'ಜಾರಕಿಹೊಳಿಯದ್ದು ವಾಮಾಚಾರದ ಫ್ಯಾಮಿಲಿ, ಹೆಚ್ಚಾಗಿ ಸ್ಮಶಾನ ಪ್ರೀತಿಸ್ತಾರೆ; ಹಿಂದೂಗಳು ಎದ್ದು ನಿಂತರೆ ನಿಮ್ಮ ಹೆಸರು ಹೇಳಲು ಇಲ್ಲದಂತೆ ಮಾಡ್ತಾರೆ'

ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ ಅವರದ್ದು ವಾಮಾಚಾರದ ಕುಟುಂಬ ಇರಬೇಕು. ಹಾಗಾಗಿಯೇ ಅವರು ಹೆಚ್ಚಾಗಿ ಸ್ಮಶಾನವನ್ನು ಪ್ರೀತಿಸುತ್ತಾರೆ’ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಜಗ್ಗೇಶ್‌ ಟೀಕಿಸಿದ್ದಾರೆ.
ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ

ಬೆಂಗಳೂರು: ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ ಅವರದ್ದು ವಾಮಾಚಾರದ ಕುಟುಂಬ ಇರಬೇಕು. ಹಾಗಾಗಿಯೇ ಅವರು ಹೆಚ್ಚಾಗಿ ಸ್ಮಶಾನವನ್ನು ಪ್ರೀತಿಸುತ್ತಾರೆ’ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಜಗ್ಗೇಶ್‌ ಟೀಕಿಸಿದ್ದಾರೆ.

‘ಅವರು ಹಿಂದೂ ಸಂಸ್ಕೃತಿ ಒಪ್ಪದಿದ್ದರೂ ಮಾಟ, ಮಂತ್ರ ಮಾಡುವವರು ಆಗಿರಬೇಕು. ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಅವರು ವರ್ತಿಸಿದ್ದಾರೆ. ಇಲ್ಲಿನ ಧರ್ಮಕ್ಕೆ ಅವರು ಗೌರವ ನೀಡಬೇಕು’ ಡಿಕ್ಷನರಿ ಮಾಡಿದ್ದು, ಆಂಗ್ಲರು ಆಂಗ್ಲರಿಗೆ ದೇಶ ಒಡೆದು ಆಳುವ ಚಿಂತೆನೆಯಿತ್ತು. ಅವರಿಗೆ ದೇಶವನ್ನ ಕೂಡಿಸಿ ಒಗ್ಗಟ್ಟಾಗಿರಲಿ ಅನ್ನುವ ಚಿಂತನೆ ಇರಲಿಲ್ಲ. ಅವರು ಸಾವಿರ ಅರ್ಥ ಕೊಡಬಹುದು. ಆದರೆ ನೀವು ಹಿಂದೂವಾಗಿ ಈ ಮಣ್ಣಲ್ಲಿ ಜನಿಸಿದವರು ಎಂದು ಟಾಂಗ್ ನೀಡಿದ್ದಾರೆ.

ಸರ್ವೇಜನ ಸುಖಿನೋ ಭವಂತು ಅಂತ ಹೇಳೋ ಧರ್ಮ ಯಾವುದಾದರೂ ಇದ್ರೆ ಅದು ನಮ್ಮ ಹಿಂದೂ ಧರ್ಮ. ಆದರೆ ಜಾರಕಿಹೊಳಿಯವರಿಗೆ ಏನೂ ಗೊತ್ತಿಲ್ಲ. ಯಾಕಂದ್ರೆ ಅವರು ವಾಮಾಚಾರ ಫ್ಯಾಮಿಲಿಯವರು ಸ್ಮಶಾನ ಪ್ರೀತಿಸುವವರು ಎಂದು ಹೇಳಿದರು.

ಸ್ಮಶಾನವನ್ನ ಪ್ರೀತಿಸುವವರು ಯಾರು ಅಂದ್ರೆ ಅವರು ನಮ್ಮ ಸಂಸ್ಕೃತಿಯನ್ನ ಒಪ್ಪದೆ ಇರುವವರು. ಮಾಠಮಂತ್ರ ಮಾಯಾಜಾಲ ಮಾಡುವಂತವರು. ಅವರ ಸಂಖ್ಯೆ ಶೇ.1% ಅವರು ಇಂತವರ ಹೇಳಿಕೆಗಳನ್ನ ನಿಜವಾಗ್ಲೂ ಹಿಂದೂ ಅನ್ನೋ ಹೆಮ್ಮೆಯನ್ನಿಟ್ಟುಕೊಂಡಿರೋ ಹಿಂದೂಗಳು ಕ್ಷಮಿಸಲ್ಲ ಎಂದು ಕಿಡಿಕಾರಿದರು.

ಮಸಲ್ಮಾನರು ಅವರ ಧರ್ಮದ ವಿರುದ್ಧ ಮಾತನಾಡಿದ್ರೆ ಕೂಡಲೇ ಅವರ ಪರಿಣಾಮ ತುಂಬಾ ವಿಕೃತವಾಗಿರುತ್ತೆ. ಆದರೆ ನಮ್ಮ ಹಿಂದೂಗಳು ಶಾಂತಿಪ್ರಿಯರು ಕ್ಷಮಾಗುಣವುಳ್ಳವರು. ಅವರು ಕ್ಷಮಿಸಿದ್ದಾರೆ ಅಂತ ಪದೇ ಪದೇ ಈ ರೀತಿ ಮಾತನಾಡಲು ಹೋಗಬೇಡಿ. ಅವರು ಎದ್ದುನಿಂತ್ರು ಅಂದ್ರೆ ನಿಮ್ಮ ಹೆಸರು ಹೇಳಲು ಇಲ್ಲದಂತೆ ಮಾಡುತ್ತಾರೆ ಅಂತ ಜಗ್ಗೇಶ್ ಹೇಳಿದರು.

ನಿಜವಾಗಿಯೂ ಹಿಂದೂ ಎಂದು ಹೆಮ್ಮೆ ಇಟ್ಟುಕೊಂಡಿರುವವರು ನಿಮ್ಮನ್ನ ಕ್ಷಮಿಸಿಲ್ಲ. ನಮ್ಮ ಹಿಂದೂಗಳು ಸಾಧ್ವಿಗಳು. ಕ್ಷಮಾಗುಣ ದೊಡ್ಡಮಟ್ಟದಲ್ಲಿದೆ. ಅವರು ನಿಮ್ಮನ್ನ ಪದೇ ಪದೆ ಕ್ಷಮಿಸಿದ್ದಾರೆ ಎಂದು ಮಾತನಾಡಲು ಹೋಗಬೇಡಿ. ಅವರು ಎದ್ದು ನಿಂತರು ಅಂದರೆ ನಿಮಗೆ ಹೇಳೋಕೆ ಹೆಸರು ಇಲ್ಲದಂಗೆ ಮಾಡಿಬಿಡ್ತಾರೆ. ಅಷ್ಟು ತಾಕತ್ತು ಹಿಂದೂ ಧರ್ಮಕ್ಕೆ ಇದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com