ರಮೇಶ್ ಜಾರಕಿಹೊಳಿ 600 ಕೋಟಿ ರೂ. ಹಗರಣದಲ್ಲಿ ಭಾಗಿಯಾಗಿದ್ದಾರೆ: ಕಾಂಗ್ರೆಸ್ ಆರೋಪ

ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರೂ.600 ಕೋಟಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಮಂಗಳವಾರ ಆರೋಪಿಸಿದ್ದಾರೆ.

Published: 04th May 2022 08:21 AM  |   Last Updated: 04th May 2022 01:00 PM   |  A+A-


ramesh jarkiholi

ರಮೇಶ್ ಜಾರಕಿಹೊಳಿ

The New Indian Express

ಮೈಸೂರು: ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರೂ.600 ಕೋಟಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಂಗಳವಾರ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೌಭಾಗ್ಯಲಕ್ಷ್ಮಿ ಶುಗರ್ಸ್ ಲಿಮಿಟೆಡ್ ನಡೆಸುತ್ತಿರುವ ಜಾರಕಿಹೊಳಿ ಅವರು 15 ಅಪೆಕ್ಸ್ ಬ್ಯಾಂಕ್‌ಗಳಿಂದ 366 ಕೋಟಿ ರೂ., ಯೂನಿಯನ್ ಬ್ಯಾಂಕ್ ಮತ್ತು ಹರಿಯನ್ ಕೋಆಪರೇಟಿವ್ ಸೊಸೈಟಿಯಿಂದ ತಲಾ 20 ಕೋಟಿ ರೂ. ಸಾಲ ಪಡೆದುಕೊಂದಿದ್ದಾರೆ. ಸಾಲ ಪಡೆದಿರುವ ಅವರು, ಒಂದು ಪೈಸೆ ಸಾಲವನ್ನು ಮರುಪಾವತಿ ಮಾಡಿಲ್ಲ. ಏಪ್ರಿಲ್ 2017 ರಲ್ಲಿ ಕಂಪನಿಯನ್ನು ಅನುತ್ಪಾದಕ ಆಸ್ತಿ (NPA) ಎಂದು ಘೋಷಿಸಲಾಯಿತು. ಕಂಪನಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನೋಟಿಸ್ ಜಾರಿ ಮಾಡಲಾಗಿತ್ತು, ಆದರೆ ಜಾರಕಿಹೊಳಿ ಧಾರವಾಡ ನ್ಯಾಯಾಲಯದ ಮೊರೆ ಹೋಗಿದ್ದರು. 2019 ರಲ್ಲಿ ಮಧ್ಯಂತರ ಆದೇಶವನ್ನು ನೀಡುವಾಗ ಸಾಲದ ಮೊತ್ತದ ಶೇಕಡಾ 50 ರಷ್ಟು ಮೊತ್ತವನ್ನು ಆರು ವಾರಗಳಲ್ಲಿ ಪಾವತಿಸಲು ನ್ಯಾಯಾಲಯವು ಅವರಿಗೆ ಸೂಚಿಸಿತು ಎಂದು ಹೇಳಿದ್ದಾರೆ.

ಸೌಭಾಗ್ಯಲಕ್ಷ್ಮಿ ಶುಗರ್ಸ್ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಬೆಳ್ಳಿ ಪ್ರಕಾಶ್ ಅವರು ಬೆಳಗಾವಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಜಾರಕಿಹೊಳಿ ಮತ್ತು ಕತ್ತಿ ಕುಟುಂಬವನ್ನು ಬೆಳಗಾವಿ ರಾಜಕೀಯದಿಂದ ಹೊರಗಿಡಲು ಬಿಜೆಪಿ ಮೆಗಾ ಪ್ಲಾನ್!

ಜಾರಕಿಹೊಳಿ ಅವರ ನಿಕಟವರ್ತಿಯಾದ ಅಭಿನಂದನ್ ಪಾಟೀಲ್ ನಡೆಸುತ್ತಿರುವ ಹರಿಯನ್ ಸಹಕಾರಿ ಸೊಸೈಟಿಯು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಅನ್ನು ಸಂಪರ್ಕಿಸಿದೆ ಮತ್ತು ಕಂಪನಿಯನ್ನು ಹರಾಜು ಮಾಡಲು ದಿವಾಳಿತನ ಪರಿಹಾರ ಪ್ರಕ್ರಿಯೆ (ಐಆರ್‌ಸಿ) ಆದೇಶವನ್ನು ಪಡೆದುಕೊಂಡಿದೆ.

“1,000 ಎಕರೆಗೂ ಹೆಚ್ಚು ಭೂಮಿಯನ್ನು ಹೊಂದಿರುವ ಕಂಪನಿಯು ಆಸ್ತಿಯನ್ನು ಕಡಿಮೆ ಮೌಲ್ಯಮಾಪನ ಮಾಡಿದೆ, ಆದರೆ ಅದರ ಮೌಲ್ಯವು 850 ಕೋಟಿ ರೂ. ಆಗಿದೆ. 610 ಕೋಟಿ ರೂ.ಗಳ ವ್ಯವಸ್ಥಿತ ಹಗರಣ ಇದಾಗಿದೆ. ಜಾರಕಿಹೊಳಿ ಉದ್ದೇಶಪೂರ್ವಕ ಸುಸ್ತಿದಾರನಾಗಿದ್ದಾರೆ. ಆದರೆ ಇನ್ನೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

ಬಿಜೆಪಿ ನಾಯಕರ ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸಲು ಕಾಂಗ್ರೆಸ್ ಎಲ್ಲಾ ಜಿಲ್ಲೆಗಳಲ್ಲಿ ಪತ್ರಿಕಾಗೋಷ್ಠಿ ಮತ್ತು ಪ್ರತಿಭಟನೆಗಳನ್ನು ನಡೆಸುವ ಮೂಲಕ ಜನರನ್ನು ಜಾಗೃತಗೊಳಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.


Stay up to date on all the latest ರಾಜಕೀಯ news

ಇತ್ತೀಚಿನ ಸುದ್ದಿ

ರಾಜ್ಯ ವಿಧಾನಸಭೆ ಚುನಾವಣಾ ವಿಶ್ಲೇಷಣೆ: ಕಾಂಗ್ರೆಸ್ ಪಕ್ಷಕ್ಕೆ 55-60 ಸ್ಥಾನ ಖಚಿತ; ಬಿಜೆಪಿ 70-75 ಕ್ಷೇತ್ರ ಗೆಲ್ಲಲು ಶಕ್ತ; 15-20ಕ್ಕೆ ಜೆಡಿಎಸ್ ತೃಪ್ತ!

ಹುಣಸೂರು, ಚಾಮುಂಡೇಶ್ವರಿ, ಮದ್ದೂರಿನಲ್ಲಿ ಹರಿಯುತ್ತಿದೆ ಹಣದ ಮಹಾಪೂರ: 'ಉಚಿತ'ಗಳ ಆಫರ್ ಭರಪೂರ; ಟಿಕೆಟ್ ಆಕಾಂಕ್ಷಿಗಳಿಂದ ತೀರ್ಥಯಾತ್ರೆ!

'ಮಾಂಡೌಸ್' ಚಂಡಮಾರುತ ಎಫೆಕ್ಟ್: ಚೆನ್ನೈ ಸೇರಿದಂತೆ ತಮಿಳು ನಾಡಿನ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ, ಪ್ರಕೃತಿ ವಿಕೋಪ: ಬೆಂಗಳೂರಿಗರು ಚಳಿಗೆ ಗಡ-ಗಡ

ರಾಜ್ಯ ವಿಧಾನಸಭೆ ಚುನಾವಣೆಗೆ ಗುಜರಾತ್ ಮಾದರಿಯಲ್ಲಿ ವಾರ್ ರೂಮ್: ಬಂಡಾಯ ನಾಯಕರನ್ನು ಹತ್ತಿಕ್ಕಲು ಬಿಜೆಪಿ ರಣತಂತ್ರ!

ಮಗು ಹುಟ್ಟುವುದಕ್ಕು ಮುನ್ನ ದತ್ತು ಒಪ್ಪಂದಕ್ಕೆ ಕಾನೂನಿನಲ್ಲಿ ಮಾನ್ಯತೆಯಿಲ್ಲ: ಮುಸ್ಲಿಂ ದಂಪತಿಯಿಂದ ಹಿಂದೂ ಮಗುವಿನ ದತ್ತು ರದ್ದುಗೊಳಿಸಿದ ಹೈಕೋರ್ಟ್

Poll
Parliament

2024 ರ ಚುನಾವಣೆಯಲ್ಲಿ ಬಿಜೆಪಿಗೆ ಪ್ರಮುಖ ವಿರೋಧ ಪಕ್ಷ ಯಾವುದು ಎಂದು ನೀವು ಭಾವಿಸುತ್ತೀರಿ?


Result
ಕಾಂಗ್ರೆಸ್
ಎಎಪಿ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp