ನಮ್ಮ ರಕ್ಷಣೆ ಮಾಡಿಕೊಳ್ಳಕ್ಕೆ ನಾವು ಟ್ರೈನಿಂಗ್ ಕೊಡಬಾರದಾ: ಈಶ್ವರಪ್ಪ ಪ್ರಶ್ನೆ
ನಮ್ಮ ರಕ್ಷಣೆ ಮಾಡಿಕೊಳ್ಳಕ್ಕೆ ನಾವು ಟ್ರೈನಿಂಗ್ ಕೊಡಬಾರದಾ. ಶತಮಾನಗಳ ಹಿಂದೆ ನಮ್ಮ ದೇವಸ್ಥಾನ ಧ್ವಂಸ ಆಯ್ತು, ನಮ್ಮ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಆಯ್ತು. ಈಗಲೂ ಹಾಗೆ ಆಗಬೇಕಾ..?
Published: 18th May 2022 09:55 AM | Last Updated: 18th May 2022 01:16 PM | A+A A-

ಕೆಎಸ್ ಈಶ್ವರಪ್ಪ
ಶಿವಮೊಗ್ಗ: ನಮ್ಮ ರಕ್ಷಣೆ ಮಾಡಿಕೊಳ್ಳಕ್ಕೆ ನಾವು ಟ್ರೈನಿಂಗ್ ಕೊಡಬಾರದಾ. ಶತಮಾನಗಳ ಹಿಂದೆ ನಮ್ಮ ದೇವಸ್ಥಾನ ಧ್ವಂಸ ಆಯ್ತು, ನಮ್ಮ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಆಯ್ತು. ಈಗಲೂ ಹಾಗೆ ಆಗಬೇಕಾ..? ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಮಡಿಕೇರಿಯಲ್ಲಿ ಬಜರಂಗದಳ ಕಾರ್ಯಕರ್ತರಿಗೆ ತರಬೇತಿ ನೀಡಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಅಲ್ಲಿನ ಎಸ್ ಪಿ ಅವರೇ ಉತ್ತರ ಕೊಟ್ಟಿದ್ದಾರೆ. ಶಿಬಿರಾರ್ಥಿಗಳಿಗೆ ಯಾವುದೇ ಆಯುಧ ಕೊಟ್ಟಿರಲಿಲ್ಲ. ಅಲ್ಲಿ ಶಾಲೆ ನಡೆಯುತ್ತಿರಲಿಲ್ಲ. ರಜೆ ಇತ್ತು. ರಜೆ ಅನುಮತಿ ಪಡೆದು ಅಲ್ಲಿ ಶಿಬಿರಾರ್ಥಿಗಳಿಗೆ ಟ್ರೈನಿಂಗ್ ಕೊಟ್ಟಿದ್ದಾರೆ. ಫೈರ್ ಮಾಡುವಂತಹ ಬುಲೆಟ್ ಇಟ್ಕೊಂಡು ಟ್ರೈನಿಂಗ್ ಕೊಟ್ರಾ ಕೆಲವರು ಸುಮ್ಮನೆ ಈ ರೀತಿ ಆಟ ಆಡ್ತಿದ್ದಾರೆ.
ಪಿಎಫ್ ಐ ಕಾರ್ಯಕರ್ತರು ನಮ್ಮ ಶಾಸಕರ ವಿರುದ್ದ ದೂರು ಕೊಟ್ಟು ಬಂದಿದ್ದಾರೆ. ಪಿಎಫ್ ಐ ಅವರು ಮಾಡಿದಂತಹ ದೇಶದ್ರೋಹದ ಕೆಲಸವನ್ನು ಬಿಜೆಪಿ ಶಾಸಕರು ಮಾಡಿದ್ದಾರಾ. ಅದಕ್ಕೆ ನಮ್ಮ ಯುವಕರಿಗೆ ಟ್ರೈನಿಂಗ್ ಕೊಡ್ತಿದ್ದೇವೆ, ಇದರಲ್ಲಿ ಏನು ತಪ್ಪಿದೆ. ಯಾವುದಾದರೂ ಕಾನೂನು ಮೀರಿ ನಾವು ಮಾಡಿದ್ರೆ ಅದು ತಪ್ಪು ಎಂದರು.
ಇದನ್ನೂ ಓದಿ: ರಾಜ್ಯ ಸರ್ಕಾರದ್ದು ತಾಲಿಬಾನ್ ಸಂಸ್ಕೃತಿ- ಯು.ಟಿ ಖಾದರ್: ಗನ್ ಹಿಡಿಯೋದು ನಮ್ಮ ಜನ್ಮಸಿದ್ಧ ಹಕ್ಕು- ಕೆ.ಜಿ ಬೋಪಯ್ಯ
350 ವರ್ಷಗಳ ಹಿಂದೆ ಕಾಶಿ ವಿಶ್ವನಾಥನ ದೇವಸ್ಥಾನವನ್ನು ಔರಂಗಜೇಬ್ ಧ್ವಂಸ ಮಾಡಿದ್ದ. ಅಹಲ್ಯಾಬಾಯಿ ಹೋಳ್ಕರ್ ವಿಶ್ವನಾಥನ ದೇವಸ್ಥಾನ ಕಟ್ಟಿಸಿದ್ದರು. ಎಲ್ಲರೂ ಪಕ್ಷ ಭೇದ ಮರೆತು ಈ ವಿಷಯದಲ್ಲಿ ಒಂದಾಗಬೇಕು. ಅಲ್ಲಿದ್ದ ಮಸೀದಿ ಹೊಡೆದು, ದೇವಸ್ಥಾನ ಸರ್ವೇ ಮಾಡಬೇಕು ಅಂದಾಗ ಅನೇಕ ಬಾರಿ ಹಲವರು ಪ್ರತಿಭಟನೆ ನಡೆಸಿದ್ದರು. ದೇಶದ್ರೋಹಿ ಓವೈಸಿ ಹಾಗೂ ಅವನ ಅಣ್ಣ ತಮ್ಮಂದಿರು ಔರಂಗಜೇಬನ ಸಮಾಧಿಗೆ ತೆರಳಿ ನಮಸ್ಕರಿಸುತ್ತಾರೆ. ನಮ್ಮ ದೇಶದಲ್ಲಿ ಇಂದಿಗೂ ಇಂತಹ ದೇಶದ್ರೋಹಿಗಳು ಇದ್ದಾರೆ.ಮುಸಲ್ಮಾನರಿಗೆ ಮೆಕ್ಕಾ ಪುಣ್ಯ ಕ್ಷೇತ್ರ, ಕ್ರಿಶ್ಚಿಯನ್ನರಿಗೆ ಜೆರುಸಲೇಂ ಪುಣ್ಯಕ್ಷೇತ್ರ. ಅದೇ ರೀತಿ ಹಿಂದುಗಳಿಗೆ ಕಾಶಿ ಅಯೋಧ್ಯೆ, ಮಥುರಾ ಪುಣ್ಯಕ್ಷೇತ್ರ ಎಂದರು.
ಅಯೋಧ್ಯೆ ಕಳೆದುಕೊಂಡಿದ್ದೇವೆ, ಈಗ ಕಾಶಿ ಕಳೆದುಕೊಳ್ಳಲ್ಲ ಅಂತಾ ಒಬ್ಬ ಮೌಲ್ವಿ ಹೇಳ್ತಾನೆ. ಇವನು ಯಾವನು ಕಳೆದುಕೊಳ್ಳಲ್ಲ ಅಂತಾ ಹೇಳೋದಕ್ಕೆ.ಅವು ನಮ್ಮ ದೇವಸ್ಥಾನಗಳು ಅವುಗಳನ್ನು ನಾವು ತೆಗೆದುಕೊಂಡೇ ತೆಗೆದುಕೊಳ್ಳುತ್ತೇವೆ. ಕಾಶಿಯಲ್ಲಿ ನಂದಿ, ಶೃಂಗಾರ ಗೌರಿ, ಆಂಜನೇಯನ ವಿಗ್ರಹ ಪತ್ತೆಯಾಗಿದೆ. ಈಶ್ವರ ಲಿಂಗ ಇದ್ದ ಸ್ಥಳದ ಮೇಲೆ ನೀರನ್ನು ಇಟ್ಟು ಅವರು ಮಸೀದಿಯೊಳಗೆ ಕಾಲು ತೊಳೆದುಕೊಂಡು ಹೋಗ್ತಿದ್ರು ಅಂದ್ರೆ ಅವರಿಗೆ ಇನ್ನೆಷ್ಟು ಸೊಕ್ಕು ಇರಬೇಕು ಎಂದು ಈಶ್ವರಪ್ಪ ಗುಡುಗಿದರು.