ಮುಂದಿನ 50 ವರ್ಷಗಳಲ್ಲಿ ಭೂಮಿಗೆ ಕೊರತೆ: ಸರ್ಕಾರಿ ಜಮೀನು ಕಾಯ್ದಿರಿಸುವಂತೆ ಶಾಸಕರಿಗೆ, ಸಂಸದರಿಗೆ ಪತ್ರ: ಅಶೋಕ್
ಮುಂದಿನ 50 ವರ್ಷಗಳವರೆಗೆ ಜಮೀನಿನ ಕೊರತೆಯಾಗದಂತೆ ಸರ್ಕಾರಿ ಜಮೀನುಗಳನ್ನು ಕಾಯ್ದಿರಿಸುವಂತೆ ಶಾಸಕರು, ಎಂಎಲ್‌ಸಿಗಳು ಮತ್ತು ಸಂಸದರಿಗೆ ಪತ್ರ ಬರೆಯುವುದಾಗಿ ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ.
Published: 22nd September 2022 10:07 AM | Last Updated: 22nd September 2022 01:11 PM | A+A A-

ಆರ್.ಅಶೋಕ್
ಬೆಂಗಳೂರು: ಮುಂದಿನ 50 ವರ್ಷಗಳವರೆಗೆ ಜಮೀನಿನ ಕೊರತೆಯಾಗದಂತೆ ಸರ್ಕಾರಿ ಜಮೀನುಗಳನ್ನು ಕಾಯ್ದಿರಿಸುವಂತೆ ಶಾಸಕರು, ಎಂಎಲ್‌ಸಿಗಳು ಮತ್ತು ಸಂಸದರಿಗೆ ಪತ್ರ ಬರೆಯುವುದಾಗಿ ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ.
ವಿಧಾನಪರಿಷತ್‌ನಲ್ಲಿ ಬುಧವಾರ ಬಿಜೆಪಿ ಸದಸ್ಯ ಗೋಪಿನಾಥರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾನು ಇತ್ತೀಚೆಗೆ ದಾವಣಗೆರೆಯ ಗ್ರಾಮವೊಂದಕ್ಕೆ ಭೇಟಿ ನೀಡಿದಾಗ ಅಲ್ಲಿ ಸ್ಮಶಾನ ಇರಲಿಲ್ಲ ಮತ್ತು ಉದ್ದೇಶಕ್ಕಾಗಿ ಭೂಮಿ ನೀಡಲು ಯಾರೂ ಸಿದ್ಧರಿರಲಿಲ್ಲ. ಸದ್ಯ ಸುಮಾರು 2 ಸಾವಿರ ಗ್ರಾಮಗಳಲ್ಲಿ ಸ್ಮಶಾನ ಇಲ್ಲ,'' ಎಂದು ಹೇಳಿದರು. ಈಗಿನ ಟ್ರೆಂಡ್ ನೋಡಿದರೆ ಮುಂದಿನ 20 ವರ್ಷಗಳಲ್ಲಿ ಆಸ್ಪತ್ರೆ, ಶಾಲಾ-ಕಾಲೇಜುಗಳನ್ನು ನಿರ್ಮಿಸಲು ಸರ್ಕಾರಿ ಭೂಮಿ ಲಭ್ಯವಾಗುವುದಿಲ್ಲ ಎಂದರು.
ಮುಂದಿನ 50 ವರ್ಷಗಳ ಕಾಲ ಜಮೀನಿನ ಕೊರತೆಯಾಗದಂತೆ ಸರ್ಕಾರಿ ಜಮೀನುಗಳನ್ನು ಗುರುತಿಸಿ ಕಾಯ್ದಿರಿಸುವಂತೆ ಮುಂದಿನ ವಾರದಲ್ಲಿ ಎಲ್ಲ ಶಾಸಕರು, ಎಂಎಲ್‌ಸಿಗಳು ಮತ್ತು ಸಂಸದರಿಗೆ ಪತ್ರ ಬರೆದು ಮನವಿ ಮಾಡುತ್ತೇನೆ. ಲಭ್ಯವಿರುವ ಭೂಮಿಯನ್ನು ಅತಿಕ್ರಮಣದಿಂದ ರಕ್ಷಿಸಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅಶೋಕ್ ಹೇಳಿದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಪೌರಾಡಳಿತ ತಿದ್ದುಪಡಿ ಮಸೂದೆ ಅಂಗೀಕಾರ
ಕಾಂಗ್ರೆಸ್ ಎಂಎಲ್ ಸಿ ಯುಬಿ ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅಶೋಕ್, ಕೆಲವು ಪ್ರಕರಣಗಳಲ್ಲಿ ಕೋವಿಡ್-19 ಸಂತ್ರಸ್ತರ ಕುಟುಂಬಗಳು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡದ ಕಾರಣ ಅವರಿಗೆ ಪರಿಹಾರವನ್ನು ನೀಡಲು ವಿಳಂಬವಾಗಿದೆ ಎಂದು ಅವರು ಹೇಳಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ಮಸೂದೆ, 2022, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ, 2022, ಕರ್ನಾಟಕ ಪುರಸಭೆಗಳ (ತಿದ್ದುಪಡಿ) ಮಸೂದೆ, 2022, ಕರ್ನಾಟಕ ರೇಷ್ಮೆ ಮತ್ತು ರೇಷ್ಮೆ ನೂಲು (ಉತ್ಪಾದನೆ ನಿಯಂತ್ರಣ, ಸರಬರಾಜು , ವಿತರಣೆ ಮತ್ತು ಮಾರಾಟ) (ತಿದ್ದುಪಡಿ) ಮಸೂದೆ, 2022, ಮತ್ತು ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ, 2022, ಬುಧವಾರ ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲ್ಪಟ್ಟವು. ಎಲ್ಲಾ ಐದು ಮಸೂದೆಗಳನ್ನು ಪ್ರತಿಪಕ್ಷಗಳು ಸ್ವಾಗತಿಸಿದವು.