ದಾಖಲೆ ಇಲ್ಲದೆ ಮೋದಿ ಆರೋಪ ಮಾಡಿದ್ರೂ ತಪ್ಪು: ಸಚಿವ ಮುನಿರತ್ನ
ಕೆಲವು ದಿನಗಳಿಂದ ಪಿಎಸ್ ಐ ಪರೀಕ್ಷೆಗೆ ಸಂಬಂಧಿಸಿಂದ ಕಾಂಗ್ರೆಸ್ ಪಕ್ಷದ ನಾಯಕರು ಯಾವುದೇ ಆಧಾರ ಇಲ್ಲದ ಆರೋಪ ಮಾಡ್ತಿದ್ದಾರೆ. ಅನುಭವ ಇಲ್ಲದ ನಾಯಕರು ಆರೋಪ ಮಾಡಿದ್ರೆ ಓಕೆ. ಮುಖ್ಯಮಂತ್ರಿ ಆಗಿದ್ದವರು...
Published: 05th May 2022 03:21 PM | Last Updated: 05th May 2022 03:21 PM | A+A A-

ಮುನಿರತ್ನ
ಬೆಂಗಳೂರು: ಕೆಲವು ದಿನಗಳಿಂದ ಪಿಎಸ್ ಐ ಪರೀಕ್ಷೆಗೆ ಸಂಬಂಧಿಸಿಂದ ಕಾಂಗ್ರೆಸ್ ಪಕ್ಷದ ನಾಯಕರು ಯಾವುದೇ ಆಧಾರ ಇಲ್ಲದ ಆರೋಪ ಮಾಡ್ತಿದ್ದಾರೆ. ಅನುಭವ ಇಲ್ಲದ ನಾಯಕರು ಆರೋಪ ಮಾಡಿದ್ರೆ ಓಕೆ. ಮುಖ್ಯಮಂತ್ರಿ ಆಗಿದ್ದವರು, ಹಲವು ಬಾರಿ ಬಜೆಟ್ ಮಂಡಣೆ ಮಾಡಿದವರು ಆಧಾರರಹಿತ ಆರೋಪ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಮುನಿರತ್ನ ಅವರು ಗುರುವಾರ ಕಿಡಿಕಾರಿದ್ದಾರೆ.
ಇಂದು ವಿಕಾಸಸೌಧದಲ್ಲಿ ಮಾತನಾಡಿದ ಸಚಿವ ಮುನಿರತ್ನ, ಸಿದ್ದರಾಮಯ್ಯ ಅವರು ದಾಖಲೆ ನಂತರ ಕೊಡುವೆ ಎಂದು ಹೇಳುವ ಮೂಲಕ ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ದಯವಿಟ್ಟು ದಾಖಲೆ ಬಿಡುಗಡೆ ಮಾಡಿ, ದಾಖಲೆ ಇಲ್ಲದ ಆರೋಪ ದೇವರೂ ಒಪ್ಪಲ್ಲ. ದಾಖಲೆ ಇಲ್ಲದೆ ಯಾರೇ ಮಾತಾಡಿದ್ರೂ ತಪ್ಪು, ಮೋದಿ ಆರೋಪ ಮಾಡಿದ್ರೂ ತಪ್ಪು ಎಂದು ಹೇಳಿದರು.
ಇದನ್ನು ಓದಿ: ಕಾಂಗ್ರೆಸ್ ನಾಯಕರು ಸಚಿವ ಅಶ್ವಥ್ ನಾರಾಯಣ ವಿರುದ್ಧ ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ, ಅವರ ಆರೋಪಕ್ಕೆ ಕಿಂಚಿತ್ತು ಬೆಲೆ ಇಲ್ಲ: ಸಿಎಂ ಬೊಮ್ಮಾಯಿ
ಸಚಿವ ಅಶ್ವಥ್ ನಾರಾಯಣ್ ವಿರುದ್ಧ ವಿನಾಕಾರಣ ಆರೋಪ ಮಾಡಬೇಡಿ ಎಂದ ಮುನಿರತ್ನ, ಇದಕ್ಕೆ ರಾಮನಗರದ ಕಾರ್ಯಕ್ರಮವೇ ಕಾರಣ. ಅಲ್ಲಿಂದಲೇ ಅಶ್ವಥನಾರಾಯಣ್ ಮೇಲೆ ಸೇಡು ಶುರು ಆಯ್ತು. ಇದೆಲ್ಲ ಹೇಗೆ ಗೊತ್ತು ಅಂದ್ರೆ, ನಾವೂ ಅಲ್ಲೇ (ಕಾಂಗ್ರೆಸ್) ಇದ್ವಲ್ವ. ಜೋರು ಮಾತಾಡಿದ್ರೆ, ಅಲ್ಲೇ 10 ಜನ ರೆಡಿ ಮಾಡ್ತಾರೆ ಎಂದು ಹೇಳಿದರು.
ಚುನಾವಣೆ ಹತ್ತಿರ ಇದೆ, 8 ಸರ್ವೇ ಮಾಡಿದ್ದಾರೆ. ಎಲ್ಲಾ ಸರ್ವೆಯಲ್ಲೂ ಬಿಜೆಪಿ ಮುಂದಿದೆ. ಹೇಗಾದರೂ ಮಾಡಿ, ಸುಳ್ಳು ಆರೋಪ ಮಾಡಲು ಮುಂದಾಗಿದ್ದಾರೆ. ಬೈರತಿ ಸೇರಿದಂತೆ ಇತರರ ಮೇಲೆ ಸುಳ್ಳು ಆರೋಪ ಮಾಡ್ತಿದ್ದಾರೆ. ಬಿಜೆಪಿ ಮೇಲೆ ಸುಳ್ಳು ಆರೋಪ ಮಾಡ್ತಿದ್ದಾರೆ. ಸಂಪೂರ್ಣ ತನಿಖೆಗೆ ಸರ್ಕಾರ ಬದ್ದವಿದೆ ಆದರೂ, ಊಹಾಪೋಹದ ಹೇಳಿಕೆಗಳು ಎದ್ದಿವೆ ಎಂದರು.