ಕಹಿ ಮರೆತು ಪರಸ್ಪರ ನಗೆ ಚೆಲ್ಲಿದ ಪಾಟೀಲ್ - ಡಿಕೆಶಿ: ಗುಡ್ ಜಾಬ್ ಸುರ್ಜೆವಾಲಾ ಎಂದ ರಮ್ಯಾ!
ಕಾಂಗ್ರೆಸ್ ಪಕ್ಷ ರಾಜಸ್ತಾನದ ಉದಯ್‌ಪುರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಚಿಂತನಾ ಶಿಬಿರದಲ್ಲಿ ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್ ಖುಷಿ ಖುಷಿಯಾಗಿದ್ದಾರೆ.
Published: 14th May 2022 01:19 PM | Last Updated: 14th May 2022 01:19 PM | A+A A-

ಡಿಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್
ಉದಯ್‌ಪುರ್: ಕಾಂಗ್ರೆಸ್ ಪಕ್ಷ ರಾಜಸ್ತಾನದ ಉದಯ್‌ಪುರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಚಿಂತನಾ ಶಿಬಿರದಲ್ಲಿ ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್ ಖುಷಿ ಖುಷಿಯಾಗಿದ್ದಾರೆ.
ಇಂದು ಅವರಿಬ್ಬರೂ ಚಿಂತನಾ ಶಿಬಿರ ಉದ್ಘಾಟನೆಯಾದ ನಂತರ ದೊರೆತ ಬಿಡುವಿನ ವೇಳೆಯಲ್ಲಿ ಭೇಟಿಯಾದರು. ಇಷ್ಟರೊಳಗಾಗಲೇ ಹಿರಿಯ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲಾ ಮಧ್ಯಸ್ಥಿಕೆಯಿಂದ ಅವರಿಬ್ಬರ ನಡುವಿನ ಮಾತಿನ ಸಮರದ ವಿಷಯ ತಿಳಿಯಾಗಿತ್ತು. ಭೇಟಿಯಾದ ಕೂಡಲೇ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರು ಡಿಕೆಶಿ ಹೆಗಲ ಮೇಲೆ ಕೈ ಹಾಕಿ ತುಂಬು ನಗೆ ಚೆಲ್ಲಿದರು. ಪ್ರತಿಯಾಗಿ ಶಿವಕುಮಾರ್ ವಿಶ್ವಾಸ ನಗೆ ಬೀರಿದರು.
ಈ ಕ್ಷಣವನ್ನು ಅವರಿಬ್ಬರ ಅಭಿಮಾನಿಗಳು ಸೆರೆ ಹಿಡಿದು ಟ್ವೀಟ್ ಮಾಡಿದ್ದಾರೆ. ಈ ಚಿತ್ರವನ್ನು ಖ್ಯಾತ ನಟಿ, ಕಾಂಗ್ರೆಸಿನ ಮಾಜಿ ಸಂಸದೆ ರಮ್ಯ ಅವರು ಟ್ವೀಟ್ ಮಾಡಿದ್ದು ಇವರಿಬ್ಬರೂ ಹೀಗೆ ಇರುವುದು ಒಳ್ಳೆಯದು ಎಂಬಂತೆ “ಗುಡ್ ಜಾಬ್ ಎಂದಿದ್ದಾರೆ.
ರಾಜ್ಯದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯ್ ಹಾಗೂ ಕಾಂಗೆಸಿನ ಎಂ.ಬಿ. ಪಾಟೀಲ್ ಭೇಟಿ ನಡೆದಿದೆ ಎಂಬಂತೆ ಡಿ.ಕೆ. ಶಿವಕುಮಾರ್ ಮಾತನಾಡಿದ್ದರು. ಇದರಿಂದ ಸ್ವತಃ ಕಾಂಗ್ರಸ್ ಪಕ್ಷಕ್ಕೆ ಹಾಗೂ ಎಂ.ಬಿ. ಪಾಟೀಲರಿಗೆ ಮುಜುಗರವಾಗಿತ್ತು.
Good job @rssurjewala @KBByju https://t.co/JvzFi5hXnN
— Divya Spandana/Ramya (@divyaspandana) May 13, 2022