ಕುವೆಂಪು ಬರೆದ 'ಅನಲೆʼ, 'ಅಜ್ಜಯ್ಯನ ಅಭ್ಯಂಜನʼ ಲಲಿತ ಪ್ರಬಂಧವನ್ನು ಕಾಂಗ್ರೆಸ್ ಸರ್ಕಾರ ಕೈಬಿಟ್ಟಿತ್ತು: ರಾಷ್ಟ್ರಕವಿಗೆ ಅವಮಾನ ಮಾಡಿದ್ದು ಯಾರು?
ಕುವೆಂಪು ಅವರ ಜೊತೆಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಅವರಿಗೂ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಬಿಜೆಪಿ ಹರಿಹಾಯ್ದಿದೆ.
Published: 24th May 2022 12:33 PM | Last Updated: 24th May 2022 12:54 PM | A+A A-

ರಾಷ್ಟ್ರಕವಿ ಕುವೆಂಪು (ಸಂಗ್ರಹ ಚಿತ್ರ)
ಬೆಂಗಳೂರು: ಕುವೆಂಪು ಅವರ ಜೊತೆಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಅವರಿಗೂ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಬಿಜೆಪಿ ಹರಿಹಾಯ್ದಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮಾ ಗಾಂಧಿ ಕುರಿತಾದ ಪಠ್ಯವನ್ನು ಕೈ ಬಿಟ್ಟಿದ್ದರು. ಕಾಂಗ್ರೆಸ್ ಸರ್ಕಾರ ರಾಷ್ಟ್ರಕವಿ ಕುವೆಂಪು ಬರೆದ ʼಅನಲೆʼ ಎಂಬ ನಾಟಕ, ʼಅಜ್ಜಯ್ಯನ ಅಭ್ಯಂಜನʼ ಎಂಬ ಸುಂದರ ಲಲಿತ ಪ್ರಬಂಧ ಕೈಬಿಟ್ಟಿತ್ತು.
'ಬಹುಮಾನʼ ಎಂಬ ಅರ್ಥಪೂರ್ಣ ಕವಿತೆ ಹಾಗೂ 'ಬೊಮ್ಮನಹಳ್ಳಿಯ ಕಿಂದರಿಜೋಗಿʼ ಎಂಬ ಶಿಶು ಸಾಹಿತ್ಯವನ್ನು ನಮ್ಮ ಸರ್ಕಾರದ ಸೇರಿಸಿದೆ. ಕುವೆಂಪು ಅವರಿಗೆ ಅವಮಾನ ಮಾಡಿದ್ಯಾರು? ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೇಮಿಸಿದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಶ್ರೀರಾಮಾಯಣದರ್ಶನಂ ಮಹಾಕಾವ್ಯವನ್ನು ಪಠ್ಯದಿಂದಲೇ ತೆಗೆದು ಹಾಕಿತ್ತು. ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್ ಎನ್ನುವುದರಲ್ಲಿ ಅನುಮಾನವಿದೆಯೇ? ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಬೊಬ್ಬಿಡುತ್ತಿದೆ. ಕಾಂಗ್ರೆಸ್ ನೇಮಿಸಿದ ಬರಗೂರು ತಂಡ, ಕುವೆಂಪು ಅವರ ಎರಡು ಅತ್ಯುತ್ತಮ ಬರಹಗಳನ್ನು ಪಠ್ಯಗಳಿಂದ ಕೈಬಿಟ್ಟಿತ್ತು. ಹಾಗಾದರೆ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ್ದು ಯಾರು?
ಕಾಂಗ್ರೆಸ್ ಸರ್ಕಾರ ರಾಷ್ಟ್ರಕವಿ ಕುವೆಂಪು ಬರೆದ ʼಅನಲೆʼ ಎಂಬ ನಾಟಕ, ʼಅಜ್ಜಯ್ಯನ ಅಭ್ಯಂಜನʼ ಎಂಬ ಸುಂದರ ಲಲಿತ ಪ್ರಬಂಧ ಕೈಬಿಟ್ಟಿತ್ತು.
— BJP Karnataka (@BJP4Karnataka) May 24, 2022
ʼಬಹುಮಾನʼ ಎಂಬ ಅರ್ಥಪೂರ್ಣ ಕವಿತೆ ಹಾಗೂ ʼಬೊಮ್ಮನಹಳ್ಳಿಯ ಕಿಂದರಿಜೋಗಿʼ ಎಂಬ ಶಿಶು ಸಾಹಿತ್ಯವನ್ನು ನಮ್ಮ ಸರ್ಕಾರದ ಸೇರಿಸಿದೆ.
ಕುವೆಂಪು ಅವರಿಗೆ ಅವಮಾನ ಮಾಡಿದ್ಯಾರು?#CONgressInsultedKuvempu
ಕಾಂಗ್ರೆಸ್ ನಾಟಕ ಬಯಲಾಗಿದೆ. ತಮ್ಮದೇ ಸರ್ಕಾರದ ಅವಧಿಯಲ್ಲಿ ತಾವೇ ನೇಮಿಸಿದ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಕುವೆಂಪು ಅವರನ್ನು ಶಬ್ದಗಳಲ್ಲಿ ಅವಮಾನಿಸಿತ್ತು. ಅದನ್ನೀಗ ಬಿಜೆಪಿ ತಲೆಗೆ ಕಟ್ಟುವ ವ್ಯರ್ಥ ಪ್ರಲಾಪದಲ್ಲಿ ಐಎನ್ ಸಿ ಕರ್ನಾಟಕ ತೊಡಗಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದೆ.
ಅದೇ ಶಬ್ದ, ಅವೇ ವಾಕ್ಯ, ಅವೇ ಸಾಲು, "ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು" ಎಂದು ಕುವೆಂಪು ಅವರ ಕುರಿತು ಕಾಂಗ್ರೆಸ್ ಅವಧಿಯಲ್ಲಿ ಬರಗೂರು ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ಮುದ್ರಿಸಿತ್ತು. ಸಿದ್ದರಾಮಯ್ಯ ಕಾಲದಲ್ಲಿ ಆಗದ ಅವಮಾನ ಈಗ ಹೇಗೆ? ಸಿದ್ದರಾಮಯ್ಯ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಪರಿಷ್ಕರಣೆಗೊಂಡ ಪರಿಸರ ಅಧ್ಯಯನ ಪಠ್ಯಪುಸ್ತಕದ ʼಕೆಲವು ಪ್ರಸಿದ್ಧ ವ್ಯಕ್ತಿಗಳುʼ ಎಂಬ ಪಠ್ಯದಲ್ಲಿ ಮುದ್ರಿತಗೊಂಡ ವ್ಯಕ್ತಿ ಪರಿಚಯದ ಸಾಲುಗಳಿವು. ಹಾಗಾದರೆ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ್ದು ಯಾರು? ಎಂದು ಪ್ರಶ್ನಿಸಿದೆ.
ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಬೊಬ್ಬಿಡುತ್ತಿದೆ.
— BJP Karnataka (@BJP4Karnataka) May 24, 2022
ಕಾಂಗ್ರೆಸ್ ನೇಮಿಸಿದ ಬರಗೂರು ತಂಡ, ಕುವೆಂಪು ಅವರ ಎರಡು ಅತ್ಯುತ್ತಮ ಬರಹಗಳನ್ನು ಪಠ್ಯಗಳಿಂದ ಕೈಬಿಟ್ಟಿತ್ತು.
ಹಾಗಾದರೆ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ್ದು ಯಾರು?#CONgressInsultedKuvempu