ಭಾರತ್ ಜೋಡೋ ಯಾತ್ರೆ ಪ್ರಭಾವ ಪರಿಶೀಲಿಸಿ ರ್ಯಾಲಿಗಳ ಮುಂದುವರೆಸಲು ಕಾಂಗ್ರೆಸ್ ನಿರ್ಧಾರ
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಕರ್ನಾಟಕದ ಮೇಲೆ ಮಾಡಿದ ಪ್ರಭಾವವನ್ನು ಅಧ್ಯಯನ ಮಾಡಿ, ಕಾರ್ಯತಂತ್ರಗಳ ರೂಪಿಸಲು ಕಾಂಗ್ರೆಸ್ ಮುಂದಾಗಿದೆ.
Published: 26th October 2022 07:53 AM | Last Updated: 27th October 2022 12:57 PM | A+A A-

ಡಿಕೆ.ಶಿವಕುಮಾರ್
ಬೆಂಗಳೂರು: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಕರ್ನಾಟಕದ ಮೇಲೆ ಮಾಡಿದ ಪ್ರಭಾವವನ್ನು ಅಧ್ಯಯನ ಮಾಡಿ, ಕಾರ್ಯತಂತ್ರಗಳ ರೂಪಿಸಲು ಕಾಂಗ್ರೆಸ್ ಮುಂದಾಗಿದೆ.
2023 ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಮತ್ತು ಹಳೇ ಮೈಸೂರು ಮುಂತಾದ ಪ್ರದೇಶಗಳಲ್ಲಿ ಕಾರ್ಯತಂತ್ರಗಳ ರೂಪಿಸಲು ಕಾಂಗ್ರೆಸ್ ಈ ಅಧ್ಯಯನ ನಡೆಸಲಿದ್ದು, ಮುಂದಿನ ದಿನಗಳಲ್ಲಿ ರ್ಯಾಲಿಗಳನ್ನು ಆರಂಭಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
“ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ನಡೆದಿದೆ ಎನ್ನಲಾಗಿರುವ ‘ಶೇ 40 ರಷ್ಟು ಕಮಿಷನ್’ ವಿಚಾರ ಜನರ ಮನತಟ್ಟಿದ್ದು, ಯಾತ್ರೆ ವೇಳೆ ರಾಹುಲ್ ಗಾಂಧಿ ವಿಚಾರ ಪ್ರಸ್ತಾಪಿಸಿದಾಗಲೆಲ್ಲಾ ಜನರಿಂದ ಅಕ್ರೋಶಗಳು ವ್ಯಕ್ತವಾಗಿದ್ದವು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರಾ ರಾಜಕೀಯ: ಬದ್ಧತೆ ಇಲ್ಲದ ಪಾರ್ಟ್ ಟೈಮ್ ರಾಜಕಾರಣಿ 'ಪಪ್ಪು'; ಬದಲಾಗಲಿದೆ 'ರಾಗಾ' ಇಮೇಜ್!
ರಾಯಚೂರಿನಲ್ಲಿ ನಾವು ರ್ಯಾಲಿಗಳನ್ನು ಹೇಗೆ ನಡೆಸಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲೇ ನಮ್ಮ ನಾಯಕರು ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಫೋಟೋಗಳನ್ನು ಪ್ರತೀ ಜಿಲ್ಲೆಯಲ್ಲಿ ಹಾಕಲಾಗುವುದು. ಇದರಿಂದ ಯಾತ್ರೆಯಲ್ಲಿ ಪಾಲ್ಗೊಳ್ಳದವರು ಯಾತ್ರೆಯ ಅನುಭವವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ನೇತೃತ್ವದ ಸಮಿತಿಯು ಯಾತ್ರೆಯ ಪರಿಣಾಮ ಅಧ್ಯಯನ ನಡೆಸಲಿದ್ದು, ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್, ಪ್ರೊ.ರಾಧಾಕೃಷ್ಣ, ಐಶ್ವರ್ಯ ಮಹದೇವ್, ಗುರುಪಾದಸ್ವಾಮಿ, ಶಶಿಕಾಂತ್ ಸೆಂಥಿಲ್, ಮನ್ಸೂರ್ ಅಲಿಖಾನ್, ದಿನೇಶ್ ಗೂಳಿಗೌಡ ಸೇರಿದಂತೆ ಹಲವು ನಾಯಕರು ಸಮಿತಿಯಲ್ಲಿರಲಿದ್ದಾರೆ.
ಇದನ್ನೂ ಓದಿ: ಕುವೆಂಪು ಹೇಳಿದ್ದು ಸತ್ಯ, ಕರ್ನಾಟಕ ನಿಜಕ್ಕೂ ಶಾಂತಿ ಹಾಗೂ ಸಾಮರಸ್ಯದ ನಾಡು: ರಾಹುಲ್ ಗಾಂಧಿ
ಯಾತ್ರೆಯ ಸಂದರ್ಭದಲ್ಲಿ ಜನರ ಕಷ್ಟಗಳು ಮತ್ತು ಅವರ ಆಕಾಂಕ್ಷೆಗಳನ್ನು ಗಮನಿಸಲಾಯಿತು ಮತ್ತು ಇದು ಪಕ್ಷದ ಪ್ರಣಾಳಿಕೆಯ ಭಾಗವಾಗಿರುತ್ತದೆ. ರಾಹುಲ್ ಯಾತ್ರೆಯಿಂದ ಯುವಕರು ಮತ್ತು ಹಿರಿಯರಿಗೆ ಹತ್ತಿರವಾಗಿದ್ದಾರೆ.
ಯಾತ್ರೆಗೆ ಜನರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, “ಭಾರತ್ ಜೋಡೋ ಯಾತ್ರೆಯು ನಮಗೆ ರಾಜಕೀಯವಾಗಿ ಪ್ರಯೋಜನವನ್ನು ನೀಡಿದೆ. ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಬಗ್ಗೆ ಜನರಲ್ಲಿ ಬೇಸರವಿದೆ. ಬೆಲೆ ಏರಿಕೆ, ಎಲ್‌ಪಿಜಿ ಬೆಲೆ, ನಿರುದ್ಯೋಗ, ದ್ವೇಷ, ಭ್ರಷ್ಟಾಚಾರ, ರಸಗೊಬ್ಬರದ ಬೆಲೆ ಮುಂತಾದ ಸಮಸ್ಯೆಗಳು ಜನರನ್ನು ತಲುಪಿವೆ.
ಮೇಕೆದಾಟು ಪಾದಯಾತ್ರೆ ಆರಂಭಿಸುವಂತೆ ರಾಹುಲ್ ಗಾಂಧಿ ನನಗೆ ಸಲಹೆ ನೀಡಿದ್ದಾರೆ. 'ಸ್ವಾತಂತ್ರ್ಯ ನಡಿಗೆ' ಆರಂಭಿಸುವ ಮೂಲಕ ನಾವು ಬಿಜೆಪಿಯ 'ಹರ್ ಘರ್ ತಿರಂಗ'ಕ್ಕೆ ತಿರುಗೇಟು ನೀಡಲಾಗುತ್ತದೆ ಎಂದು ತಿಳಿಸಿದರು.