ಕರ್ನಾಟಕದ ಮೇಲೂ ಬುಲ್ಡೋಜರ್ ರಾಜಕೀಯದ ಕರಿ ನೆರಳು!
ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ದೆಹಲಿಯಲ್ಲಿ ಗಲಭೆಕೋರರು ಹಾಗೂ ಹಿಂಸಾಚಾರ ಪ್ರಚೋದಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾರಂಭಿಸಿದ ಬುಲ್ಡೋಜರ್ ರಾಜಕೀಯ ಈಗ ದೇಶಾದ್ಯಂತ ಚರ್ಚೆಯನ್ನು ಹುಟ್ಟುಹಾಕಿದೆ.
Published: 15th May 2022 03:31 PM | Last Updated: 15th May 2022 03:31 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ದೆಹಲಿಯಲ್ಲಿ ಗಲಭೆಕೋರರು ಹಾಗೂ ಹಿಂಸಾಚಾರ ಪ್ರಚೋದಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾರಂಭಿಸಿದ ಬುಲ್ಡೋಜರ್ ರಾಜಕೀಯ ಈಗ ದೇಶಾದ್ಯಂತ ಚರ್ಚೆಯನ್ನು ಹುಟ್ಟುಹಾಕಿದೆ.
ಆದರೆ ಕರ್ನಾಟಕದಲ್ಲಿ ಬುಲ್ಡೋಜರ್ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಇದನ್ನು ಓದಿ: ಸಂಪುಟ ವಿಸ್ತರಣೆ: ಒಂದೆರಡು ದಿನಗಳಲ್ಲಿ ಹೈಕಮಾಂಡ್ ಜೊತೆಗೆ ಚರ್ಚೆ- ಮುಖ್ಯಮಂತ್ರಿ ಬೊಮ್ಮಾಯಿ
ಸದ್ಯಕ್ಕೆ ಕರ್ನಾಟಕದಲ್ಲಿ ಬುಲ್ಡೋಜರ್ ರಾಜಕೀಯ ಸಮಸ್ಯೆಯಾಗಿ ಕಾಣಿಸುತ್ತಿಲ್ಲವಾದರೂ, ರಾಜ್ಯದಲ್ಲಿ ಕೇಸರಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಬುಲ್ಡೋಜರ್ ರಾಜಕೀಯ ಆರಂಭವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ರಾಜಕೀಯ ವಿಶ್ಲೇಷಕ ಬಸವರಾಜ ಸೂಳಿಭಾವಿ ಮಾತನಾಡಿ, ಬುಲ್ಡೋಜರ್ ರಾಜಕಾರಣದಂತಹ ಬೆಳವಣಿಗೆಗಳನ್ನು ಎಲ್ಲಾ ಶಕ್ತಿಗಳು ಒಗ್ಗೂಡಿ ಹೋರಾಟ ಮಾಡಿದರೆ ಮಾತ್ರ ತಡೆಯಲು ಸಾಧ್ಯ ಎಂದು ಹೇಳಿದ್ದಾರೆ.
ಆದರೆ ವಿರೋಧ ಪಕ್ಷದಲ್ಲಿ ಅಂತಹ ಒಗ್ಗಟ್ಟು ಕಾಣುತ್ತಿಲ್ಲ, 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರ ಬಂದರೆ ರಾಜ್ಯದಲ್ಲಿ ಬುಲ್ಡೋಜರ್ ರಾಜಕಾರಣವನ್ನು ನಾವು ಚೆನ್ನಾಗಿ ನೋಡಬಹುದು ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಕರ್ನಾಟಕದಲ್ಲಿ ಹಾರ್ಡ್ಕೋರ್ ಹಿಂದುತ್ವವನ್ನು ಜಾರಿಗೆ ತರುವುದು ಅಷ್ಟು ಸುಲಭವಲ್ಲ. ಏಕೆಂದರೆ ಮೊದಲು ಪಕ್ಷದಿಂದಲೇ ವಿರೋಧವನ್ನು ಎದುರಿಸಬೇಕಾಗುತ್ತದೆ. ರಾಜ್ಯದ ಸಾಮಾಜಿಕ ರಚನೆಯು ಸಾಮರಸ್ಯದ ಜೀವನವಾಗಿದೆ. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕೋಮುಗಲಭೆಗಳು ನಡೆಯುತ್ತಿದ್ದರೂ ಹಿಂದೂಗಳು ಮತ್ತು ಮುಸ್ಲಿಮರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ.
ತಬ್ಲಿಘಿ ಜಮಾತ್ ವಿವಾದ ಉತ್ತುಂಗದಲ್ಲಿದ್ದಾಗ ಅಲ್ಪಸಂಖ್ಯಾತರನ್ನು, ವಿಶೇಷವಾಗಿ ಮುಸ್ಲಿಮರನ್ನು ಗುರಿಯಾಗಿಸಬೇಡಿ ಎಂದು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕಠಿಣ ಎಚ್ಚರಿಕೆ ನೀಡಿದ್ದರು. ಅಲ್ಲದೆ ಯಡಿಯೂರಪ್ಪ ಅವರು ಇತ್ತೀಚಿಗೆ ದ್ವೇಷ ಹುಟ್ಟುಹಾಕುವ ಮತ್ತು ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದು, ಹಿಂದುತ್ವ ಶಕ್ತಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರಧಾನಿ ಹೆಸರು ಹೇಳಿಕೊಂಡ ಮಾತ್ರಕ್ಕೆ ಕರ್ನಾಟಕದಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಇನ್ನೂ ಪ್ರಸ್ತುತ, ಕರ್ನಾಟಕದಲ್ಲಿ ಉತ್ತರ ಪ್ರದೇಶ ಅಥವಾ ಗುಜರಾತ್ ಮಾದರಿ ಜಾರಿಗೆ ಬರುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳುತ್ತಿದ್ದಾರೆ.
ಬುಲ್ಡೋಜರ್ ರಾಜಕೀಯವು ಬಲಪಂಥೀಯ ಸಿದ್ಧಾಂತದ ಪರಿಣಾಮವಾಗಿದೆ. ದಬ್ಬಾಳಿಕೆ ಮತ್ತು ದ್ವೇಷವನ್ನು ಹುಟ್ಟುಹಾಕುವ ಮೂಲಕ ಅಧಿಕಾರವನ್ನು ಪಡೆಯುವುದು ಬಲಪಂಥೀಯ ತತ್ವದ ಮೂಲ ಉದ್ದೇಶ. ಬಿಜೆಪಿಯು ಸಂಘಟಿತ ದಬ್ಬಾಳಿಕೆಯಿಂದ ಸಾರ್ವಜನಿಕರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಅವರು ಒಬ್ಬ ಸಾಮಾನ್ಯ ಶತ್ರುವನ್ನು ಸೃಷ್ಟಿಸುತ್ತಾರೆ. ಈ ಹಿಂದೆ ದಲಿತರನ್ನು ಶತ್ರುವಾಗಿಸಿಕೊಂಡಿದ್ದರು. ಈಗ ಮುಸ್ಲಿಮರು ಎಂದು ಸೂಳಿಭಾವಿ ತಿಳಿಸಿದ್ದಾರೆ.
‘ಹಿಜಾಬ್ ಮತ್ತು ಆಜಾನ್ ವಿವಾದಗಳ ವಿಷಯದಲ್ಲಿ ದ್ವೇಷ ಹುಟ್ಟುಹಾಕಲು ರಾಜ್ಯ ಸರ್ಕಾರವು ಪರೋಕ್ಷವಾಗಿ ಬೆಂಬಲ ನೀಡುತ್ತಿದೆ’ ಎಂದು ಅವರು ಹೇಳಿದ್ದಾರೆ.