'ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತಲ್ಲೋ- ಅಸಹಾಯಕ ಡಿಕೆಶಿ: ಬಿಜೆಪಿ ವ್ಯಂಗ್ಯ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಂಸದೆ ರಮ್ಯಾ ತಿರುಗಿಬಿದ್ದಿರುವುದಕ್ಕೆ ಬಿಜೆಪಿ ಸರಣಿ ಟ್ವೀಟ್ ಮೂಲಕ ಅಪಹಾಸ್ಯ ಮಾಡಿದೆ.
Published: 13th May 2022 09:52 AM | Last Updated: 13th May 2022 10:37 AM | A+A A-

ರಮ್ಯಾ, ಡಿಕೆ ಶಿವಕುಮಾರ್
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಂಸದೆ ರಮ್ಯಾ ತಿರುಗಿಬಿದ್ದಿರುವುದಕ್ಕೆ ಬಿಜೆಪಿ ಸರಣಿ ಟ್ವೀಟ್ ಮೂಲಕ ಅಪಹಾಸ್ಯ ಮಾಡಿದೆ.
ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತಲ್ಲೋ' ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ ಅಸಹಾಯಕ ಸ್ಥಿತಿ ತಲುಪಿದ್ದಾರೆ. ಅವರೇ ಬೆಳೆಸಿದ ರಮ್ಯಾ ಈಗ ಸಾಮಾಜಿಕ ಮಾಧ್ಯಮದ ಮೂಲಕ ಬುದ್ದಿ ಹೇಳುತ್ತಿದ್ದಾರೆ ಎಂದಿದೆ. ಇದರ ಹಿಂದೆ ಮೀರ್ ಸಾದಿಕ್ ಕೈವಾಡವಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಕಾಲೆಳೆಯಲಾಗಿದೆ.
"ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತ್ತಲ್ಲೋ", ಇದು #ಅಸಹಾಯಕಡಿಕೆಶಿ ಅವರ ಸದ್ಯದ ಸ್ಥಿತಿ.
— BJP Karnataka (@BJP4Karnataka) May 12, 2022
ಡಿಕೆಶಿ ಅವರೇ ಬೆಳೆಸಿದ ರಮ್ಯಾ ಈಗ ಡಿಕೆಶಿಗೆ ಸಾಮಾಜಿಕ ಮಾಧ್ಯಮದಲ್ಲಿ ಬುದ್ಧಿ ಮಾತು ಹೇಳುತ್ತಿದ್ದಾರೆ.
ರಮ್ಯಾ ಅವರನ್ನು #ಭ್ರಷ್ಟಾಧ್ಯಕ್ಷ ರ ವಿರುದ್ಧ ಛೂಬಿಟ್ಟಿದ್ದು #ಮೀರ್ಸಾದಿಕ್ ಅವರಿರಬಹುದೇ? pic.twitter.com/GUvkZsHQno
ಚುನಾವಣೆ ಹೊಸ್ತಿಲಲ್ಲಿ ಡಿಕೆ ಶಿವಕುಮಾರ್ ಜೊತೆಗೆ ಎಷ್ಟು ಮಂದಿ ನಿಲ್ಲಬಹುದು ಎಂದು ಕಾಂಗ್ರೆಸಿಗರು ಈಗಲೇ ನಿರ್ಧರಿಸಬಹುದು. ಮೀರ್ ಸಾದಿಕ್ ಬಣದ ಜೊತೆಗೆ ಡಿಕೆಶಿ ಅವರ ವಿರೋಧಿಗಳ ಸಾಲಿಗೆ ಈಗ ಮಾಜಿ ಸಂಸದೆ ರಮ್ಯಾ ಕೂಡಾ ಸೇರಿದ್ದಾರೆ. ಡಿಕೆಶಿ ಅವರೇ, ಸಹೋದರ ಡಿ.ಕೆ. ಸುರೇಶ್ ಅವರಾದರೂ ನಿಮ್ಮ ಜೊತೆ ನಿಲ್ಲಬಹುದೇ ಎಂದು ಬಿಜೆಪಿ ಪ್ರಶ್ನಿಸಿದೆ.
ಭ್ರಷ್ಟಾಧ್ಯಕ್ಷ ಡಿಕೆಶಿ ಅವರೇ, ನೀವು ನಿಜಕ್ಕೂ ಕೆಪಿಸಿಸಿ ಅಧ್ಯಕ್ಷರೇ?
— BJP Karnataka (@BJP4Karnataka) May 12, 2022
ಸಾರ್ವಜನಿಕ ಬದುಕಿನಿಂದ ಕಳೆದು ಹೋದವರೆಲ್ಲಈಗ ಬಂದು ಕೆಪಿಸಿಸಿ ಅಧ್ಯಕ್ಷರಿಗೆ ಪಾಠ ಹೇಳುತ್ತಿರುವುದನ್ನು ನೋಡಿದರೆ, ಕನಕಪುರದ ಬಂಡೆ ಎಷ್ಟು ಗಟ್ಟಿ ಎಂದು ಯೋಚಿಸಬೇಕಲ್ಲವೇ?
ಡಿಕೆಶಿ ಅವರನ್ನು ಅಧೀರರನ್ನಾಗಿಸುವ ಹಿಂದೆ #ಮೀರ್ಸಾದಿಕ್ ತಂತ್ರವಿದೆಯೇ?#ಅಸಹಾಯಕಡಿಕೆಶಿ