ಮೈಸೂರು: ಚುನಾವಣೆಗಾಗಿ ರಾಜ್ಯ ಸರ್ಕಾರದಿಂದ ಮೀಸಲಾತಿ ವಿಷಯ ದುರ್ಬಳಕೆ: ಕಾಂಗ್ರೆಸ್ ಪ್ರತಿಭಟನಾ ಧರಣಿ

ರಾಜ್ಯ ಸರ್ಕಾರ ಚುನಾವಣೆಗಾಗಿ ಮೀಸಲಾತಿ ವಿಷಯ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್, ಮೈಸೂರಿನಲ್ಲಿಂದು ಪ್ರತಿಭಟನಾ ಧರಣಿ ನಡೆಸಿತು. 
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು

ಮೈಸೂರು: ರಾಜ್ಯ ಸರ್ಕಾರ ಚುನಾವಣೆಗಾಗಿ ಮೀಸಲಾತಿ ವಿಷಯ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್, ಮೈಸೂರಿನಲ್ಲಿಂದು ಪ್ರತಿಭಟನಾ ಧರಣಿ ನಡೆಸಿತು. 

ಸಂವಿಧಾನ ಬಚಾವೋ, ದೇಶ ಬಚಾವೋ ಹೆಸರಿನಲ್ಲಿ ನಡೆದ ಈ ಪ್ರತಿಭಟನಾ ಧರಣಿಯಲ್ಲಿ  ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ವಿಪಕ್ಷ ನಾಯಕ ನಾಯಕ ಸಿದ್ದರಾಮಯ್ಯ, ತನ್ವೀರ್ ಸೇಠ್, ಮಾಜಿ ಸಚಿವ ಡಾ.ಹೆಚ್.ಸಿ. ಮಹಾದೇವಪ್ಪ, ಮಾಜಿ ಮೇಯರ್ ಪುರುಷೋತ್ತಮ್ ಮತ್ತಿತರರು ಪಾಲ್ಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪರಿಶಿಷ್ಟ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಬಿಜೆಪಿಗೆ ತಿರುಗುಬಾಣ ಆಗುತ್ತಿದೆ. ಸಂವಿಧಾನದ ಮಾನ್ಯತೆ ಇಲ್ಲದ ರೀತಿ ಮೀಸಲಾತಿ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಮೀಸಲಾತಿ ಹೆಚ್ಚಳವೇ ಅವೈಜ್ಞಾನಿಕ. ಹಿಂದೆಯೂ ಹಲವು ಬಾರಿ ಮೀಸಲಾತಿ ಹೆಚ್ಚಳವಾಗಿದೆ ಅದೆಲ್ಲಾ ಸಂವಿಧಾನ್ಮಾತಕವಾಗಿ ನಡೆದಿತ್ತು. ಚುನಾವಣೆಗಾಗಿ ಬಿಜೆಪಿ ಈ ಗಿಮಿಕ್ ಮಾಡಿದೆ ಎಂದರು. 

 ತನ್ವೀರ್ ಸೇಠ್ ಮಾತನಾಡಿ,  2 ಬಿ ಕೆಟಗರಿಯಲ್ಲಿ ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಮಾಡಿ, ಲಿಂಗಾಯಿತರಿಗೆ ನೀಡಲಾಗಿದೆ. ಚುನಾವಣೆಗಾಗಿ ಒಂದು ಜನಾಂಗ ಮತ್ತೊಂದು ಜನಾಂಗದ ನಡುವೆ ಗೊಂದಲ ಸೃಷ್ಟಿ ಮಾಡಿದ್ದಾರೆ. ಇದನ್ನು ಕಾನೂನು ಬದ್ದವಾಗಿ ಮಾಡಿಲ್ಲ. ಈ ರಾಷ್ಟ್ರದ ಸಂವಿಧಾನ ಉಳಿಸಬೇಕು ಎಂಬುದು ಕಾಂಗ್ರೆಸ್ ಆಶಯ. ಅದಕ್ಕಾಗಿ ಈ ಧರಣಿ ಮಾಡುತ್ತಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com