ಭಾರತ್ ಜೋಡೋ ಯಾತ್ರೆ ವೇಳೆ ಧಾರ್ಮಿಕ ಸಂಸ್ಥೆಗಳಿಗೆ ಭೇಟಿ: ಸಾಮರಸ್ಯವಿಲ್ಲದೆ ಯಾವುದೇ ಪ್ರಗತಿಯಾಗದು ಎಂದ ರಾಹುಲ್ ಗಾಂಧಿ!

ರಾಷ್ಟ್ರದಾದ್ಯಂತ ಧಾರ್ಮಿಕ ದ್ವೇಷ  ಆತಂಕ ಮೂಡಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ 4 ನೇ ದಿನದಂದು ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿ ಸಾಮಾಜಿಕ ಸಾಮರಸ್ಯದ ಸಂದೇಶ ರವಾನಿಸಿದ್ದಾರೆ.
ದೇವಸ್ಥಾನದಲ್ಲಿ ರಾಹುಲ್ ಗಾಂಧಿ
ದೇವಸ್ಥಾನದಲ್ಲಿ ರಾಹುಲ್ ಗಾಂಧಿ

ಮೈಸೂರು: ರಾಷ್ಟ್ರದಾದ್ಯಂತ ಧಾರ್ಮಿಕ ದ್ವೇಷ  ಆತಂಕ ಮೂಡಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ 4 ನೇ ದಿನದಂದು ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿ ಸಾಮಾಜಿಕ ಸಾಮರಸ್ಯದ ಸಂದೇಶ ರವಾನಿಸಿದ್ದಾರೆ.

ಹಾರ್ಡಿಂಗ್ ವೃತ್ತದಿಂದ ಪಾದಯಾತ್ರೆ ಆರಂಭಿಸಿದ ರಾಹುಲ್ ಗಾಂಧಿ, ಸಿವಿಲ್ ಸೊಸೈಟಿ ಸದಸ್ಯರು ಹಾಗೂ ಬೆಳಗ್ಗಿನ ವಾಕಿಂಗ್ ಗೆ ಬಂದವರ ಜೊತೆ ಹೆಜ್ಜೆ ಹಾಕಿದರು. ಈ ವೇಳೆ ಸಾಂಸ್ಕೃತಿಕ ತಂಡದ ನೃತ್ಯ ದಸರಾ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.

ಪಾದಯಾತ್ರೆಯಲ್ಲಿ ವಿವಿಧ ಜಾನಪದ ತಂಡಗಳು ಸೇರಿಕೊಂಡು ಮೈಸೂರಿನ ವಿಶಾಲ ರಸ್ತೆಗಳಲ್ಲಿ ಆಕರ್ಷಕ ಪ್ರದರ್ಶನ ನೀಡಿದವು, ಈ ಪಾದಯಾತ್ರೆ ಮೆರವಣಿಗೆಯು ಮಿನಿ ದಸರಾದಂತೆ ಕಾಣುತ್ತಿತ್ತು. ಮಾರ್ಗಮಧ್ಯದಲ್ಲಿ, ರಾಹುಲ್ ಜೆಎಸ್ಎಸ್ ಧರ್ಮಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳನ್ನು ಭೇಟಿ ಮಾಡಿದರು, ಮಸೀದಿ-ಎ-ಅಜಮ್ ಬಳಿ ಮೌಲ್ವಿಗಳು, ಮೈಸೂರು ಬಿಷಪ್ ಮತ್ತು ಜೈನ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಿದರು. ಇಸ್ಕಾನ್ ಪ್ರತಿನಿಧಿಗಳು, ಯುವಕರು ಮತ್ತು ಮಹಿಳೆಯರು ಭಾರತ್ ಜೋಡೋ ಧ್ವಜಗಳೊಂದಿಗೆ ಸಾಲಿನಲ್ಲಿ ನಿಂತು ಕೋಮು ಸೌಹಾರ್ದತೆ ಮತ್ತು ಜಾತ್ಯತೀತತೆಗಾಗಿ ಸಂದೇಶ ಸಾರುತ್ತಿರುವುದಾಗಿ ರಾಹುಲ್ ಗಾಂಧಿ ಹೇಳಿದರು.

ಭಾನುವಾರ ಮೈಸೂರಿನಲ್ಲಿ ಸುರಿದ ಭಾರೀ ಮಳೆಯಲ್ಲಿ ತಮ್ಮ ಸಾರ್ವಜನಿಕ ಭಾಷಣದ ಮೂಲಕ ಜನರ ಗಮನ ಸೆಳೆದ ರಾಹುಲ್,  ತಮ್ಮ ಮಾತುಗಳನ್ನು ಆಲಿಸುವ ಮೂಲಕ ಅನೇಕ ವಿಷಯಗಳ ಬಗ್ಗೆ ತಿಳಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು. ಅವರು ವಿವಿಧ ಧರ್ಮಗಳ ಮುಖ್ಯಸ್ಥರನ್ನು ಭೇಟಿಯಾದಾಗ ಮತ್ತು ಪೂಜಾ ಸ್ಥಳಗಳಿಗೆ ಭೇಟಿ ನೀಡಿದಾಗ "ಸಾಮರಸ್ಯವಿಲ್ಲದೆ, ಯಾವುದೇ ಪ್ರಗತಿಯಿಲ್ಲ" ಎಂದು ಅವರು ಒತ್ತಿ ಹೇಳಿದರು.

ಸೋಮವಾರ 22 ಕಿಮೀ ಯಾತ್ರೆಯಲ್ಲಿ ರಾಹುಲ್ ರೈತರನ್ನು ತಲುಪಿದರು ಮತ್ತು ಪಾಂಡವಪುರ ಬಳಿಯ ಹೊಲಗಳಲ್ಲಿ ಕಟಾವು ಮಾಡಿದ ಕಬ್ಬಿನ ರುಚಿ ಸವಿದರು. ಸಾರ್ವಜನಿಕರು ನೀಡಿದ ಪತ್ರವನ್ನೂ  ಸ್ವೀಕರಿಸಿದರು, ಮತ್ತು ವಿದ್ಯಾರ್ಥಿಗಳು ಮತ್ತು ಮಕ್ಕಳನ್ನು ತಮ್ಮೊಂದಿಗೆ ನಡೆಯುವಂತೆ ಮಾಡಿ ಎಲ್ಲರನ್ನು ಆಕರ್ಷಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com