ಬಿಜೆಪಿ ನಿದ್ದೆ ಕೆಡಿಸಿದ ಶರದ್ ಪವಾರ್-ಎಂಇಎಸ್ ನಾಯಕರ ಭೇಟಿ
ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಬೆಳಗಾವಿ ಗಡಿ ಪ್ರದೇಶದಲ್ಲಿರುವ 7 ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಸಂಖ್ಯಾತ ಮರಾಠಿ ಮತದಾರರ ಮೇಲೆ ಹಿಡಿತ ಸಾಧಿಸಿ ಯಶಸ್ವಿಯಾಗಿದ್ದ ಬಿಜೆಪಿಗೆ ಇದೀಗ ಶರದ್ ಪವಾರ್-ಎಂಇಎಸ್ ನಾಯಕರ ಭೇಟಿ ಚಿಂತೆಗೀಡಾಗುವಂತೆ ಮಾಡಿದೆ.
Published: 14th May 2022 10:52 AM | Last Updated: 14th May 2022 10:52 AM | A+A A-

ಶರದ್ ಪವಾರ್
ಬೆಳಗಾವಿ: ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಬೆಳಗಾವಿ ಗಡಿ ಪ್ರದೇಶದಲ್ಲಿರುವ 7 ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಸಂಖ್ಯಾತ ಮರಾಠಿ ಮತದಾರರ ಮೇಲೆ ಹಿಡಿತ ಸಾಧಿಸಿ ಯಶಸ್ವಿಯಾಗಿದ್ದ ಬಿಜೆಪಿಗೆ ಇದೀಗ ಶರದ್ ಪವಾರ್-ಎಂಇಎಸ್ ನಾಯಕರ ಭೇಟಿ ಚಿಂತೆಗೀಡಾಗುವಂತೆ ಮಾಡಿದೆ.
2023ರ ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರದಲ್ಲಿದ್ದು, ಅಥಣಿ, ನಿಪಾಣಿ, ಕಾಗವಾಡ, ಖಾನಾಪುರ, ಬೆಳಗಾವಿ ಗ್ರಾಮಾಂತರ, ಬೆಳಗಾವಿ ದಕ್ಷಿಣ ಮತ್ತು ಬೆಳಗಾವಿ ಉತ್ತರ -- ಅಂತರರಾಜ್ಯ ಗಡಿ ಭಾಗದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಮರಾಠಿ ಮತಗಳ ಮೇಲೆ ಕಣ್ಣಿಟ್ಟಿರುವ ಶರದ್ ಪವಾರ್ ಅವರ, ಎಂಇಎಸ್ಗೆ ಬೆಂಬಲ ನೀಡುವ ನಿರೀಕ್ಷೆಯಿದೆ. ಈ ಹಿನ್ನಲೆಯಲ್ಲಿ ಶರದ್ ಪವಾರ್ ಹಾಗೂ ಎಂಇಎಸ್ ನಾಯಕರು ಭೇಟಿ ಮಾಡಿರುವುದು ಬಿಜೆಪಿ ಚಿಂತೆಗೆ ಕಾರಣವಾಗಿದೆ.
ಎಲ್'ಕೆ ಅಡ್ವಾಣಿಯವರ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮರಾಠಿಗರು ಬಿಜೆಪಿಗೆ ಬೆಂಬಲ ನೀಡಿದ್ದರು. ಇದೀಗ ಬಿಜೆಪಿ ಮೇಲೆ ಮರಾಠಿಗರು ಅಸಮಾಧಾನಗೊಂಡಿದ್ದಾರೆ. ಕಳೆದ ಬಾರಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಎಂಇಎಸ್ ಅಭ್ಯರ್ಥಿ ಶುಭಂ ಶೆಲ್ಕೆ ಅವರನ್ನು ಮರಾಠಿ ಮತದಾರರು ಬೆಂಬಲಿಸಿದ ರೀತಿಯನ್ನು ಆಧರಿಸಿ ನಾನು ಈ ಹೇಳಿಕೆ ನೀಡುತ್ತಿದ್ದೇನೆಂದು ಎಂಇಎಸ್ ಮುಖಂಡ, ಮಾಜಿ ಶಾಸಕ ಮನೋಹರ್ ಕಿನೇಕರ್ ಅವರು ಹೇಳಿದ್ದಾರೆ.