ರಾಷ್ಟ್ರೀಯ ಪಕ್ಷಗಳ ಅಬ್ಬರದ ನಡುವೆ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಸದ್ದಿಲ್ಲದೆ ತಯಾರಿ: ರಾಜ್ಯೋತ್ಸವದಂದು 'ಪಂಚರತ್ನ ಯಾತ್ರೆ'ಗೆ ಚಾಲನೆ!

ಕಾಂಗ್ರೆಸ್‌, ಬಿಜೆಪಿ ಪರಸ್ಪರ ಆರೋಪ–ಪ್ರತ್ಯಾರೋಪದಲ್ಲಿ ತೊಡಗಿರುವ ಸಮಯದಲ್ಲೇ ಸದ್ದಿಲ್ಲದೇ ಚುನಾವಣಾ ಪ್ರಚಾರಕ್ಕೆ ಅಣಿಯಾಗುತ್ತಿರುವ ಜೆಡಿಎಸ್‌, ನವೆಂಬರ್ 1ರಿಂದ ಪಂಚರತ್ನ ರಥ ಯಾತ್ರೆ ಆರಂಭಿಸಲಿದೆ.
ಪುತ್ರ ನಿಖಿಲ್ ಜೊತೆ ಎಚ್ ಡಿ ಕುಮಾರಸ್ವಾಮಿ
ಪುತ್ರ ನಿಖಿಲ್ ಜೊತೆ ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್‌, ಬಿಜೆಪಿ ಪರಸ್ಪರ ಆರೋಪ–ಪ್ರತ್ಯಾರೋಪದಲ್ಲಿ ತೊಡಗಿರುವ ಸಮಯದಲ್ಲೇ ಸದ್ದಿಲ್ಲದೇ ಚುನಾವಣಾ ಪ್ರಚಾರಕ್ಕೆ ಅಣಿಯಾಗುತ್ತಿರುವ ಜೆಡಿಎಸ್‌, ನವೆಂಬರ್ 1ರಿಂದ ಪಂಚರತ್ನ ರಥ ಯಾತ್ರೆ ಆರಂಭಿಸಲಿದೆ.

ಇತ್ತೀಚೆಗಷ್ಟೇ ದೆಹಲಿಗೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಬಿಹಾರ ಸಿಎಂ ನಿತೀಶ್ ಕುಮಾರ್  ಮತ್ತು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರನ್ನು ಭೇಟಿ ಮಾಡಿ ತಮ್ಮದೇ ಆದ ಯೋಜನೆ ರೂಪಿಸಿದ್ದಾರೆ. ಚಂದ್ರಶೇಖರ್ ರಾವ್ ಅವರ ಸಲಹೆ ಮೇರೆಗೆ, ಕುಮಾರಸ್ವಾಮಿ  ದೆಹಲಿಯಲ್ಲಿ ಚುನಾವಣಾ ತಂತ್ರಜ್ಞರನ್ನು ಭೇಟಿ ಮಾಡಿದ್ದಾರೆ ಎಂದು ಮೂಲವೊಂದು ತಿಳಿಸಿದೆ, "ವಾಸ್ತವವಾಗಿ ತಂತ್ರಜ್ಞರನ್ನು ಭೇಟಿ ಮಾಡಲು ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದರೂ, ಲಾಜಿಸ್ಟಿಕ್ ಮತ್ತು ಆರ್ಥಿಕವಾಗಿ, ಅಗತ್ಯ ವೆಚ್ಚಗಳನ್ನು ಪೂರೈಸಲು ಜೆಡಿಎಸ್‌ಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.

ಕನ್ನಡಿಗರು ಸಂಭ್ರಮಿಸುವ ಕರ್ನಾಟಕ ರಾಜ್ಯೋತ್ಸವದ ದಿನವೇ ಯಾತ್ರೆಗೆ ಚಾಲನೆ ನೀಡಲಾಗುವುದು. ಪಕ್ಷ ಅಧಿಕಾರಕ್ಕೆ ಬಂದರೆ ಏನು ಮಾಡಲಿದೆ ಎನ್ನುವುದನ್ನು ಯಾತ್ರೆ ಮೂಲಕ ಜನರಿಗೆ ಮನವರಿಕೆ ಮಾಡಲು ಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳಂತೆ ಅಬ್ಬರವಿಲ್ಲದೆ ಯಾತ್ರೆಯ ರೂಪುರೇಷೆಗಳನ್ನು ಶೀಘ್ರ ಬಿಡುಗಡೆ ಮಡಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

‘ಪಂಚರತ್ನ ರಥಯಾತ್ರೆ ಆಗಸ್ಟ್‌ ತಿಂಗಳು ಆರಂಭವಾಗಬೇಕಿತ್ತು. ಮಳೆಯಿಂದಾಗಿ ಮುಂದೂಡಲಾಗಿತ್ತು. ಕೆಲ ತಿಂಗಳ ಹಿಂದೆ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಸಮಾವೇಶಗಳು ಯಶಸ್ವಿಯಾಗಿದ್ದವು. ನೀರಾವರಿ ಯೋಜನೆಗಳ ಜಾರಿಗೆ  4 ಲಕ್ಷ ಕೋಟಿ ರು. ಬೇಕಿದೆ. ಯೋಜನೆ ಜಾರಿಗೆ ದೂರದೃಷ್ಟಿಯ ಅಗತ್ಯವಿದೆ. ಈ ಕುರಿತು ಜನರಿಗೆ ಮನವರಿಕೆ ಮಾಡಲಾಗುವುದು’ ಎಂದೂ ಅವರು ವಿವರ ನೀಡಿದರು.

ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ನ ‘ಪೇಸಿಎಂ’ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕೆಟ್ಟ ಅಭಿರುಚಿ ಹೊಂದಿರುವ ಇಂತಹ ಪ್ರಚಾರಗಳನ್ನು ನಾನು ಸ್ವಾಗತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ಇರಲಿಲ್ಲವೇ? ವಿರೋಧ ಪಕ್ಷಗಳು ಇಂತಹ ಋಣಾತ್ಮಕ ಪ್ರಚಾರದಲ್ಲಿ ತೊಡಗುವ ಬದಲು ಯಾವ ಬದಲಾವಣೆ ತರಲು ಉದ್ದೇಶಿಸಿದ್ದೇವೆ ಎಂಬುದನ್ನು ಜನರಿಗೆ ತಿಳಿಸಬೇಕು,'' ಎಂದು ಸಲಹೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com