಆಕ್ರಮಿಸಿಕೊಳ್ಳಲು ಎಎಪಿ ಯತ್ನ ನಡೆಸಬೇಕಾಗಿದೆ. ಆದರೆ ಎಎಪಿ ಅಂದುಕೊಂಡಷ್ಟು ಸುಲಭವಾಗಿಲ್ಲ ಕರ್ನಾಟಕದ ರಾಜಕೀಯ, ಕಾಂಗ್ರೆಸ್ ರಾಜ್ಯದ ಕೆಲವು ಕಡೆ ಇನ್ನೂ ಭದ್ರವಾಗಿ ಬೇರೂರಿದೆ, ಕಾಂಗ್ರೆಸ್ಸೇತರ ಪ್ರದೇಶಗಳಲ್ಲಿ ಬೆಳೆಯಲು ಬಿಜೆಪಿ ಅಗಾಧ ಬೆಲೆ ತೆತ್ತಿದೆ.