ಟಿಪ್ಪು ಸುಲ್ತಾನ್ ದೇಗುಲಗಳಿಗೆ ದಾನ ನೀಡಿದ ಭೂಮಿಯನ್ನು ಮುಸ್ಲಿಮರು ಕೇಳಿದರೆ ವಾಪಸ್ ಕೊಡ್ತಾರಾ?: ಹೆಚ್'ಡಿ. ಕುಮಾರಸ್ವಾಮಿ
ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಟಿಪ್ಪು ಸುಲ್ತಾನ್ ದೇಗುಲಗಳಿಗೆ ದಾನವಾಗಿ ನೀಡಿರುವ ಭೂಮಿಯನ್ನು ಮುಸ್ಲಿಮರು ಕೇಳಿದರೆ ವಾಪಸ್ ಕೊಡುತ್ತಾರಾ ಎಂದು ಜೆಡಿಎಸ್ನ ಹಿರಿಯ ಮುಖಂಡ ಎಚ್ಡಿ ಕುಮಾರಸ್ವಾಮಿ ಬುಧವಾರ ಪ್ರಶ್ನಿಸಿದ್ದಾರೆ.
Published: 26th May 2022 08:25 AM | Last Updated: 26th May 2022 12:50 PM | A+A A-

ಹೆಚ್.ಡಿ.ಕುಮಾರಸ್ನಾಮಿ
ಮೈಸೂರು: ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಟಿಪ್ಪು ಸುಲ್ತಾನ್ ದೇಗುಲಗಳಿಗೆ ದಾನವಾಗಿ ನೀಡಿರುವ ಭೂಮಿಯನ್ನು ಮುಸ್ಲಿಮರು ಕೇಳಿದರೆ ವಾಪಸ್ ಕೊಡುತ್ತಾರಾ ಎಂದು ಜೆಡಿಎಸ್ನ ಹಿರಿಯ ಮುಖಂಡ ಎಚ್ಡಿ ಕುಮಾರಸ್ವಾಮಿ ಬುಧವಾರ ಪ್ರಶ್ನಿಸಿದ್ದಾರೆ. .
ಜಾಮಿಯಾ ಮಸೀದಿ ವಿವಾದದಲ್ಲಿ ಜೆಡಿಎಸ್ ನಿಲುವಿನ ಕುರಿತು ಮಾತನಾಡಿದ ಅವರು, ಶ್ರೀರಂಗಪಟ್ಟಣದ ಜಾಮಿಯ ಮಸೀದಿ ಬಗ್ಗೆ ಕೆಲವರು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ದೇವರು ಕನಸಿನಲ್ಲಿ ಬಂದು ನನ್ನ ಮೂಲಸ್ಥಾನ ಇಲ್ಲಿದೆ ಎಂದು ಹೇಳಿದ್ದನಾ? ಅದನ್ನು ಸರಿಪಡಿಸಿ ಅಂತ ಕೇಳಿದ್ನಾ? ಇವೆಲ್ಲಾ ಘಟನೆಗಳನ್ನು ನೋಡಿದರೆ ಮತ್ತೊಂದು ವಿವಾದ ಶುರು ಮಾಡೊ ಲಕ್ಷಣಗಳು ಗೋಚರಿಸುತ್ತಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇಗುಲದ 'ಸಲಾಂ ಆರತಿ'ಗೆ ಬ್ರೇಕ್.. ಸಂಧ್ಯಾರತಿಗೆ ಚಿಂತನೆ!
ಟಿಪ್ಪು ಕಾಲದಲ್ಲಿ ಹಲವು ಹಿಂದೂ ದೇವಾಲಯಗಳಿಗೆ ಭೂಮಿ ದಾನ ಮಾಡಿದ್ದಾನೆ. ಇದು ಆ ಸಮಾಜಕ್ಕೆ ಕನಸ್ಸಿಗೆ ಬರುತ್ತೆ. ಆವಾಗ ಆ ಸಮಾಜಕ್ಕೆ ಭೂಮಿ ಬಿಟ್ಟುಕೊಡುತ್ತೀರ? ಇಂಥದೆಲ್ಲವನ್ನು ಬಿಟ್ಟು ಜನರ ಬದುಕನ್ನ ನೋಡಿ ಎಂದು ಹೇಳಿದರು.
ಮಂಗಳೂರಿನಲ್ಲಿ ಮಸೀದಿ ವಿಚಾರವಾಗಿ ಹಿಂದುತ್ವ ಸಂಘಟನೆಗಳು ನಡೆಸಿದ ತಾಂಬೂಲ ಪ್ರಶ್ನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ತಾಂಬೂಲ ಪ್ರಶ್ನೆಗಿಂತ ಎಲ್ಲಾ ತೀರ್ಮಾನ ಆಗುವುದು ಕೇಶವಕೃಪಾದಲ್ಲಿ. ಅಲ್ಲಿಂದ ಬರುವ ಸಂದೇಶಗಳನ್ನು ಇವರು ಪಾಲಿಸುತ್ತಾರೆ. ಈ ರೀತಿಯ ವಾತಾವರಣದಿಂದ ದೇಶಕ್ಕೆ ಮುಂದೆ ಉತ್ತಮ ಭವಿಷ್ಯ ಇಲ್ಲ, ಇನ್ನೂ ಒಂದು ವರ್ಷ ಈ ತರದ ಬರವಣಿಗೆಗಳು ನಡೆಯತ್ತಿರುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.