ಬರೀ ಫೋಟೋ ತೆಗೆಸಿಕೊಳ್ಳೋಕೆ ಸಿಟಿ ರೌಂಡ್ಸ್ ಹಾಕಬೇಡಿ: ಸಿಎಂ ಬೊಮ್ಮಾಯಿ ವಿರುದ್ಧ ಎಚ್ ಡಿಕೆ ಕಿಡಿ

ಕಳೆದೆರಡು ಮೂರು ದಿನಗಳಿಂದ ಬೆಂಗಳೂರಲ್ಲಿ ಭಾರೀ ಮಳೆಯಾಗುತ್ತಿದ್ದು.. ಬರೀ ಫೋಟೋ ತೆಗೆಸಿಕೊಳ್ಳೋಕೆ ಮಾತ್ರ ನಗರ ಪ್ರದಕ್ಷಿಣೆ ಮಾಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಿಜೆಪಿ ನಾಯಕರ ಕಿವಿ...

Published: 19th May 2022 05:59 PM  |   Last Updated: 19th May 2022 06:37 PM   |  A+A-


HD kumaraswamy

ಎಚ್.ಡಿ.ಕುಮಾರಸ್ವಾಮಿ

Online Desk

ಬೆಂಗಳೂರು: ಕಳೆದೆರಡು ಮೂರು ದಿನಗಳಿಂದ ಬೆಂಗಳೂರಲ್ಲಿ ಭಾರೀ ಮಳೆಯಾಗುತ್ತಿದ್ದು.. ಬರೀ ಫೋಟೋ ತೆಗೆಸಿಕೊಳ್ಳೋಕೆ ಮಾತ್ರ ನಗರ ಪ್ರದಕ್ಷಿಣೆ ಮಾಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಿಜೆಪಿ ನಾಯಕರ ಕಿವಿ ಹಿಂಡಿದ್ದಾರೆ.

ಬೆಂಗಳೂರಲ್ಲಿ ಮಳೆಯಿಂದ ಅವಾಂತರ ಸೃಷ್ಟಿ ಹಿನ್ನೆಲೆ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ, ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ದಾಖಲೆಯ ಮಳೆ ಸುರಿಯುತ್ತಿದೆ. ಮಳೆಯಿಂದ ಬಹಳಷ್ಟು ಹಾನಿಯಾಗಿದೆ. ದೊಡ್ಡ ಅನಾಹುತಗಳ ಬಗ್ಗೆ ಗಮನ ಸೆಳೆಯುವ ಬಗ್ಗೆ ಮಾಧ್ಯಮಗಳು ಶ್ರಮ ಹಾಕಿವೆ. ದುಡ್ಡನ್ನು ಹೊಡೆಯುವ ಶಾಸಕರಿಗೆ ಸರ್ಕಾರ ಹಣ ಕೊಟ್ಟಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನ ಸಚಿವರಿಗೆ ಕೊಡದೆ ಸಿಎಂ ಬಳಿ ಇಟ್ಟುಕೊಂಡಿದ್ದಾರೆ. ಬೆಂಗಳೂರಿನ ಜನ ನೀರಲ್ಲಿ ಮುಳುಗಿ ಸಾಯುತ್ತಿದ್ದಾರೆ ಎಂದರು.

ಸಿಎಂ ಬೊಮ್ಮಾಯಿ ನಿನ್ನೆ ಆರ್ ಆರ್ ನಗರಕ್ಕೆ ಒಂದು ಕಡೆ ಮಾತ್ರ ಭೇಟಿ ಕೊಟ್ಟು, ಚಿಕ್ಕಮಗಳೂರಿನ ಶಾಸಕನ ಸರ್ಟಿಫಿಕೇಟ್ ಕೊಡೋಕೆ ಹೋಗಿದ್ರು. ಇವತ್ತು ಕಾಟಾಚಾರ ಪ್ರದಕ್ಷಿಣೆ ಮಾಡಿ ಜನರಿಂದ ಕದ್ದು ಮುಚ್ಚಿ ಬಂದಿದ್ದಾರೆ ಎಂದು ಎಚ್ ಡಿ ಕೆ ಆರೋಪಿಸಿದರು.

ಇದನ್ನು ಓದಿ: 1600 ಕೋಟಿ ರೂ.ಗಳ ವೆಚ್ಚದಲ್ಲಿ ಮಳೆ ನೀರು ಕಾಲುವೆಗಳ ಆಧುನೀಕರಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಇಷ್ಟೊಂದು ದೊಡ್ಡ ಮಟ್ಟದ ಮಳೆಯಾದರೂ ಶಾಸಕರು ಅಧಿಕಾರಿಗಳ ಸಭೆ ಕರೆದಿಲ್ಲ. ಅಧಿಕಾರಿಗಳ ಸಭೆ ಕರೆದು ಏನಾದರೂ ಸೂಚನೆ ಕೊಟ್ಟಿದ್ದಾರಾ..? ಬೆಂಗಳೂರು ಮಹಾನಗರದಲ್ಲಿ ಸಪ್ತ ಸಚಿವರಂತೆ ಏಳು ಸಚಿವರು ಇದ್ದಾರೆ. ಇಷ್ಟು ಜನ ಇಟ್ಟುಕೊಂಡು ನಗರದ ಜನತೆಗೆ ಏನು ಸಂದೇಶ ಕೊಡ್ತಿದ್ದಾರೆ? ಯಾವ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಅನುದಾನ ತಗೊಂಡು ಹೋದರು? ಆ ಹಣವನ್ನು ಯಾರಿಗೆ ಕೊಟ್ಟಿದ್ದಾರೆ..? ಬರೀ ಫೋಟೋ ತೆಗೆಸಿಕೊಳ್ಳೋಕೆ ನಗರ ಪ್ರದಕ್ಷಿಣೆ ಮಾಡಬೇಡಿ ಎಂದು ಸಿಎಂ ನಗರ ಪ್ರದಕ್ಷಿಣೆ ಬಗ್ಗೆ ಹೆಚ್‌ಡಿಕೆ ಕಿಡಿಕಾರಿದರು.

ಕಂದಾಯ ಸಚಿವರ ಕ್ಷೇತ್ರದಲ್ಲಿ ಎಷ್ಟು ಕೆರೆ ನುಂಗಿ ಹಾಕಿದ್ದಾರೆ..? ಪುಟ್ಟೇನಹಳ್ಳಿ ಕೆರೆ ನಾಶಗೊಳಿಸಿ ಜೆಪಿ ನಗರ ಡಾಲರ್ಸ್ ಕಾಲೋನಿ ಅಂತಾ ಮಾಡಿಕೊಂಡರು. ಈ ಹಿಂದೆ ನಾನು ೧೪ ತಿಂಗಳು ಸಿಎಂ ಆಗಿದ್ದಾಗ ಇದನ್ನು ಸ್ವಚ್ಛ ಮಾಡುವ ಶಕ್ತಿ ಇರಲಿಲ್ಲ. ಯಾಕೆಂದರೆ ಆಗ ನನಗೆ ಅದರ ಸ್ವಾತಂತ್ರವೇ ಇರಲಿಲ್ಲ. ಆಗ ನಗರಾಭಿವೃದ್ಧಿ ಸಚಿವರು, ಉಪ ಮುಖ್ಯಮಂತ್ರಿ ಆದವರು ಅವರೇ ಸಭೆ ಕರೆಯಬೇಕಿತ್ತು. ನಾನು ಮುಖ್ಯಮಂತ್ರಿಯಾದರೂ ಕೂಡ ಸುಮ್ಮನೆ ಇರಬೇಕಿತ್ತು. ಬೆಂಗಳೂರಿಗೆ ಸಂಬಂಧಿಸಿದಂತೆ ಸಭೆ ಕರೆಯೋ ಹಾಗಿರಲಿಲ್ಲ. ಆ ರೀತಿಯ ಸಂದರ್ಭ ಇತ್ತು ಎಂದರು.

ಇದನ್ನು ಓದಿ: ಬೆಂಗಳೂರಿನಲ್ಲಿ ಮತ್ತೆ ಜಿಟಿ ಜಿಟಿ ಮಳೆಕಾಟ: ವರುಣನ ಆರ್ಭಟದ ಮಧ್ಯೆ ಸಿಎಂ ಬೊಮ್ಮಾಯಿ ಸಿಟಿ ರೌಂಡ್ಸ್

ರಾಯಚೂರಿನ ಬಿಜೆಪಿ ಎಂಎಲ್ಎಯೊಬ್ಬ ಅಧಿಕಾರಿಯ ಮೇಲೆ ಯಾವ್ಯಾವ ಪದಬಳಕೆ ಮಾಡಿದ. ಚೀಫ್ ಇಂಜಿನಿಯರ್ ಗೆ ಎಂತಹ ಶಬ್ದ ಬಳಕೆ ಮಾಡಿದ್ದ? ಶಾಸಕರು ಹೇಳಿದ್ರೆ ಅಂತೆ ಬಿಲ್ ಮಂಜೂರ ಮಾಡಬೇಕಾಗಿರೋದು. ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಇದೆ. ರಾಜ್ಯಸಭೆಗೆ ಬಿಜೆಪಿಯಿಂದ ಅರ್ಜಿ ಹಾಕಿದ ವ್ಯಕ್ತಿಯೊಬ್ಬರ ಮನೆಗ ನೀರು ನುಗ್ಗಿದೆ. ಅಧಿಕಾರಿಗಳನ್ನು ಬೈಯ್ದಿದ್ದಾರೆ, ಏನು ಪ್ರಯೋಜನ ಎಂದು ಮಾಜಿ ಸಿಎಂ ಪ್ರಶ್ನಿಸಿದರು.

ಬ್ರ್ಯಾಂಡ್ ಬೆಂಗಳೂರು ಉಳಿಸುವ ಬಗ್ಗೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಪತ್ರ ವಿಚಾರದ ಕುರಿತು ಪ್ರತಿಕ್ರಿಯಿಸಿದ ಎಚ್ ಡಿ ಕೆ, ಅವ್ರ ಕಾಲದಲ್ಲಿ ಬೆಂಗಳೂರಿಗೆ ಬ್ರ್ಯಾಂಡ್ ಎಲ್ಲಿತ್ತು? ಬ್ರ್ಯಾಂಡ್ ಬೆಂಗಳೂರು ಬಂದಿದ್ದು ದೇವೇಗೌಡರ ಕಾಲದಲ್ಲಿ. ಅವ್ರು ಬಂದು ಬ್ರಾಂಡ್ ಬೆಂಗಳೂರಿನ ಹೆಸರನ್ನು ಹೈಜಾಕ್ ಮಾಡಿದ್ದರು. ಬರೀ ಸೂಟು ಬೂಟು ಹಾಕಿಕೊಂಡ್ರೆ ಬ್ರಾಂಡ್ ಬೆಂಗಳೂರು ಆಗುವುದಿಲ್ಲ ಎಂದು ಎಸ್.ಎಂ ಕೃಷ್ಣ ಅವರು ಸಿಎಂಗೆ ಬರೆದ ಪತ್ರಕ್ಕೆ ಕುಮಾರಸ್ವಾಮಿ ಟಾಂಗ್ ಕೊಟ್ಟರು.

ಇದನ್ನು ಓದಿ: ಮಳೆ ಅವಾಂತರದಿಂದ ನಗರದ ಖ್ಯಾತಿಗೆ ಧಕ್ಕೆ: ‘ಬೆಂಗಳೂರು ಬ್ರ್ಯಾಂಡ್’ ಉಳಿಸಿಕೊಳ್ಳಲು ಸಿಎಂಗೆ ಎಸ್.ಎಂ. ಕೃಷ್ಣ ಪತ್ರ

ಇನ್ನು ಪಕ್ಷದ ಕುರಿತು ಮಾತಾಡಿದ ಅವರು, ಕಳೆದ ಮೂರು ವರ್ಷದಲ್ಲಿ ಪಕ್ಷದ ಒಂದಷ್ಟು ಜನ ದೂರ ಉಳಿದಿದ್ದಾರೆ. ಜೆಡಿಎಸ್ ನಿಂದ ದೂರ ಉಳಿದವರನ್ನು ಮನವೊಲಿಸಲು ಸಲಹೆ ಬಂದಿದೆ. ಇದಕ್ಕೆ ವೇದಿಕೆ ಸೃಷ್ಟಿಸುವ ಬಗ್ಗೆ ತೀರ್ಮಾನವಾಗಿದೆ. ಪಕ್ಷದ ಸಂಘಟನೆ ಕುರಿತೂ ಚರ್ಚೆಯಾಗಿದೆ. ಪರಿಷತ್ ಗೆ ಒಬ್ಬರನ್ನ ಆಯ್ಕೆ ಮಾಡಬೇಕು. ಅದರ ಸಂಪೂರ್ಣ ತೀರ್ಮಾನವನ್ನ ದೇವೇಗೌಡರಿಗೆ ಬಿಡಲಾಗಿದೆ. ರಾಜ್ಯಸಭೆಗೆ ನಾಲ್ಕನೇ ಅಭ್ಯರ್ಥಿಗೆ ಎರಡು ಪಕ್ಷಗಳಿಗೆ ಯಾವುದೇ ಸಂಖ್ಯಾಬಲ ಇಲ್ಲ. ಹಾಗಾಗಿ ನಮ್ಮ ಪಕ್ಷಕ್ಕೆ ಒಂದು ಸ್ಥಾನ ಇದೆ. ಇದರ ಬಗ್ಗೆಯೂ ದೇವೇಗೌಡರ ತೀರ್ಮಾನವೇ ಅಂತಿಮವಾಗಿರುತ್ತೆ ಎಂದು ಕುಮಾರಸ್ವಾಮಿ ಹೇಳಿದರು.


Stay up to date on all the latest ರಾಜಕೀಯ news
Poll
MoE to launch bachelor degree programme for Agniveers

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಸರಿಯಾಗಿ ಯೋಜಿಸಲಾಗಿಲ್ಲ ಎಂಬ ಟೀಕೆಗಳನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments(1)

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  • Raveendra

    Kumar swamy what he is used to do during heavy rains, he is telling. Don't believe these guys. They will spoil Karnataka, if you give the power.
    1 month ago reply
flipboard facebook twitter whatsapp