ಇಡಿ ಚಾರ್ಜ್ ಶೀಟ್ ಪ್ರತಿ ಬರಲಿ, ಆಮೇಲೆ ಮಾತನಾಡುತ್ತೇನೆ; ಕಾನೂನಿನ ಮೇಲೆ ನನಗೆ ನಂಬಿಕೆಯಿದೆ: ಡಿಕೆ ಶಿವಕುಮಾರ್
ಜಾರಿ ನಿರ್ದೇಶನಾಲಯ ನನ್ನ ವಿರುದ್ಧ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು ನನಗಿನ್ನೂ ಪ್ರತಿ ಸಿಕ್ಕಿಲ್ಲ. ಮೊದಲೆಲ್ಲ 60 ದಿನಗಳಲ್ಲಿ ತನಿಖೆ ಮುಗಿಸುವ ಪದ್ಧತಿ ಇತ್ತು. ಈಗ ಎರಡೂವರೆ ವರ್ಷ ತೆಗೆದುಕೊಂಡು ಆರೋಪಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್ ಬಂದ ಮೇಲೆ ಪ್ರತಿಕ್ರಿಯಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
Published: 26th May 2022 02:02 PM | Last Updated: 26th May 2022 02:45 PM | A+A A-

ಡಿ ಕೆ ಶಿವಕುಮಾರ್
ಬೆಂಗಳೂರು: ಜಾರಿ ನಿರ್ದೇಶನಾಲಯ ನನ್ನ ವಿರುದ್ಧ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು ನನಗಿನ್ನೂ ಪ್ರತಿ ಸಿಕ್ಕಿಲ್ಲ. ಮೊದಲೆಲ್ಲ 60 ದಿನಗಳಲ್ಲಿ ತನಿಖೆ ಮುಗಿಸುವ ಪದ್ಧತಿ ಇತ್ತು. ಈಗ ಎರಡೂವರೆ ವರ್ಷ ತೆಗೆದುಕೊಂಡು ಆರೋಪಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್ ಬಂದ ಮೇಲೆ ಪ್ರತಿಕ್ರಿಯಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ಹೊಸದಾಗಿ ಆರೋಪಪಟ್ಟಿ ಸಲ್ಲಿಸಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೊಸದಾಗಿ ಆರೋಪ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ಇದ್ದರೂ ಕೂಡ ಕಾನೂನಿಗೆ ವಿರುದ್ಧವಾಗಿ ಆದಾಯ ತೆರಿಗೆ ಇಲಾಖೆಯವರು ಸಾಕಷ್ಟು ಆರೋಪಗಳನ್ನು ಸೃಷ್ಟಿ ಮಾಡಿದ್ದಾರೆ. ನನಗೆ ಪ್ರತಿ ಬರಲಿ, ಈ ದೇಶದಲ್ಲಿ ಕಾನೂನು, ನ್ಯಾಯ ನೀತಿ ಇದೆ, ಅವುಗಳ ಮೇಲೆ ನಂಬಿಕೆಯಿದೆ, ನಾನು ತಪ್ಪು ಮಾಡಿಲ್ಲ ಎಂಬುದು ನನಗೆ ಗೊತ್ತಿದೆ. ರಾಜಕೀಯಾಗಿ ನನ್ನ ವಿರುದ್ಧ ನಡೆಸಿದ ಷಡ್ಯಂತ್ರ ಎಂದರು.
ಇದನ್ನೂ ಓದಿ: ಡಿ.ಕೆ. ಶಿವಕುಮಾರ್ ಗೆ ಮತ್ತೆ ಇಡಿ ಶಾಕ್: ಹೊಸದಾಗಿ ಚಾರ್ಜ್ ಶೀಟ್ ಸಲ್ಲಿಕೆ
ರಾಜಕೀಯದಲ್ಲಿ ಅವರವರ ಪಕ್ಷದವರನ್ನೇ ಬಿಡುವುದಿಲ್ಲ. ಇನ್ನು ವಿರೋಧ ಪಕ್ಷದವನಾದ ನನ್ನನ್ನು ಬಿಡುತ್ತಾರೆಯೇ, ನಾವು ಕಾನೂನು ಪಾಲಿಸುವ ನಾಗರಿಕರು, ಕಾನೂನು ಮೇಲೆ ನಂಬಿಕೆಯಿದೆ, ಮುಂದೇನಾಗುತ್ತದೆ ನೋಡೋಣ, ಮುಂದೆ ಇನ್ನಷ್ಟು ಬರಬಹುದು ಎಂದರು.