ರಾಜ್ಯ ಸಭೆ ಚುನಾವಣೆ: ದೇವೇಗೌಡರಿಗಾಗಿ ಸೀಟು ತ್ಯಾಗ ಮಾಡಿದ್ದ ಕುಪೇಂದ್ರ ರೆಡ್ಡಿಗೆ ಮಣೆ; ಗೌಡರ ನಿಷ್ಠ ಆರ್.ಪ್ರಕಾಶ್ ಗೆ ಎಂಎಲ್ ಸಿ ಟಿಕೆಟ್!
ಬುಧವಾರ 90 ನೇ ವಸಂತಕ್ಕೆ ಕಾಲಿಟ್ಟಿರುವ ದೇವೇಗೌಡರು ಈ ಬಾರಿ ತಿರುಪತಿಗೆ ತೆರಳದೆ ದೇವನಹಳ್ಳಿಯ ರೆಸಾರ್ಟ್ನಲ್ಲಿ ಪಕ್ಷದ ಶಾಸಕರು ಮತ್ತು ಪ್ರಮುಖ ನಾಯಕರ ಸಭೆ ನಡೆಸಿದರು.
Published: 19th May 2022 10:19 AM | Last Updated: 19th May 2022 01:10 PM | A+A A-

ಕುಪೇಂದ್ರ ರೆಡ್ಡಿ ಮತ್ತು ಆರ್.ಪ್ರಕಾಶ್
ಬೆಂಗಳೂರು: ಖಾಲಿ ಇರುವ ಏಳು ಎಂಎಲ್ಸಿ ಸ್ಥಾನಗಳಲ್ಲಿ ಒಂದನ್ನು ಮಾತ್ರ ಗೆಲ್ಲುವ ಭರವಸೆ ಜೆಡಿಎಸ್ ಗಿದೆ. ಹೀಗಾಗಿ ನಾಲ್ಕು ರಾಜ್ಯಸಭಾ ಸ್ಥಾನಗಳಲ್ಲಿ ಒಂದನ್ನು ಗೆಲ್ಲುವ ಭರವಸೆಯಿಲ್ಲದಿದ್ದರೂ ಜೆಡಿಎಸ್ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ಸಲಹೆಯಂತೆ ನಡೆಯಲು ನಿರ್ಧರಿಸಿದೆ.
ಬುಧವಾರ 90 ನೇ ವಸಂತಕ್ಕೆ ಕಾಲಿಟ್ಟಿರುವ ದೇವೇಗೌಡರು ಈ ಬಾರಿ ತಿರುಪತಿಗೆ ತೆರಳದೆ ದೇವನಹಳ್ಳಿಯ ರೆಸಾರ್ಟ್ನಲ್ಲಿ ಪಕ್ಷದ ಶಾಸಕರು ಮತ್ತು ಪ್ರಮುಖ ನಾಯಕರ ಸಭೆ ನಡೆಸಿದರು. ಜೂನ್ 3 ರಂದು ಎಂಎಲ್ ಸಿ ಮತ್ತು ಜೂನ್ 10 ರಂದು ರಾಜ್ಯಸಭಾ ಚುನಾವಣೆಗಾಗಿ ಕಾರ್ಯತಂತ್ರ ರೂಪಿಸಲಾಗಿದೆ.
ಈ ಹಿಂದೆ ದೇವೇಗೌಡರಿಗಾಗಿ ರಾಜ್ಯ ಸಭೆ ಸ್ಥಾನ ತ್ಯಾಗ ಮಾಡಿದ್ದ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅವರ ಹೆಸರು ಮತ್ತೊಮ್ಮೆ ಕೇಳಿ ಬರುತ್ತಿದೆ, ಪ್ರಬಲ ಅಭ್ಯರ್ಥಿಯಾಗಿರುವ ಅವರು ಸರ್ವ ಸಮ್ಮತ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಏಕೆಂದರೆ ಕುಪೇಂದ್ರ ರೆಡ್ಡಿ ಬಳಿ ಅಗತ್ಯ ಸಂಪನ್ಮೂಲವಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಕಣಕ್ಕೆ; ಕಾಂಗ್ರೆಸ್- ಬಿಜೆಪಿಗೆ ಬೆಂಬಲವಿಲ್ಲ: ಎಚ್ ಡಿಕೆ
ಜೆಡಿಎಸ್ನ ಬೆಂಗಳೂರು ನಗರ ಜಿಲ್ಲಾಧ್ಯಕ್ಷ, ಒಕ್ಕಲಿಗ ಮತ್ತು ಗೌಡರ ಕುಟುಂಬದ ನಿಕಟವರ್ತಿ ಆರ್ ಪ್ರಕಾಶ್ ಅವರನ್ನು ಪಕ್ಷವು ಅಚ್ಚರಿಯ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡುವ ಸಾಧ್ಯತೆಯಿದೆ.
ಕೆಲವು ಜೆಡಿಎಸ್ ಶಾಸಕರು ಕಾಲಕಾಲಕ್ಕೆ ಪಕ್ಷದಿಂದ ದೂರವಾಗುತ್ತಿದ್ದ ಹಿನ್ನೆಲೆಯಲ್ಲಿ ಶಾಸಕರನ್ನು ಒಟ್ಟಿಗೆ ಇರಿಸಲು ದೇವೇಗೌಡರು ಬಯಸಿದ್ದರು ಮತ್ತು ಜೆಡಿಎಲ್ಪಿ ಸಭೆಯ ನೆಪದಲ್ಲಿ ಔತಣಕೂಟವನ್ನು ಆಯೋಜಿಸಲು ನಿರ್ಧರಿಸಿದರು.
ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಹೆಚ್ಚುವರಿ ಮತಗಳನ್ನು ಪಡೆಯಲು ಬಿಜೆಪಿ ಅಥವಾ ಕಾಂಗ್ರೆಸ್ ಹೈಕಮಾಂಡ್ನೊಂದಿಗೆ ಚರ್ಚಿಸುವ ಸಾಧ್ಯತೆಯಿದೆ ಎಂದು ಕೆಲವು ಎಂಎಲ್ಸಿ ಆಕಾಂಕ್ಷಿಗಳು ನಿರೀಕ್ಷಿಸುತ್ತಿದ್ದಾರೆ.
ರಾಜ್ಯ ಸಭೆ ಚುನಾವಣೆಗೆ ನಾಲ್ಕನೇ ಅಭ್ಯರ್ಥಿ ಅವಿರೋಧವಾಗಿ ಗೆಲ್ಲಬಹುದು, ಅಂದರೆ ಅವರು ಎಲ್ಲಾ ಮೂರು ಪ್ರಮುಖ ರಾಜಕೀಯ ಪಕ್ಷಗಳ ಹೆಚ್ಚುವರಿ ಮತಗಳನ್ನು ಗಳಿಸಬೇಕು ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಬುಧವಾರ ಸ್ಪಷ್ಟಪಡಿಸಿದ್ದಾರೆ. ಹಿರಿಯ ನಾಯಕ ಸಿ ಎಂ ಇಬ್ರಾಹಿಂ ಅವರನ್ನು ರಾಜ್ಯ ಜೆಡಿಎಸ್ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿರುವುದರಿಂದ ಅವರು ಚುನಾವಣೆಗೆ ನಿಲ್ಲುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.