ಕಾಂಗ್ರೆಸ್ ನ ಪೇಸಿಎಂಗೆ ಬಿಜೆಪಿ ಠಕ್ಕರ್; ಮುಂದುವರಿದ ಪೋಸ್ಟರ್ ವಾರ್; ಸಿದ್ದರಾಮಯ್ಯ ಪಿಎಫ್ ಐ ಭಾಗ್ಯ ಪೋಸ್ಟರ್ ರಿಲೀಸ್!

ಕಾಂಗ್ರೆಸ್ ನ ಪೇ ಸಿಎಂ ಪೋಸ್ಟರ್‍‌ಗೆ ಪ್ರತಿಯಾಗಿ ಬಿಜೆಪಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಕ್ಕರ್ ನೀಡಿದೆ. ಸಿದ್ದರಾಮಯ್ಯರ ಪಿಎಫ್ಐ ಭಾಗ್ಯ ಎಂಬ ಪೋಸ್ಟರ್ ಅನ್ನು ಕಂದಾಯ ಸಚಿವ ಆರ್‍‌ ಅಶೋಕ್ ವಿಧಾನಸೌಧದಲ್ಲಿ ಬಿಡುಗಡೆ ಮಾಡಿದರು.
ಪಿಎಫ್ ಐ ಭಾಗ್ಯ ಪೋಸ್ಟರ್
ಪಿಎಫ್ ಐ ಭಾಗ್ಯ ಪೋಸ್ಟರ್

ಬೆಂಗಳೂರು:  ಕಾಂಗ್ರೆಸ್ ನ ಪೇ ಸಿಎಂ ಪೋಸ್ಟರ್‍‌ಗೆ ಪ್ರತಿಯಾಗಿ ಬಿಜೆಪಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಕ್ಕರ್ ನೀಡಿದೆ. ಸಿದ್ದರಾಮಯ್ಯರ ಪಿಎಫ್ಐ ಭಾಗ್ಯ ಎಂಬ ಪೋಸ್ಟರ್ ಅನ್ನು ಕಂದಾಯ ಸಚಿವ ಆರ್‍‌ ಅಶೋಕ್ ವಿಧಾನಸೌಧದಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶೊಕ್, "ಸಿದ್ದರಾಮಯ್ಯ ಅವರು ಅವರ ಪತ್ರಿಕಾ ಹೇಳಿಕೆಯಲ್ಲಿ ಪಿಎಫ್ ಐನಿಷೇಧ ಬಗ್ಗೆ ಮೊದಲೇ ವರದಿ ನೀಡಿದ್ದೆ ಎಂದಿದ್ದಾರೆ. ನಾನು ಹೇಳಿದ ಬಳಿಕ ಬ್ಯಾನ್ ಮಾಡಿದ್ದಾರೆ ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ಇದೇ ಪಿಎಫ್ ಐ, ಕೆಫ್ ಡಿ ಬಗ್ಗೆ 1,600 ಕೇಸ್ ಹಾಕಿದ್ದರು. ಪೊಲೀಸರ ಮೇಲೆ, ಸಾರ್ವಜನಿಕರ ಮೇಲೆ ಹಲ್ಲೆ ಅಂತ ಕೇಸು ದಾಖಲಾಗಿತ್ತು.10-12-2012 ರಲ್ಲಿ ತನ್ವೀರ್ ಸೇಠ್ ಪತ್ರ ಬರೆದು ಪಿಎಫ್ ಐ ಅಮಾಯಕರು, ಅವರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ.

ಕೇಸ್ ವಾಪಸ್ ಪಡೆಯಬೇಕು ಅಂತ ಮನವಿ ಮಾಡುತ್ತಾರೆ. ತಸ್ಲೀಮಾ ನಸ್ರೀನ್ ಪುಸ್ತಕದ ಬಗ್ಗೆ ಇರೋ ಕೇಸ್ ಅದು. ಕಾಂಗ್ರೆಸ್ ನವರು ಅದನ್ನು ಮಾನ್ಯ ಮಾಡಲು ಅಂದಿನ ಡಿಜಿ -ಐಜಿ ಸರ್ಕಾರಕ್ಕೆ ಸಲಹೆ ಕೇಳುತ್ತಾರೆ. ಯಾವುದೇ ಕಾರಣಕ್ಕೂ ಪ್ರಕರಣ ವಾಪಸ್ ಪಡೆಯಬಾರದು ಅಂತ ಪೋಲಿಸ್ ಇಲಾಖೆ ರಿಪೋರ್ಟ್ ಕೊಡುತ್ತದೆ. ಲಾ ಕಮಿಟಿ ಕೂಡ ವಾಪಸ್ ಪಡೆಯುವುದು ಸಮಾಜಕ್ಕೆ ಮಾರಕ ಎಂದು ವರದಿ ಕೊಡ್ತಾರೆ" ಎಂದು ಆರೋಪಿಸಿದರು.

ಸಿದ್ದರಾಮಯ್ಯ ಈ ಎಲ್ಲಾ 1,600 ಜನ ವಿಧ್ವಂಸಕ ಕೃತ್ಯ ಎಸಗಿದವರ ಮೇಲಿನ ಪ್ರಕರಣ ವಾಪಸ್ ಪಡೆಯುವ ಕೆಲಸ ಮಾಡ್ತಾರೆ. ಈಗ ಹೇಳಿ, ದೇಶದ್ರೋಹಿಗಳಿಗೆ ಬೆಂಬಲ ಕೊಟ್ಟಿಲ್ವಾ ಎಂದಿ ಕಂದಾಯ ಸಚಿವ ಅಶೋಕ್‌ ಪ್ರಶ್ನಿಸಿದ್ದಾರೆ.ರಾಜ್ಯದಲ್ಲಿ ಬರ್ಬರವಾಗಿ ಹತ್ಯೆಗೀಡಾದ ಕುಟ್ಟಪ್ಪ, ರುದ್ರೇಶ್, ಮಡಿವಾಳ ಇವರ ಹತ್ಯೆ ಬಳಿಕ ಕೇಸ್ ಹಾಕಲು ಹಿಂಜರಿದರು. ಇದೆಲ್ಲವನ್ನೂ ನೋಡಿದರೇ ಕಾಂಗ್ರೆಸ್ ಈಗ ಸೂತಕದ ಮನೆಯಾಗಿದೆ. ಕೊಡಗು, ಮೈಸೂರು, ಮಂಗಳೂರಿನಲ್ಲಿ ಇವರಿಗೆ ವಿದೇಶಿ ಟ್ರೈನಿಂಗ್ ನೀಡಲಾಗಿದೆ ಎನ್ನುವ ಮಾಹಿತಿ ಅಧಿಕೃತವಾಗಿದೆ. ಬೈಕಲ್ಲಿ ಹೋಗುವಾಗ ಹೇಗೆ ಕತ್ತು ಕಡಿಯಬೇಕು, ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆ ಹೇಗೆ ಮಾಡಬೇಕು ಎಂದು ಪಿಎಫ್ಐ ಟ್ರೈನಿಂಗ್ ನೀಡಿದೆ ಎಂದು ಅಶೋಕ್ ತಿಳಿಸಿದ್ದಾರೆ.

PFI ನವರು ಇರುವ 175 ಕೇಸ್ ದಾಖಲಾಗಿದೆ. ಅವರಿಂದ ಪ್ರಾಯೋಜಿತರಾದ KFD ಭಾಗಿಯಾಗಿರೋ ಕೇಸ್ ಇದೆ. ಸಿದ್ದರಾಮಯ್ಯ ಹಲವು ಭಾಗ್ಯ ನೀಡಿದ್ದಾರೆ. PFI ಭಾಗ್ಯ ಸಹ ನೀಡಿದ್ದಾರೆ ಎನ್ನುವುದು ಈಗ ಅರ್ಥವಾಗುತ್ತಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಪೋಸ್ಟರ್ ವಾರ್ ಅಂತು ಮುಂದುವರೆದಿದೆ.

ರಾಹುಲ್ ಗಾಂಧಿ ಪಾದಯಾತ್ರೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳುವ ಬಿಜೆಪಿ ನಾಯಕರು ಪ್ರತಿ ದಿನ ರಾಹುಲ್ ಗಾಂಧಿ ಬಗ್ಗೆಯೇ ಮಾತನಾಡುತ್ತಾರೆ. ಆರೋಪಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಭಾರತ್ ಜೋಡೋ ಪಾದಯಾತ್ರೆ ಬಿಜೆಪಿಯವರನ್ನು ಅಧೀರರನ್ನಾಗಿಸಿದೆ'' ಎಂದು ಹೇಳಿದರು.

ಬಡತನ, ನಿರುದ್ಯೋಗ, ಆರ್ಥಿಕ ಅಸಮಾನತೆಯನ್ನು ಮುಂದಿಟ್ಟುಕೊಂಡು ಭಾರತ್ ಜೋಡೋ ಪಾದಯಾತ್ರೆ ನಡೆಸಲಾಗುತ್ತಿದೆ. ಈ ಮೂರು ವಿಚಾರಗಳ ಕುರಿತಂತೆ ರಾಹುಲ್‌ಗಾಂಧಿ ಸಂಸತ್, ಜನಸಮೂಹ ಹಾಗೂ ಮಾಧ್ಯಮ ಸಂದರ್ಶನದಲ್ಲಿ ಹೇಳಿದರೂ ರಾಹುಲ್‌ಗೆ ವಾಸ್ತವ ಪರಸ್ಥಿತಿಯ ಬಗ್ಗೆ ಜ್ಞಾನವಿಲ್ಲ ಎಂದು ಬಿಜೆಪಿಯವರು ಟೀಕಿಸುತ್ತಿದ್ದಾರೆ.

ಆದರೆ, ವಾಸ್ತವದಲ್ಲಿ ಬಿಜೆಪಿಯವರು ಭ್ರಮೆಯಲ್ಲಿದ್ದಾರೆ. ಅವರಿಗೆ ಈ ಮೂರು ವಿಚಾರಗಳಲ್ಲಿರುವ ಅಂಕಿ-ಅಂಶಗಳೇ ಗೊತ್ತಿಲ್ಲ. ಅದರ ಬಗ್ಗೆ ಅಧ್ಯಯನವನ್ನೂ ಮಾಡಿಲ್ಲ. ಬಿಜೆಪಿ ವಾಟ್ಸಾಪ್ ಯೂನಿವರ್ಸಿಟಿಯವರು ಹೇಳಿದ್ದನ್ನು ಮಾಧ್ಯಮದವರ ಮುಂದೆ ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com