ವಿಧಾನಸಭೆ ಚುನಾವಣೆ 2023: ಬಿಜೆಪಿಗೆ ಸವಾಲು- ಸಮಸ್ಯೆಯ ಕಗ್ಗಂಟಾಗಿರುವ ಸಂಪುಟ ವಿಸ್ತರಣೆ
ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಅದಕ್ಕೂ ಮುನ್ನ ಸದ್ಯದಲ್ಲಿಯೇ ಬಿಜೆಪಿಯಲ್ಲಿ, ರಾಜ್ಯ ಸಚಿವ ಸಂಪುಟದಲ್ಲಿ ಸಾಕಷ್ಟು ಬದಲಾವಣೆಯ ಮಾತುಗಳು, ಗುಸುಗುಸು ಕೇಳಿಬರುತ್ತಿದೆ. ಈ ಮಧ್ಯೆ ರಾಜ್ಯ ಸರ್ಕಾರ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು, ಹಿಂದು-ಮುಸ್ಲಿಂ ಧರ್ಮ ಸಂಘರ್ಷವನ್ನು ಸಾಕಷ್ಟು ಎದುರಿಸುತ್ತಿದೆ.
Published: 09th May 2022 01:23 PM | Last Updated: 09th May 2022 02:29 PM | A+A A-

ಸಾಂಕೇತಿಕ ಚಿತ್ರ
ಬೆಂಗಳೂರು: ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಅದಕ್ಕೂ ಮುನ್ನ ಸದ್ಯದಲ್ಲಿಯೇ ಬಿಜೆಪಿಯಲ್ಲಿ, ರಾಜ್ಯ ಸಚಿವ ಸಂಪುಟದಲ್ಲಿ ಸಾಕಷ್ಟು ಬದಲಾವಣೆಯ ಮಾತುಗಳು, ಗುಸುಗುಸು ಕೇಳಿಬರುತ್ತಿದೆ. ಈ ಮಧ್ಯೆ ರಾಜ್ಯ ಸರ್ಕಾರ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು, ಹಿಂದು-ಮುಸ್ಲಿಂ ಧರ್ಮ ಸಂಘರ್ಷವನ್ನು ಸಾಕಷ್ಟು ಎದುರಿಸುತ್ತಿದೆ.
ಸರ್ಕಾರದ ಆಡಳಿತದಲ್ಲಿ ಬದಲಾವಣೆ ತರಲು ಬಿಜೆಪಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾತರರಾಗಿದ್ದು ಹೊಸ ಮುಖಗಳಿಗೆ ಮಣೆ ಹಾಕಿ ಹಿರಿಯ ನಾಯಕರ ಅನುಭವಗಳನ್ನು ಆಡಳಿತದಲ್ಲಿ ಬಳಸಿಕೊಂಡು ಮುಂದಿನ ವರ್ಷ ಚುನಾವಣೆಗೆ ಸಿದ್ಧವಾಗಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಪಕ್ಷದಲ್ಲಿ ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದರಿಂದ ಯಾರಿಗೆ ಪ್ರಾಧಾನ್ಯತೆ ನೀಡುವುದು, ಬಿಡುವುದು ಎಂಬುದು ಚಿಂತೆಯಾಗಿದೆ. ಸಂದಿಗ್ಧ ಸ್ಥಿತಿಯಲ್ಲಿ, ಗೊಂದಲದಲ್ಲಿ ಬಿಜೆಪಿ ನಾಯಕರಿದ್ದಾರೆ. ಈ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಹಲವು ಹಿರಿಯ ತಲೆಗಳನ್ನು ಕೈಬಿಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: 2023ರ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ: ಬಿಜೆಪಿ ತೆಕ್ಕೆಗೆ ಕಾಂಗ್ರೆಸ್-ಜೆಡಿಎಸ್ ಪ್ರಮುಖ ನಾಯಕರು!
ಸಿಎಂ ಮತ್ತು ಬಿಜೆಪಿ ಪಕ್ಷವು ಎಲ್ಲಾ ಸಮುದಾಯಗಳು ಮತ್ತು ಪ್ರದೇಶಗಳಿಗೆ ಸೂಕ್ತ ಪ್ರಾತಿನಿಧ್ಯವನ್ನು ನೀಡಲು ನೋಡುತ್ತಿದ್ದಾರೆ. ಸಚಿವ ಸಂಪುಟದಲ್ಲಿ ಯುವಕರು ಮತ್ತು ಅನುಭವದ ಸರಿಯಾದ ಬೆರೆತವಾಗಬೇಕು ಎಂದು ನೋಡುತ್ತಿದ್ದಾರೆ. ಬೊಮ್ಮಾಯಿ ಅವರು ಬಜೆಟ್ನಲ್ಲಿ ಘೋಷಿಸಿದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಪಕ್ಷ ಮತ್ತು ಸರ್ಕಾರದ ನಡುವೆ ಸರಿಯಾದ ಸಮನ್ವಯವನ್ನು ಸಾಧಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಜನರ ಬಳಿಗೆ ಕೊಂಡೊಯ್ಯಲು ಉತ್ಸುಕರಾಗಿದ್ದಾರೆ.
ಬದಲಾವಣೆಗೆ ಮುಂದಾಗಲು ಹೈಕಮಾಂಡ್ ಒಪ್ಪಿಗೆಗಾಗಿ ಸಿಎಂ ಕಾಯುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪ್ರಸ್ತುತ, ಸಂಪುಟದಲ್ಲಿ ಐದು ಸ್ಥಾನಗಳು ಖಾಲಿ ಇವೆ, ಆದರೆ ಪ್ರಮುಖ ಬದಲಾವಣೆಗಳನ್ನು ಮಾಡಲು ಯೋಜನೆ ಇದ್ದು ಸಂಪುಟ ವಿಸ್ತರಣೆಗೆ ಹೋಗುವ ಸಾಧ್ಯತೆ ಕಡಿಮೆ. ಸಿಎಂ ಮತ್ತು ಕೇಂದ್ರ ನಾಯಕರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸುತ್ತವೆ.
ಇದನ್ನೂ ಓದಿ: ಬಿಜೆಪಿಗೆ ಮ್ಯಾಜಿಕ್ ನಂಬರ್ ಕೊಡಲು ಹಳೇ ಮೈಸೂರು ಭಾಗ ವೀಕ್: ಒಕ್ಕಲಿಗರ ಭದ್ರ ಕೋಟೆಯಲ್ಲಿ 'ಕಮಲ' ಅರಳಿಸಲು ನಾಯಕರ 'ಯಾಗ'!
ಸಿಎಂ ಮತ್ತು ಬಿಜೆಪಿ ಎದುರಿಸುತ್ತಿರುವ ಸೂಕ್ಷ್ಮ ಪರಿಸ್ಥಿತಿಯನ್ನು ವಿವರಿಸಿದ ರಾಜಕೀಯ ವಿಶ್ಲೇಷಕ ಪ್ರೊ.ಸಂದೀಪ್ ಶಾಸ್ತ್ರಿ, ಈ ಬಾರಿ ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್ ಗೆ ಸವಾಲಾಗಿದೆ. ಹಲವು ಆಕಾಂಕ್ಷಿಗಳಿರುವಾಗ ಸಚಿವ ಸ್ಥಾನ ಸಿಗದಿರುವವರು ಅಸಮಾಧಾನಗೊಳ್ಳಬಹುದು ಎನ್ನುತ್ತಾರೆ.
ಚುನಾವಣೆಗಿಂತ ಮೊದಲು ಆಡಳಿತವನ್ನು ಸರಿದಾರಿಗೆ ತರುವುದು, ಸರ್ಕಾರ ಮತ್ತು ಪಕ್ಷದಲ್ಲಿ ಎಲ್ಲರನ್ನೂ ತೃಪ್ತಿಪಡಿಸುವುದು ಸುಲಭದ ಕೆಲಸವಲ್ಲ, ಅದರಲ್ಲೂ ವಿಶೇಷವಾಗಿ ಮಂಡಳಿಗಳು ಮತ್ತು ನಿಗಮಗಳಿಗೆ ನೇಮಕಾತಿಗಳನ್ನು ಮಾಡಲು ಸರ್ಕಾರವು ಬಹಳ ಸಮಯ ತೆಗೆದುಕೊಳ್ಳುತ್ತಿದೆ. ಈ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ತಾಲೂಕು ಮಟ್ಟದ ವಿವಿಧ ಹುದ್ದೆಗಳಿಗೆ 4,800ಕ್ಕೂ ಹೆಚ್ಚು ಮಂದಿ ನೇಮಕಗೊಂಡಿದ್ದು, ರಾಜ್ಯ ಮಟ್ಟದ ನೇಮಕಾತಿ ಶೀಘ್ರ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.