ಜೆಡಿಎಸ್ ಜನತಾ ಜಲಧಾರೆ ರಥಯಾತ್ರೆ ಅದ್ಧೂರಿ ಸಮಾರೋಪ: ಲಕ್ಷಾಂತರ ಜನರು ಭಾಗಿ
2023ರ ವಿಧಾನಸಭಾ ಚುನಾವಣೆಗೆ ಮುನ್ನ ಜೆಡಿಎಸ್ ಭಾರಿ ಪ್ರಚಾರ ಮಾಡಿದ್ದು, ಶುಕ್ರವಾರ ಬೆಂಗಳೂರು ಗ್ರಾಮಾಂತರದ ನೆಲಮಂಗಲದಲ್ಲಿ ‘ಜನತಾ ಜಲಧಾರೆ’ ಕಾರ್ಯಕ್ರಮ ಅದ್ಧೂರಿಯಾಗಿ ಸಮಾಪ್ತಿಯಾಯಿತು.
Published: 14th May 2022 08:13 AM | Last Updated: 14th May 2022 08:13 AM | A+A A-

ಶುಕ್ರವಾರ ನಡೆದ ಜನತಾ ಜಲಧಾರೆಯ ಸಮಾರೋಪ ಸಮಾರಂಭದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಕುಂಚಟಿಗ ಒಕ್ಕಲಿಗ ಧಾರ್ಮಿಕ ಮುಖ್ಯಸ್ಥ ಶ್ರೀ ನಂಜಾವಧೂತರಿಂದ ಆಶೀರ್ವಾದ ಪಡೆದರು.
ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೆ ಮುನ್ನ ಜೆಡಿಎಸ್ ಭಾರಿ ಪ್ರಚಾರ ಮಾಡಿದ್ದು, ಶುಕ್ರವಾರ ಬೆಂಗಳೂರು ಗ್ರಾಮಾಂತರದ ನೆಲಮಂಗಲದಲ್ಲಿ ‘ಜನತಾ ಜಲಧಾರೆ’ ಕಾರ್ಯಕ್ರಮ ಅದ್ಧೂರಿಯಾಗಿ ಸಮಾಪ್ತಿಯಾಯಿತು.
ಜನತಾ ಜಲಧಾರೆ ಸಮಾರೋಪ ಸಮಾರಂಭದಲ್ಲಿ ಪಕ್ಷವನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರುವ ಮೂಲಕ ಹೊಸ ಇತಿಹಾಸಕ್ಕೆ ಶುಭಾರಂಭ ಮಾಡಲು ಜೆಡಿಎಸ್ ಸಂಕಲ್ಪ ಮಾಡಿತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಲಕ್ಷಾಂತರ ಕಾರ್ಯಕರ್ತರು, ಅಭಿಮಾನಿಗಳ ಸಮ್ಮುಖದಲ್ಲಿ ಸ್ವತಂತ್ರ ಜೆಡಿಎಸ್ ಸರ್ಕಾರವನ್ನು ರಚಿಸಲು ಪಕ್ಷದ ನಾಯಕರು ಪಣತೊಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಮುಖಂಡ ಎಚ್ಡಿ ಕುಮಾರಸ್ವಾಮಿ ಅವರು, ಜೆಡಿಎಸ್ ಬಗ್ಗೆ ಜನರಲ್ಲಿ ಒಲವಿದೆ, ಮುಖ್ಯವಾಗಿ ಮೈಸೂರು ಭಾಗದಿಂದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುಮಾರಸ್ವಾಮಿಯವರು ಸಹೋದರ ಹೆಚ್.ಡಿ.ರೇವಣ್ಣ ಇಬ್ಬರೂ ಧೋತಿಗಳೊಂದಿಗೆ ತಮ್ಮ ಮಕ್ಕಳಾದ ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಅವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಮೂಲಕ ಕುಟುಂಬದ ಒಗ್ಗಟ್ಟನ್ನು ಪ್ರದರ್ಶಿಸಿದರು.