ಜೆಡಿಎಸ್ ನಾಯಕರ ಪಟ್ಟಿಯನ್ನೇ ಬಿಜೆಪಿಗೆ ನೀಡುತ್ತೇವೆ: ಸಿಎಂ ಇಬ್ರಾಹಿಂ
ಕುದುರೆ ವ್ಯಾಪಾರಕ್ಕೆ ಜೆಡಿಎಸ್ ಹೆದರುವುದಿಲ್ಲ. ಬಿಜೆಪಿಯವರು ಕೇಳಿದರೆ ನಾಯಕರ ಪಟ್ಟಿಯನ್ನೇ ನೀಡುತ್ತೇವೆ. ಯಾರನ್ನೂ ಬೇಕಾದರೂ ಕರೆದುಕೊಂಡು ಹೋಗಲಿ ಎಂದು ಜೆಡಿಎಸ್ ಅಧ್ಯಕ್ಷ ಸಿಎಂ ಇಬ್ರಾಹಿಂ ಅವರು ಹೇಳಿದ್ದಾರೆ.
Published: 14th May 2022 01:26 PM | Last Updated: 14th May 2022 01:26 PM | A+A A-

ಸಿಎಂ ಇಬ್ರಾಹಿಂ
ಬೆಂಗಳೂರು: ಕುದುರೆ ವ್ಯಾಪಾರಕ್ಕೆ ಜೆಡಿಎಸ್ ಹೆದರುವುದಿಲ್ಲ. ಬಿಜೆಪಿಯವರು ಕೇಳಿದರೆ ನಾಯಕರ ಪಟ್ಟಿಯನ್ನೇ ನೀಡುತ್ತೇವೆ. ಯಾರನ್ನೂ ಬೇಕಾದರೂ ಕರೆದುಕೊಂಡು ಹೋಗಲಿ ಎಂದು ಜೆಡಿಎಸ್ ಅಧ್ಯಕ್ಷ ಸಿಎಂ ಇಬ್ರಾಹಿಂ ಅವರು ಹೇಳಿದ್ದಾರೆ.
ಶುಕ್ರವಾರ ಜೆಡಿಎಸ್ ಜನತಾ ಜಲಧಾರೆ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ ನಿಂದ ಒಬ್ಬೊಬ್ಬರನ್ನೇ ಕೀಳುತ್ತೇವೆಂದು ಕಾಂಗ್ರೆಸ್ ಹಾಗೂ ಬಿಜೆಪಿಯವರು ಹೇಳುತ್ತಿದ್ದಾರೆ. ನಾವು ಅದಕ್ಕೆ ಹೆದರುವುದಿಲ್ಲ. ಬೇಕಿದ್ದರೆ ಅವರಿಗೆ ನಮ್ಮ ನಾಯಕರ ಪಟ್ಟಿಯನ್ನೇ ನೀಡುತ್ತೇವೆ. ಯಾರನ್ನು ಬೇಕಾದರೂ ಕರೆದುಕೊಂಡು ಹೋಗಲಿ. ಆದರೆ, ಇದು ನಮ್ಮ ಚುನಾವಣಾ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯವರು ದೇವೇಗೌಡ ಹಾಗೂ ಇತರೆ ಜೆಡಿಎಸ್ ನಾಯಕರನ್ನು ಗುರಿಯಾಗಿರಿಸಿಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿ, ಇದು ಜೆಡಿಎಸ್ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ನಾವು ಯೋಜನೆಯನ್ನು ಹೊಂದಿದ್ದು, ಆ ಯೋಜನೆ ಮೂಲಕ ಉತ್ತಮವಾಗಿ ಮುಂದುವರೆಯುತ್ತೇವೆ. ಜನರು ನಮ್ಮೊಂದಿಗಿದ್ದಾರೆಂದು ತಿಳಿಸಿದರು.