70 ಕಳೆದ ಮೇಲೂ ಅಧಿಕಾರ ಅನುಭವಿಸಲು ತಂತ್ರಗಾರಿಕೆ ನಡೆಸುವ ಕಾಂಗ್ರೆಸ್ 'ಯಯಾತಿ'ಗಳ ಮೋಹ ಕಳಚುವುದೇ?
ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಹಿರಿಯ ನಾಯಕರಿಗೆ ಗೇಟ್ ಪಾಸ್ ನೀಡುವ ಮುನ್ಸೂಚನೆ ನೀಡಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿರುವ ಯುವ ನಾಯಕರು ಯಾರು?
Published: 21st May 2022 01:17 PM | Last Updated: 21st May 2022 01:17 PM | A+A A-

ಕಾಂಗ್ರೆಸ್ ಚಿಂತನ ಶಿಬಿರ(ಸಂಗ್ರಹ ಚಿತ್ರ)
ಬೆಂಗಳೂರು: ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಹಿರಿಯ ನಾಯಕರಿಗೆ ಗೇಟ್ ಪಾಸ್ ನೀಡುವ ಮುನ್ಸೂಚನೆ ನೀಡಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿರುವ ಯುವ ನಾಯಕರು ಯಾರು? ಕಾಂಗ್ರೆಸ್ ಪಕ್ಷದಲ್ಲಿ ಯೌವನ ನಿರ್ಧಾರವಾಗುವುದು 50ರ ನಂತರವೇ’ ಎಂದು ಟೀಕಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಕೈಗೊಂಡಿರುವ ನಿರ್ಧಾರಗಳ ಬಗ್ಗೆ ವ್ಯಂಗ್ಯವಾಡಿದೆ. ‘ಕಾಂಗ್ರೆಸ್ ಚಿಂತನಾ ಶಿಬಿರದಲ್ಲೇನೋ ವಯೋನಿವೃತ್ತಿಯ ಪ್ರಸ್ತಾಪವಾಗಿದೆ. ಆದರೆ ಯಾವಾಗ?. 70 ಕಳೆದ ಮೇಲೂ ಅಧಿಕಾರ ಅನುಭವಿಸಲು ತಂತ್ರಗಾರಿಕೆ ನಡೆಸುವ ಕಾಂಗ್ರೆಸ್ ‘ಯಯಾತಿ’ಗಳ ಮೋಹ ಕಳಚುವುದೇ’ ಎಂದು ನಕಲಿ ಗಾಂಧಿ ಕುಟುಂಬ ಪುನಶ್ಚೇತನಾ ಶಿಬಿರ ಎಂಬ ಹ್ಯಾಷ್ಟ್ಯಾಗ್ ಉಲ್ಲೇಖಿಸಿ ಬಿಜೆಪಿ ಕಿಡಿಕಾರಿದೆ.
ಕಾಂಗ್ರೆಸ್ ಚಿಂತನಾ ಶಿಬಿರದಲ್ಲೇನೋ ವಯೋನಿವೃತ್ತಿಯ ಪ್ರಸ್ತಾಪವಾಗಿದೆ. ಆದರೆ ಯಾವಾಗ?
— BJP Karnataka (@BJP4Karnataka) May 21, 2022
70 ಕಳೆದ ಮೇಲೂ ಅಧಿಕಾರ ಅನುಭವಿಸಲು ತಂತ್ರಗಾರಿಕೆ ನಡೆಸುವ ಕಾಂಗ್ರೆಸ್ "ಯಯಾತಿ"ಗಳ ಮೋಹ ಕಳಚುವುದೇ?#ನಕಲಿಗಾಂಧಿಕುಟುಂಬಪುನಶ್ಚೇತನಾಶಿಬಿರ
ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ ಈಗ 60+, ಚಿಂತನಾ ಶಿಬಿರದಲ್ಲಿ ಶೇ 50ರಷ್ಟು ಕ್ಷೇತ್ರಗಳನ್ನು 50 ವರ್ಷದೊಳಗಿನವರಿಗೆ ನೀಡಬೇಕೆಂದು ಕಾಂಗ್ರೆಸ್ ಸಂಕಲ್ಪ ಮಾಡಿದೆ. ಈ ನಿಯಮವನ್ನು ರಾಜ್ಯದಲ್ಲಿ ಯಥಾವತ್ತಾಗಿ ಜಾರಿಗೆ ತಂದಲ್ಲಿ ಕಾಂಗ್ರೆಸ್ 60+ ನಿಂದ 30+ ಗೆ ಕ್ಕೆ ಇಳಿಯುವುದು ನಿಶ್ಚಿತ’ ಎಂದು ಬಿಜೆಪಿ ಲೇವಡಿ ಮಾಡಿದೆ.
‘ಒಂದು ಮನೆಯಿಂದ ಒಬ್ಬರಿಗೆ ಟಿಕೆಟ್ ಎಂಬುದು ಕಾಂಗ್ರೆಸ್ ಪಕ್ಷದ ಹೊಸ ನಾಟಕ. ನಕಲಿ ಗಾಂಧಿ ಕುಟುಂಬಿಕರಿಗೆ ಮತ್ತು ಅವರ ಪಾದ ಪೂಜಕರಿಗೆ ಅನ್ವಯವಾಗುವುದಿಲ್ಲ ಎಂಬ ಷರತ್ತು ಅಳವಡಿಸಿರುವುದು ಅವರ ಬೂಟಾಟಿಕೆಗೆ ಸಾಕ್ಷಿ. 70 ಮೇಲ್ಪಟ್ಟವರಿಗೆ ಟಿಕೆಟ್ ನೀಡದ ಹೊಸ ನಿಯಮವೂ ಇವರಾರಿಗೂ ಅನ್ವಯವಾಗದು’ ಎಂದು ಬಿಜೆಪಿ ಗುಡುಗಿದೆ.
ಒಂದು ಮನೆಯಿಂದ ಒಬ್ಬರಿಗೆ ಟಿಕೆಟ್ ಎಂಬುದು ಕಾಂಗ್ರೆಸ್ ಪಕ್ಷದ ಹೊಸ ನಾಟಕ.
— BJP Karnataka (@BJP4Karnataka) May 21, 2022
ನಕಲಿ ಗಾಂಧಿ ಕುಟುಂಬಿಕರಿಗೆ ಮತ್ತು ಅವರ ಪಾದ ಪೂಜಕರಿಗೆ ಅನ್ವಯವಾಗುವುದಿಲ್ಲ ಎಂಬ ಷರತ್ತು ಅಳವಡಿಸಿರುವುದು ಅವರ ಬೂಟಾಟಿಕೆಗೆ ಸಾಕ್ಷಿ.
70 ಮೇಲ್ಪಟ್ಟವರಿಗೆ ಟಿಕೆಟ್ ನೀಡದ ಹೊಸ ನಿಯಮವೂ ಇವರಾರಿಗೂ ಅನ್ವಯವಾಗದು!#ನಕಲಿಗಾಂಧಿಕುಟುಂಬಪುನಶ್ಚೇತನಾಶಿಬಿರ