ಸಂಕೀರ್ಣ ರಾಜಕೀಯದಲ್ಲಿ ಎಎಪಿ ಮುಂದಿರುವ ಸವಾಲು: ಕಾಂಗ್ರೆಸ್ -ಜೆಡಿಎಸ್ ಪ್ರಾಬಲ್ಯ ಹತ್ತಿಕ್ಕಲು ಬೇಕು ಪ್ಯಾನ್ ಕರ್ನಾಟಕ ಲೀಡರ್ಸ್!
ಕರ್ನಾಟಕದಲ್ಲಿ, ಎಎಪಿಗೆ ಮೊದಲ ಸವಾಲು ಎಂದರೆ ಉತ್ತಮ ಹೋರಾಟ ನೀಡುವ ಸಾಮರ್ಥ್ಯವಿರುವ ಅಭ್ಯರ್ಥಿಗಳು, ಪ್ಯಾನ್-ಕರ್ನಾಟಕ ಸ್ಟೇಟಸ್ ಹೊಂದಿರುವ ನಾಯಕರು.
Published: 02nd May 2022 09:46 AM | Last Updated: 02nd May 2022 02:17 PM | A+A A-

ಅರವಿಂದ್ ಕೇಜ್ರಿವಾಲ್
ಬೆಂಗಳೂರು: ಕರ್ನಾಟಕದಲ್ಲಿ, ಎಎಪಿಗೆ ಮೊದಲ ಸವಾಲು ಎಂದರೆ ಉತ್ತಮ ಹೋರಾಟ ನೀಡುವ ಸಾಮರ್ಥ್ಯವಿರುವ ಅಭ್ಯರ್ಥಿಗಳು, ಪ್ಯಾನ್-ಕರ್ನಾಟಕ ಸ್ಟೇಟಸ್ ಹೊಂದಿರುವ ನಾಯಕರು. ಇದರ ಜೊತೆಗೆ ಮತದಾರರನ್ನು ತಲುಪಲು ಬಲವಾದ ಕೇಡರ್ ನೆಟ್ವರ್ಕ್ ಕಂಡುಹಿಡಿದುಕೊಳ್ಳಬೇಕಾಗಿದೆ. ಕೇಜ್ರಿವಾಲ್ ಅವರ ದೆಹಲಿಯ ಆಡಳಿತ ಮಾದರಿಯು ಎಎಪಿಯ ಯುಎಸ್ ಪಿ ಆಗಿದೆ.
ಎಎಪಿಯ ಸಂದೇಶವನ್ನು ಕರ್ನಾಟಕದ ಕಟ್ಟಕಡೆಯ ವ್ಯಕ್ತಿಗೂ ಮನಮುಟ್ಟುವಂತೆ ತಲುಪಿಸುವುದು ರಾಜ್ಯ ರಾಜಕಾರಣದಲ್ಲಿ ಪ್ರಭಾವ ಬೀರಲು ಪ್ರಮುಖ ಅಂಶವಾಗಿದೆ. ಸಂಕೀರ್ಣ ಜಾತಿ ಸಮೀಕರಣಗಳನ್ನು ಸರಿಯಾಗಿ ಪಡೆಯುವುದು ಎಎಪಿಗೆ ನಂತರದ ಹಂತದಲ್ಲಿ ಬರಬಹುದು, ಏಕೆಂದರೆ ಕರ್ನಾಟಕದ ಪ್ರತಿಯೊಂದು ಪ್ರದೇಶವು ತನ್ನದೇ ಆದ ರಾಜಕೀಯ ಸಮಸ್ಯೆಗಳೊಂದಿಗೆ ವಿಶಿಷ್ಟವಾಗಿದೆ.
ಕರಾವಳಿ ಕರ್ನಾಟಕದ ರಾಜಕೀಯವು ಕಲ್ಯಾಣ ಕರ್ನಾಟಕದ ರಾಜಕೀಯಕ್ಕಿಂತ ಗಮನಾರ್ಹವಾಗಿ ಭಿನ್ನವಾಗಿದೆ. ಹಳೆ ಮೈಸೂರು ಭಾಗದಲ್ಲಿ ಅದರಲ್ಲೂ ವಿಶೇಷವಾಗಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಲು ಹರಸಾಹಸ ಪಡುತ್ತಿದೆ. ಈ ಜಿಲ್ಲೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಾಬಲ್ಯ ಮುಂದುವರಿದಿದೆ.
ಪ್ರಾಯೋಗಿಕವಾಗಿ ನೋಡುವುದಾದರೆ, ದೀರ್ಘಾವಧಿಯಲ್ಲಿ ಎಎಪಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲು ರಾಜ್ಯದಲ್ಲಿ ನೆಲೆಯೂರಲು ಅವಕಾಶವಿದೆ. ಭ್ರಷ್ಟಾಚಾರವು ಪ್ರಮುಖ ಸಮಸ್ಯೆಯಾಗಿರುವುದರಿಂದ, ದೊಡ್ಡ ಪಕ್ಷಗಳು ವಿಧಾನಸಭೆ ಚುನಾವಣೆಗೆ ತಮ್ಮ ಕಾರ್ಯತಂತ್ರಗಳನ್ನು ಸಿದ್ಧಪಡಿಸುವಾಗ ಎಎಪಿಯನ್ನು ಒಪ್ಪಿಕೊಳ್ಳಲು ಅನಿವಾರ್ಯವಾಗುತ್ತದೆ.
ಎಎಪಿ ಈಗಾಗಲೇ ಯುವ ನಗರ ಮತದಾರರಿಗೆ, ಅದರಲ್ಲೂ ವಿಶೇಷವಾಗಿ ಬಿಜೆಪಿ ಮತ್ತು ಕಾಂಗ್ರೆಸ್ನಿಂದ ನಿರಾಶೆಗೊಂಡವರಿಗೆ ಮನವಿ ಮಾಡುತ್ತಿದೆ. ಬೆಂಗಳೂರಿನ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಾದರೂ ಅದರ ಪ್ರಭಾವದ ಬಗ್ಗೆ ಆಡಳಿತ ಪಕ್ಷವು ಎಚ್ಚರದಿಂದಿರುತ್ತದೆ.
ಇದನ್ನೂ ಓದಿ: ಕಾಂಗ್ರೆಸ್-ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ನೀಡಲು ಎಎಪಿ ಪ್ಲಾನ್: ಆದರೆ ಅಂದುಕೊಂಡಷ್ಟು ಸುಲಭವಲ್ಲ ಕರ್ನಾಟಕ ರಾಜಕೀಯ!
ಎಪಿಯ ರಾಜ್ಯ ರಾಜಕೀಯಕ್ಕೆ ಬರುವುದರಿಂದ ಬಿಜೆಪಿ ವಿರೋಧಿ ಮತಗಳಲ್ಲಿ ಸಂಭವನೀಯ ವಿಭಜನೆಯ ಬಗ್ಗೆ ಕಾಂಗ್ರೆಸ್ಗೆ ಚಿಂತೆ ಮಾಡುತ್ತದೆ. ಮತ್ತು ಎಎಪಿಯನ್ನು ಬೆಂಬಲಿಸುವ ರೈತ ಸಂಘಟನೆಗಳು ಜೆಡಿಎಸ್ಗೆ ಸ್ವಲ್ಪ ಮಟ್ಟಿಗೆ ಹೊಡೆತ ನೀಡುವ ಸಾಧ್ಯತೆಯಿದೆ.
ಆದರೆ ಬಹಳಷ್ಟು ಅಭ್ಯರ್ಥಿಗಳು, ಮತದಾರರೊಂದಿಗಿನ ಒಡನಾಟ ಹಾಗೂ ಸ್ಥಳೀಯ ಸಮಸ್ಯೆಗಳ ಮೇಲೆ ಅವಲಂಬಿತವಾಗಿದೆ. ತಮ್ಮ ವೃತ್ತಿಗಳಲ್ಲಿ ಪ್ರಭಾವಶಾಲಿ ದಾಖಲೆ ಹೊಂದಿರುವ ಪ್ರಮುಖ ವ್ಯಕ್ತಿಗಳನ್ನು ಹೊಂದಿದ್ದರೂ, ಕರ್ನಾಟಕದಲ್ಲಿ ಹಿಂದಿನ ಚುನಾವಣೆಗಳಲ್ಲಿ ಎಎಪಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ವಿಫಲವಾಗಿತ್ತು.
ಆದರೆ ಕಳೆದ ಕೆಲವು ವರ್ಷಗಳಿಂದ ಸತತವಾಗಿ ಗ್ರೌಂಡ್ ವರ್ಕ್ ಮಾಡಿದ ನಂತರ, ಎಎಪಿ ಕೆಲವು ಭರವಸೆಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ. 2023 ರ ಚುನಾವಣೆಗೆ ಈಗಾಗಲೇ ಗೆಲ್ಲಬಲ್ಲ, ಸ್ವಚ್ಛ-ಚಿತ್ರಣ ಹೊಂದಿರುವ ಅಭ್ಯರ್ಥಿಗಳ ಹುಡುಕಾಟ ಆರಂಭವಾಗಿದೆ.
ಅಭಿವೃದ್ಧಿ, ಕೋಮು ಸಮಸ್ಯೆಗಳು ಮತ್ತು ಭ್ರಷ್ಟಾಚಾರದ ಸುತ್ತ ಸದ್ಯರಾಜಕೀಯ ಚರ್ಚೆಗಳು ನಡೆಯುತ್ತಿವೆ. ಎಎಪಿಯನ್ನು ಬೆಂಬಲಿಸುತ್ತಿರುವ ಒಂದು ವರ್ಗ ಚುನಾವಣಾ ಸಮಯದಲ್ಲಿ ತಮ್ಮ ಬೆಂಬಲವನ್ನು ಪಕ್ಷಕ್ಕೆ ಮತಗಳಾಗಿ ಪರಿವರ್ತಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.