ದೊಡ್ಡ ಗುರಿಯತ್ತ ಗಮನ ಹರಿಸಿ: ಪಕ್ಷದ ಕಾರ್ಯಕರ್ತರಿಗೆ ಎಂ.ಬಿ.ಪಾಟೀಲ್ ಕರೆ
ಮಾಜಿ ಸಂಸದೆ ರಮ್ಯಾ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಟ್ವೀಟ್ ವಾರ್ ನಡುವಲ್ಲೇ ಪಕ್ಷದ ನಾಯಕರಿಗೆ ಸಂಯಮ ಕಾಪಾಡುಕೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ ಎಂದು ತಿಳಿದುಬಂದಿದೆ.
Published: 14th May 2022 01:14 PM | Last Updated: 14th May 2022 01:14 PM | A+A A-

ಎಂಬಿ ಪಾಟೀಲ್
ಬೆಂಗಳೂರು: ಮಾಜಿ ಸಂಸದೆ ರಮ್ಯಾ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಟ್ವೀಟ್ ವಾರ್ ನಡುವಲ್ಲೇ ಪಕ್ಷದ ನಾಯಕರಿಗೆ ಸಂಯಮ ಕಾಪಾಡುಕೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ ಎಂದು ತಿಳಿದುಬಂದಿದೆ.
ಪಕ್ಷದ ಹೈಕಮಾಡ್ ಸೂಚನೆ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಚರ್ಚೆ ಅಂತ್ಯಗೊಳಿಸುವಂತೆ ನಾಯಕರಿಗೆ ಸೂಚಿಸಿದ್ದು, ಟ್ವೀಟ್ ವಾರ್ ಮುಂದುವರೆದರೆ, ಅದು ಪಕ್ಷಕ್ಕೆ ಹೊಡೆತ ನೀಡಲಿದೆ ಎಂದು ಹೇಳಿದ್ದಾರೆಂದು ವರದಿಗಳು ತಿಳಿಸಿವೆ.
“ಅಲಿಖಿತ ನೀತಿ ಸಂಹಿತೆಯನ್ನು ಉಲ್ಲಂಘಿಸಲಾಗಿದೆ. ಹೀಗಾಗಿ ಪಕ್ಷದ ಹಿತದೃಷ್ಟಿಯಿಂದ ರಮ್ಯಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಕ್ಷದ ಕೆಲವರು ಸರದಿಯಂತೆ ಮಾತನಾಡಿದ್ದಾರೆ ಮತ್ತು ಕೆಲವರು ಕೀಳಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಆಂತರಿಕ ಪ್ರಜಾಪ್ರಭುತ್ವದ ಪಕ್ಷವಾಗಿದ್ದು, ಒಟ್ಟಾಗಿ ಕೆಲಸ ಮಾಡೋಣ, ಎಲ್ಲಾ ಪಕ್ಷದ ಕಾರ್ಯಕರ್ತರು ದೊಡ್ಡ ಗುರಿಯತ್ತ ಗಮನಹರಿಸಬೇಕೆಂದು ನಾನು ಒತ್ತಾಯಿಸುತ್ತೇನೆಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಹೇಳಿದ್ದಾರೆ.