ಕರ್ನಾಟಕ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ- ರಾಹುಲ್ ಗಾಂಧಿ

ಕರ್ನಾಟಕ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.ಪ್ರತಿಯೊಂದು ಕಾಮಗಾರಿಗಳಲ್ಲಿಯೂ ಶೇ.40 ರಷ್ಟು ಕಮೀಷನ್ ಪಡೆಯುತ್ತಿದ್ದಾರೆ. 13,000 ಖಾಸಗಿ ಶಾಲೆಗಳು ಶೇ. 40 ರಷ್ಟು ಕಮೀಷನ್ ನೀಡಿವೆ. ಇದು ಅತ್ಯಂತ ಭ್ರಷ್ಟ ಸರ್ಕಾರ ಅಂತಾ ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ ಎಂದರು.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಹಿರಿಯೂರು: ಕರ್ನಾಟಕ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಹಿರಿಯೂರಿನಲ್ಲಿಂದು ಭಾರತ್ ಜೋಡೋ ಯಾತ್ರೆಯ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ರಾಹುಲ್ ಗಾಂಧಿ ಪ್ರತಿಯೊಂದು ಕಾಮಗಾರಿಗಳಲ್ಲಿಯೂ ಶೇ.40 ರಷ್ಟು ಕಮೀಷನ್ ಪಡೆಯುತ್ತಿದ್ದಾರೆ. 13,000 ಖಾಸಗಿ ಶಾಲೆಗಳು ಶೇ. 40 ರಷ್ಟು ಕಮೀಷನ್ ನೀಡಿವೆ. ಇದು ಅತ್ಯಂತ ಭ್ರಷ್ಟ ಸರ್ಕಾರ ಅಂತಾ ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ ಎಂದರು.

ಕರ್ನಾಟಕದಲ್ಲಿ ಉದ್ಯೋಗಗಳುಮಾರಾಟವಾಗುತ್ತಿವೆ. ಸಿಎಂ ಹುದ್ದೆಗಾಗಿ ರೂ. 2,500 ಕೋಟಿ ನೀಡಲಾಗಿದೆ ಅಂತಾ ಬಿಜೆಪಿ ಶಾಸಕರೇ ಹೇಳಿದ್ದಾರೆ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳನ್ನು 80 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಸಹಾಯಕ ಪ್ರಾಧ್ಯಾಪಕರು ಮತ್ತು ಇಂಜಿನಿಯರಿಂಗ್ ಹುದ್ದೆಗಳು ಕೂಡಾ ಮಾರಾಟವಾಗಿವೆ. ಈ ಜನರು ಮಾರಾಟ ಮಾಡಬಹುದಾದ ಎಲ್ಲವನ್ನೂ ಮಾರಾಟ ಮಾಡುತ್ತಾರೆ ಎಂದು ಹೇಳಿದರು.

 ದ್ವೇಷ ಮತ್ತು ಪ್ರೀತಿಯ ನಡುವಿನ ಈ ಯುದ್ಧ ಹೊಸದಲ್ಲ. ಬಸವಣ್ಣ, ನಾರಾಯಣ ಗುರು, ಅಂಬೇಡ್ಕರ್‌ ಅವರು ನಡೆಸಿದ ಹೋರಾಟವೂ ಇದೇ. ಈ ಮಹಾನ್ ನಾಯಕರ ಧ್ವನಿಯೇ ಪ್ರತಿಧ್ವನಿಸುತ್ತಿದೆ. ಈ ನಾಯಕರಲ್ಲಿ ಯಾರೂ ಹಿಂಸೆ ಅಥವಾ ದ್ವೇಷವನ್ನು ಬೋಧಿಸಿಲ್ಲ ಎಂದರು. 

ಈ ಯಾತ್ರೆಯು ಬಿಜೆಪಿ-ಆರ್‌ಎಸ್‌ಎಸ್ ಹರಡುತ್ತಿರುವ ದ್ವೇಷ, ಹಿಂಸಾಚಾರ ಮತ್ತು ಕೋಪದ ವಿರುದ್ಧದ ಹೋರಾಟವಾಗಿದೆ. ದೇಶ ಇಬ್ಭಾಗವಾಗುವುದಿಲ್ಲ, ದೇಶ ಒಗ್ಗಟ್ಟಾಗಿ ನಿಲ್ಲುತ್ತದೆ ಎಂಬ ಸಂದೇಶವನ್ನು ಬಿಜೆಪಿಗೆ ನೀಡಲಿದೆ. ಈ ಸಂದೇಶ ಯಾತ್ರೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಯಾತ್ರೆಯಲ್ಲಿ ಯಾವುದೇ ಹಿಂಸೆ, ದ್ವೇಷ ಮತ್ತು ಕೋಪ ಇಲ್ಲ ಎಂದು ರಾಹುಲ್ ಗಾಂಧಿ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com