ಪ್ರಿಯಾಂಕಾ ಗಾಂಧಿ ದಕ್ಷಿಣದತ್ತ ಚಿತ್ತ ಹರಿಸಬೇಕು: ಡಿಕೆ ಶಿವಕುಮಾರ್

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ದಕ್ಷಿಣ ಭಾರತದತ್ತ ಚಿತ್ತ ಹರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

Published: 20th May 2022 01:09 AM  |   Last Updated: 20th May 2022 01:09 AM   |  A+A-


DK Shivakumar

ಡಿ.ಕೆ.ಶಿವಕುಮಾರ್

PTI

ಬೆಂಗಳೂರು: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ದಕ್ಷಿಣ ಭಾರತದತ್ತ ಚಿತ್ತ ಹರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮುಂದಿನ ವರ್ಷ ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಚುನಾವಣೆ ಬರುವ ದಕ್ಷಿಣ ಭಾರತದ ಮೇಲೆ "ಗಮನ ಕೇಂದ್ರೀಕರಿಸಬೇಕು" ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯ ಸಭೆ ಚುನಾವಣೆ: ದೇವೇಗೌಡರಿಗಾಗಿ ಸೀಟು ತ್ಯಾಗ ಮಾಡಿದ್ದ ಕುಪೇಂದ್ರ ರೆಡ್ಡಿಗೆ ಮಣೆ; ಗೌಡರ ನಿಷ್ಠ ಆರ್.ಪ್ರಕಾಶ್ ಗೆ ಎಂಎಲ್ ಸಿ ಟಿಕೆಟ್!

ಜೂನ್ 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಪ್ರಿಯಾಂಕಾ ಸ್ಪರ್ಧಿಸುವ ಕುರಿತು ಮಾತನಾಡಿದ ಶಿವಕುಮಾರ್ ಅವರು, 'ಅದು ಹಾಗಲ್ಲ..ಅವರು ಇತ್ತೀಚಿನ ಚುನಾವಣೆಗಳಲ್ಲಿ (ಐದು ರಾಜ್ಯಗಳಿಗೆ) ಸಕ್ರಿಯವಾಗಿ ಪ್ರಚಾರ ಮಾಡಿದ್ದರು, ಮುಂದಿನ ಚುನಾವಣೆಯ ಸಮಯದಲ್ಲಿ ಅದೇ ರೀತಿ ಮಾಡಲು ನಾವು ಅವರನ್ನು ವಿನಂತಿಸುತ್ತಿದ್ದೇವೆ. ನಾವು  ಪ್ರಿಯಾಂಕಾ ಅವರು ದಕ್ಷಿಣದಲ್ಲಿಯೂ ಸಹ ಗಮನ ಕೇಂದ್ರೀಕರಿಸಲು ಬಯಸುತ್ತೇವೆ ಎಂದು ಹೇಳಿದರು.

ರಾಜ್ಯಸಭಾ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಮುಖ್ಯಸ್ಥರು, ರಾಜ್ಯಸಭಾ ಚುನಾವಣೆಗೆ ನಮ್ಮ ಪಕ್ಷದಲ್ಲಿ ಸಂಪ್ರದಾಯವಿದೆ, ಕೇಂದ್ರ ನಾಯಕತ್ವ ಏನು ಹೇಳುತ್ತದೆಯೋ ಅದನ್ನು ನಾವು ಪಾಲಿಸುತ್ತೇವೆ. ಚುನಾವಣೆ ಕುರಿತು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಭಾರತಕ್ಕೆ ನೆಹರು ಕುಟುಂಬವಾದದ ಪಿತಾಮಹ; ರಾಜ್ಯಕ್ಕೆ ದೇವೇಗೌಡರೇ ಆದ್ಯ ಪಿತಾಮಹ! ಜೆಡಿಎಸ್‌ ನಾಮಾವಶೇಷವಾಗುವುದರಲ್ಲಿ ಸಂಶಯವಿದೆಯೇ?

ಹಾಲಿ ಸದಸ್ಯರಾದ ನಿರ್ಮಲಾ ಸೀತಾರಾಮನ್ (ಕೇಂದ್ರ ಹಣಕಾಸು ಸಚಿವ) ಮತ್ತು ಬಿಜೆಪಿಯ ಕೆ ಸಿ ರಾಮಮೂರ್ತಿ ಮತ್ತು ಜೈರಾಮ್ ರಮೇಶ್ ಮತ್ತು ಕಾಂಗ್ರೆಸ್‌ನ ದಿವಂಗತ ಆಸ್ಕರ್ ಫರ್ನಾಂಡಿಸ್ ಅವರ ಅಧಿಕಾರಾವಧಿಯು ಜೂನ್ 30 ರಂದು ಮುಕ್ತಾಯಗೊಳ್ಳಲಿರುವುದರಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆಗಳು ಅಗತ್ಯವಾಗಿವೆ. ಜೂನ್ 3 ರಂದು ನಡೆಯಲಿರುವ ಶಾಸಕರಿಂದ ಚುನಾಯಿತರಾಗಲಿರುವ ಏಳು ವಿಧಾನ ಪರಿಷತ್ ಸ್ಥಾನಗಳಿಗೆ ಅಭ್ಯರ್ಥಿಗಳ ಕುರಿತು ಶಿವಕುಮಾರ್, ಈ ನಿಟ್ಟಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದರು.

"ರಾಜ್ಯ ಸಭೆ ಚುನಾವಣೆ ಕುರಿತು ನಾವು ಒಂದು ಸುತ್ತಿನಲ್ಲಿ ಚರ್ಚಿಸಿದ್ದೇವೆ, ನಾವು ಇನ್ನೊಂದು ಸುತ್ತನ್ನು ಚರ್ಚಿಸುತ್ತೇವೆ, ನಂತರ ನಿರ್ಧರಿಸುತ್ತೇವೆ. ನಮಗೆ ಕೇವಲ ಎರಡು ಸೀಟುಗಳಿವೆ, ನಮ್ಮ ಆಯ್ಕೆಗಳು ಬಹಳ ಸೀಮಿತವಾಗಿವೆ ಮತ್ತು ಅನೇಕ ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ ಅಂತಿಮ ನಿರ್ಧಾರ ಪಕ್ಷ ಮತ್ತು ಹೈಕಮಾಂಡ್ ನದ್ದೇ ಎಂದರು.
 


Stay up to date on all the latest ರಾಜಕೀಯ news
Poll
MoE to launch bachelor degree programme for Agniveers

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಸರಿಯಾಗಿ ಯೋಜಿಸಲಾಗಿಲ್ಲ ಎಂಬ ಟೀಕೆಗಳನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments(1)

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  • Raveendra

    yours is drama only. Congress will not get any power in future to rule India.
    1 month ago reply
flipboard facebook twitter whatsapp