ರೈತ ಸಂಘಗಳಿಗಾಗಿ ಚುನಾವಣೆ ನಡೆಸಿ: ಸಿಎಂ ಬೊಮ್ಮಾಯಿಗೆ ಡಿ.ಕೆ.ಸುರೇಶ್ ಆಗ್ರಹ
ರೈತ ಸಂಘಗಳು, ಕೃಷಿ ಸಮಾಜಗಳಿಗಾಗಿ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿ ಸಂಸದ ಡಿ ಕೆ ಸುರೇಶ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
Published: 27th May 2022 08:15 AM | Last Updated: 27th May 2022 08:15 AM | A+A A-

ಡಿಕೆ.ಸುರೇಶ್
ಬೆಂಗಳೂರು: ರೈತ ಸಂಘಗಳು, ಕೃಷಿ ಸಮಾಜಗಳಿಗಾಗಿ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿ ಸಂಸದ ಡಿ ಕೆ ಸುರೇಶ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಈ ಬಾರಿ ನ್ಯಾಯಸಮ್ಮತ ಚುನಾವಣೆಗಳು ನಡೆಯಬೇಕಾಗಿದೆ ಏಕೆಂದರೆ ರೈತ ಗುಂಪುಗಳು ಕಾರ್ಯನಿರ್ವಹಿಸಲು ಅಗತ್ಯವಾದ ವ್ಯವಸ್ಥೆಗಳನ್ನು ಸ್ಥಾಪಿಸಲು ಅದರಿಂದ ಸಾಧ್ಯವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸ್ನೇಹಿಯುತ ಸಾಲಗಳು ಮತ್ತು ಉತ್ತಮ ಮಾರುಕಟ್ಟೆಗಳಂತಹ ಸೌಲಭ್ಯಗಳನ್ನು ಪಡೆಯಲು ಹೆಣಗಾಡುತ್ತಿರುವ ರೈತ ಗುಂಪುಗಳು ತಮ್ಮ ಕುಂದುಕೊರತೆಗಳನ್ನು ಸರಿಪಡಿಸಲು ಸರಿಯಾದ ವೇದಿಕೆಯ ಕೊರತೆಯಿಂದ ಬಳಲುತ್ತಿದ್ದಾರೆ. ಮತ್ತು ಈ ನಿಟ್ಟಿನಲ್ಲಿ ಸರ್ಕಾರವು ಚುನಾವಣೆಗಳನ್ನು ನಡೆಸುವುದನ್ನು ಖಾತ್ರಿಪಡಿಸಿದರೆ, ಈ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಹೇಳಿದ್ದಾರೆ.