ಬಿಜೆಪಿಗೆ ಮ್ಯಾಜಿಕ್ ನಂಬರ್ ಕೊಡಲು ಹಳೇ ಮೈಸೂರು ಭಾಗ ವೀಕ್: ಒಕ್ಕಲಿಗರ ಭದ್ರ ಕೋಟೆಯಲ್ಲಿ 'ಕಮಲ' ಅರಳಿಸಲು ನಾಯಕರ 'ಯಾಗ'!

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಯುವ ನಾಯಕರನ್ನ ಪಕ್ಷಕ್ಕೆ ಸೆಳೆಯುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಬಾರಿ ಶತಾಯಗತಾಯವಾಗಿ ಅಧಿಕಾರಕ್ಕೇರಬೇಕೆಂದು ಇನ್ನಿಲ್ಲದ ಕಸರತ್ತು ನಡೆಸಿದೆ. ಅದಕ್ಕಾಗಿ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಬಿಜೆಪಿ ಮುಂದಾಗಿದೆ.

Published: 07th May 2022 09:50 AM  |   Last Updated: 07th May 2022 02:31 PM   |  A+A-


Basavaraja bommai with sm krishna

ಎಸ್ ಕೃಷ್ಣ ಜೊತೆ ಬಸವರಾಜ ಬೊಮ್ಮಾಯಿ

The New Indian Express

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆಗಲೇ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಯುವ ನಾಯಕರನ್ನ ಪಕ್ಷಕ್ಕೆ ಸೆಳೆಯುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಬಾರಿ ಶತಾಯಗತಾಯವಾಗಿ ಅಧಿಕಾರಕ್ಕೇರಬೇಕೆಂದು ಇನ್ನಿಲ್ಲದ ಕಸರತ್ತು ನಡೆಸಿದೆ. ಅದಕ್ಕಾಗಿ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಬಿಜೆಪಿ ಮುಂದಾಗಿದೆ.

ಇದುವರೆಗೂ ಕರ್ನಾಟಕದಲ್ಲಿ ಬಿಜೆಪಿ ಒಂದು ಬಾರಿಯೂ ಬಹಮತ ಗಳಿಸಲಿಲ್ಲ, 2008 ರಲ್ಲಿ 108 ಮತ್ತು 2018 ರಲ್ಲಿ 104 ಸ್ಥಾನಗಳನ್ನು ಪಡೆದುಕೊಂಡಿದೆ , ಬಿಜೆಪಿಗೆ 113 ರ ಮ್ಯಾಜಿಕ್ ಸಂಖ್ಯೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ, ಕಾರಣವೆಂದರೆ ಹಳೆಯ ಮೈಸೂರಿನಲ್ಲಿ ಬಿಜೆಪಿ ವೀಕ್ ಆಗಿದೆ. ಒಕ್ಕಲಿಗರ ಹೃದಯಭಾಗದಲ್ಲಿ ಪಕ್ಷಕ್ಕೆ ಬೆಂಬಲ ಬೇಕು ಎಂಬುದನ್ನು ಮನಗಂಡಿರುವ ಪಕ್ಷ,  ತನ್ನ ಹೆಜ್ಜೆಗುರುತು ವಿಸ್ತರಿಸಲು ಹವಣಿಸುತ್ತಿದೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣರನ್ನು ಭೇಟಿ ಮಾಡಿ ಸೌಹಾರ್ದಯುತವಾಗಿ ಮಾತುಕತೆ ನಡೆಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಮಂಡ್ಯದಲ್ಲಿ ಸಮಾವೇಶ ನಡೆಸುವ ಬಗ್ಗೆ ಹಿರಿಯ ಮುತ್ಸದ್ದಿ ಎಸ್ ಎಂ ಕೃಷ್ಣ ಅವರ ಜೊತೆ ಚರ್ಚಿಸಿರುವುದಾಗಿ ತಿಳಿದು ಬಂದಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್‌ ಪ್ರಭಾವಿ ಕ್ಷೇತ್ರಗಳಲ್ಲಿ ಬಿಜೆಪಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕೇಂದ್ರ ನಾಯಕತ್ವದೊಂದಿಗೂ ಚರ್ಚಿಸಿದೆ. ರಾಜ್ಯದ ಎಲ್ಲಾ ಭಾಗದಿಂದಲೂ ಬಹಳ ಜನ ಬಿಜೆಪಿಗೆ ಬರುತ್ತಿದ್ದಾರೆ. ವಿಶೇಷವಾಗಿ ಕೋಲಾರ, ಮಂಡ್ಯದಿಂದ ಹೆಚ್ವು ಜನ ಬರುತ್ತಿದ್ದಾರೆ. ಹಂತಹಂತವಾಗಿ ಸೇರ್ಪಡೆ ಮಾಡುವ ಕೆಲಸವಾಗುತ್ತಿದೆ. ಬಹಳ ದೊಡ್ಡ ಪ್ರಮಾಣದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಸಾರ್ವಜನಿಕರು ಹಾಗೂ ವಿಶೇಷವಾಗಿ ಯುವಕರು ಪಕ್ಷಕ್ಕೆ ಬರಲು ಒಲವು ತೋರುತ್ತಿದ್ದಾರೆ ಎಂದರು. "ಮಂಡ್ಯ ಜಿಲ್ಲೆಯಲ್ಲಿ ಹೊಸ ಯುವ ನಾಯಕತ್ವ ಹೊರಹೊಮ್ಮುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಬಿಜೆಪಿಯ ಪರವಾಗಿ ಮಂಡ್ಯದಲ್ಲಿ ಬಹಳ ದೊಡ್ಡ ಶಕ್ತಿಯ ಅಲೆ ಕಾಣುತ್ತಿದೆ" ಎಂದು ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನ ಓದಿ: ಸಂಪುಟ ಪುನಾರಚನೆ ಸರ್ಕಸ್: ಪ್ರಧಾನಿ ಮೋದಿ ಆಗಮನದ ನಂತರ ರಾಜ್ಯ ಬಿಜೆಪಿಯಲ್ಲಿ ಬದಲಾವಣೆಯ ಮಹಾಪರ್ವ!

"ಎಸ್.ಟಿ. ಜಯರಾಂ ಮಾತ್ರ ಅಲ್ಲದೆ ಯಾರು ನಮ್ಮ ಪಕ್ಷದ ಬಗ್ಗೆ ಹಾಗೂ ಪಕ್ಷದ ವಿಚಾರಗಳ ಬಗ್ಗೆ ಒಲವು ತೋರಿಸಿದ್ದಾರೆಯೋ ಅವರೆಲ್ಲ ಬಳಿ ಮಾತನಾಡಲಾಗುವುದು" ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಹಳೇಯ ಮೈಸೂರು ಭಾಗದಲ್ಲಿ ಪಕ್ಷದ ಪ್ರಭಾವ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ತುಮಕೂರಿನ ಸಿರಾದಲ್ಲಿ ಒಕ್ಕಲಿಗ (ಕುಂಚಟಿಗ) ಮುಖಂಡ ರಾಜೇಶ್ ಗೌಡ,  ಡಾ.ಕೆ.ಸುಧಾಕರ್ (ಚಿಕ್ಕಬಳ್ಳಾಪುರ), ಕೆ.ಗೋಪಾಲಯ್ಯ (ಮಹಾಲಕ್ಷ್ಮಿ) ಮತ್ತು ಎಸ್.ಟಿ.ಸೋಮಶೇಖರ್ (ದಾಸರಹಳ್ಳಿ) ಅವರ ಜತೆಗೆ ಪಕ್ಷದ ಹಿರಿಯ ಮುಖಂಡರಾದ ಆರ್.ಅಶೋಕ, ಸಿ.ಟಿ.ರವಿ, ಶೋಭಾ ಕರಂದ್ಲಾಜೆ ಮತ್ತು ಸದಾನಂದ ಗೌಡ, ಸೇರಿ ಹಳೇ ಮೈಸೂರಿನಲ್ಲಿ ಹೆಚ್ಚಿನ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.


Stay up to date on all the latest ರಾಜಕೀಯ news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp