ನಿಮಗೆ ನಮ್ಮ ಮತ ಬೇಕೆ, ಹಾಗಾದರೆ ಶಿಕ್ಷಣ ವಲಯಕ್ಕೆ ಒತ್ತು ನೀಡಿ: ರಾಜಕೀಯ ನೇತಾರರಿಗೆ ಯುವ ಮತದಾರರ ಆಗ್ರಹ

ಮತದಾನಕ್ಕೆ ಇನ್ನು ಕೇವಲ ಒಂದು ತಿಂಗಳು ಬಾಕಿ ಇರುವಾಗ ರಾಜಕೀಯ ಪಕ್ಷಗಳು ಯುವ ಮತದಾರರನ್ನು ಸೆಳೆಯಲು ನಿರುದ್ಯೋಗಿ ಯುವಕರಿಗೆ ಮಾಸಿಕ ಭತ್ಯೆ, ಉದ್ಯೋಗ, ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ಉನ್ನತ ಶಿಕ್ಷಣ ಸಾಲ, ಮೀಸಲಾತಿ ಸೇರಿದಂತೆ ಇನ್ನಿತರೆ ಯೋಜನೆಗಳನ್ನು ಘೋಷಿಸುತ್ತಿವೆ.
ಯುವ ಮತದಾರರು
ಯುವ ಮತದಾರರು

ಬೆಂಗಳೂರು: ಮತದಾನಕ್ಕೆ ಇನ್ನು ಕೇವಲ ಒಂದು ತಿಂಗಳು ಬಾಕಿ ಇರುವಾಗ ರಾಜಕೀಯ ಪಕ್ಷಗಳು ಯುವ ಮತದಾರರನ್ನು ಸೆಳೆಯಲು ನಿರುದ್ಯೋಗಿ ಯುವಕರಿಗೆ ಮಾಸಿಕ ಭತ್ಯೆ, ಉದ್ಯೋಗ, ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ಉನ್ನತ ಶಿಕ್ಷಣ ಸಾಲ, ಮೀಸಲಾತಿ ಸೇರಿದಂತೆ ಇನ್ನಿತರೆ ಯೋಜನೆಗಳನ್ನು ಘೋಷಿಸುತ್ತಿವೆ. ಆದಾಗ್ಯೂ, ಯುವಕರು ತಾವು ಕೇವಲ ಭರವಸೆಗಳ ಆಧಾರದ ಮೇಲೆ ಮತ ಚಲಾಯಿಸುವುದಿಲ್ಲ, ಅಭ್ಯರ್ಥಿಗಳ ಹಿನ್ನಲೆ, ಸಾಮಾಜಿಕ ಕೆಲಸ-ಶೈಕ್ಷಣಿಕ ಅರ್ಹತೆ ಮತ್ತು ಅಭ್ಯರ್ಥಿಯ ದೂರದೃಷ್ಟಿಯ ಮೇಲೆ ಮತ ಚಲಾಯಿಸುತ್ತೇವೆ ಎಂದು ಹೇಳುತ್ತಿದ್ದಾರೆ. 

ಮೊಟ್ಟಮೊದಲ ಬಾರಿಗೆ ಮತದಾನ ಮಾಡುತ್ತಿದ್ದೇನೆ ಎಂದಿರುವ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಗುಣ ಎಂಜೆ, ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯನ್ನು ನೋಡುವುದಿಲ್ಲ. ನನ್ನ ಕ್ಷೇತ್ರಕ್ಕೆ ಅಭ್ಯರ್ಥಿ ನೀಡಿರುವ ಭರವಸೆಗಳನ್ನು ನಾನು ನೋಡುತ್ತೇನೆ. ಮೊದಲು ಅಭ್ಯರ್ಥಿಯ ಹಿನ್ನೆಲೆ, ಶೈಕ್ಷಣಿಕ ಅರ್ಹತೆ, ಹಿಂದಿನ ಕೆಲಸ ಮತ್ತು ದೂರದೃಷ್ಟಿ ಸಹ ಪರಿಶೀಲಿಸುತ್ತೇನೆ ಎಂದು ಹೇಳಿದರು. ರಾಜಕೀಯವು ಜನರ ಸೇವೆಗಾಗಿ ಉದ್ದೇಶಿಸಿದ್ದು, ಅಭ್ಯರ್ಥಿಗಳು ಜನರ ಸೇವೆ ಮಾಡಬೇಕು ಮತ್ತು ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಗುಣ ಹೇಳಿದರು.

ಗುಣಾ ಅವರ ಸ್ನೇಹಿತೆ ಐಶ್ವರ್ಯಾ ಎ ಅವರು ಈ ಹಿಂದೆ ಅಭ್ಯರ್ಥಿ / ಪಕ್ಷ ಮಾಡಿದ ಕೆಲಸದ ಆಧಾರದ ಮೇಲೆ ಮತ ಚಲಾಯಿಸುತ್ತಾರೆ, ಆದರೆ ಅವರ ವಿಷನ್ ಡಾಕ್ಯುಮೆಂಟ್ ನ್ನು ಪರಿಶೀಲಿಸಿದ ನಂತರ ನಿರ್ಧರಿಸುತ್ತಾರೆ ಎಂದು ಹೇಳಿದರು.

ಅನುಷಾ ಆರ್ ಅವರು ತಮ್ಮ ಸ್ನೇಹಿತರಿಗಿಂತ ಸ್ವಲ್ಪ ಭಿನ್ನವಾಗಿದ್ದಾರೆ, ಅವರು ಸೃಜನಶೀಲತೆ ಹೊಂದಿರುವ ಅಭ್ಯರ್ಥಿಗಳಿಗೆ ಮತ್ತು ಆವಿಷ್ಕಾರಗಳಿಗೆ ಪ್ರಚೋದನೆಯನ್ನು ನೀಡುವವರಿಗೆ ಆದ್ಯತೆ ನೀಡುವುದಾಗಿ ಹೇಳಿದರು. ರಾಜ್ಯ ಮತ್ತು ದೇಶದ ಅಭಿವೃದ್ಧಿಯ ಮೇಲೆ ನೇರ ಪರಿಣಾಮ ಬೀರುವುದರಿಂದ ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ನಿರ್ಣಾಯಕ ಎಂದು ಮತ್ತೊಬ್ಬ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಸುನೀತಾ ಹೇಳಿದರು.

ತಮ್ಮ ಚೊಚ್ಚಲ ಮತ ಚಲಾಯಿಸಲು ಉತ್ಸುಕರಾಗಿರುವ ಅರ್ಪಿತಾ ಪಿ, ತಮ್ಮ ಮತ ರೈತರೊಂದಿಗೆ ಇರುವ ಪಕ್ಷಕ್ಕೆ ಎಂದು ಹೇಳಿದರು. ರೈತರು ನಮ್ಮ ಆರ್ಥಿಕತೆಯ ಬೆನ್ನೆಲುಬು. ಕೃಷಿ ಕ್ಷೇತ್ರ ಬೆಳೆಯಲು ಅವರಿಗೆ ನೆರವು ನೀಡಬೇಕು. ಕೃಷಿಯೊಂದಿಗೆ, ಶಿಕ್ಷಣ ಕ್ಷೇತ್ರಕ್ಕೂ ನಿರ್ಣಾಯಕ ಗಮನ ಬೇಕು ಏಕೆಂದರೆ ಅದು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ನಾವು ವಿದ್ಯಾವಂತ ಅಭ್ಯರ್ಥಿಯನ್ನು ಹುಡುಕಬೇಕು. ಈ ಮಾನದಂಡಗಳನ್ನು ಪೂರೈಸುವ ಪಕ್ಷಕ್ಕೆ ನನ್ನ ಮತ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com