ಚುನಾವಣೆ ಸಮಯದಲ್ಲಿ ರಾಜಕೀಯ ನಾಯಕರ ಒತ್ತಡ ಹೇಗಿರುತ್ತದೆ ನೋಡಿ: ಕಾರಿನಲ್ಲಿಯೇ ಕುಳಿತು ಊಟ ಮಾಡಿದ ಹೆಚ್ ಡಿ ಕುಮಾರಸ್ವಾಮಿ!

ಸಾಮಾನ್ಯ ದಿನಗಳಲ್ಲಿ ರಾಜಕೀಯ ನಾಯಕರೆಂದರೆ ಬಿಡುವಿಲ್ಲದ ದಿನಚರಿ. ಇನ್ನು ಚುನಾವಣೆ ಸಮಯವೆಂದರೆ ಕೇಳಬೇಕೆ, ಪಕ್ಷದ ನಾಯಕರು, ಕಾರ್ಯಕರ್ತರ ಜೊತೆ ಓಡಾಟ, ಸಭೆ, ಚರ್ಚೆ, ಟಿಕೆಟ್ ಹಂಚಿಕೆ, ಕ್ಷೇತ್ರಗಳಲ್ಲಿ ಪ್ರಚಾರ, ಚುನಾವಣೆಯಲ್ಲಿ ಗೆಲ್ಲುವ ತಂತ್ರಗಾರಿಗೆ ಹೀಗೆ ಒಂದೇ ಎರಡೇ ಪಟ್ಟಿ ಮಾಡಿದರೆ ಮುಗಿಯದಷ್ಟು ಕೆಲಸಗಳು.
ಕಾರಿನಲ್ಲಿ ಕುಳಿತು ಊಟ ಮಾಡುತ್ತಿರುವ ಹೆಚ್ ಡಿ ಕುಮಾರಸ್ವಾಮಿ
ಕಾರಿನಲ್ಲಿ ಕುಳಿತು ಊಟ ಮಾಡುತ್ತಿರುವ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಸಾಮಾನ್ಯ ದಿನಗಳಲ್ಲಿ ರಾಜಕೀಯ ನಾಯಕರೆಂದರೆ ಬಿಡುವಿಲ್ಲದ ದಿನಚರಿ. ಇನ್ನು ಚುನಾವಣೆ ಸಮಯವೆಂದರೆ ಕೇಳಬೇಕೆ, ಪಕ್ಷದ ನಾಯಕರು, ಕಾರ್ಯಕರ್ತರ ಜೊತೆ ಓಡಾಟ, ಸಭೆ, ಚರ್ಚೆ, ಟಿಕೆಟ್ ಹಂಚಿಕೆ, ಕ್ಷೇತ್ರಗಳಲ್ಲಿ ಪ್ರಚಾರ, ಚುನಾವಣೆಯಲ್ಲಿ ಗೆಲ್ಲುವ ತಂತ್ರಗಾರಿಗೆ ಹೀಗೆ ಒಂದೇ ಎರಡೇ ಪಟ್ಟಿ ಮಾಡಿದರೆ ಮುಗಿಯದಷ್ಟು ಕೆಲಸಗಳು...

ರಾಜಕೀಯ ನಾಯಕರಿಗೆ ಚುನಾವಣೆ ಸಮಯದಲ್ಲಿ ಎಷ್ಟು ಒತ್ತಡವಿರುತ್ತದೆ, ಕುಟುಂಬದವರ ಜೊತೆ ಮಾತನಾಡುವುದು ಬಿಡಿ ಊಟ-ತಿಂಡಿ ಮಾಡಲು, ಸರಿಯಾಗಿ ಮೂರ್ನಾಲ್ಕು ಗಂಟೆ ನಿದ್ದೆ ಮಾಡಲು ಕೂಡ ಪುರುಸೊತ್ತು ಇರುವುದಿಲ್ಲ. ಕುಮಾರಸ್ವಾಮಿಯವರು ಕಾರಿನಲ್ಲಿಯೇ ಕುಳಿತು ತಟ್ಟೆಯಲ್ಲಿ ಆಹಾರ ಸೇವಿಸುತ್ತಿರುವ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 

ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ಇರುವುದರಿಂದ ರಾಜಕೀಯ ಪಕ್ಷಗಳು ಬಿರುಸಿನ ವೇಗದಲ್ಲಿ ಪ್ರಚಾರ ಕಾರ್ಯಾಚರಣೆ ನಡೆಸುತ್ತಿವೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ(H D Kumaraswamy) ಕೂಡ ಹೊರತಾಗಿಲ್ಲ, 110 ದಿನಗಳಿಗೂ ಹೆಚ್ಚುಕಾಲ ಕರ್ನಾಟಕ ರಾಜ್ಯದ ಉದ್ದಗಲಕ್ಕೂ ಪಂಚರತ್ನ ರಥಯಾತ್ರೆ ನಡೆಸಿದ ಹೆಚ್‌ಡಿ ಕುಮಾರಸ್ವಾಮಿ ಈಗ ಪಕ್ಷದ ಮುಂದಿನ ಕಾರ್ಯದಲ್ಲಿ ತೊಡಗಿದ್ದಾರೆ. ಜೆಡಿಎಸ್ ನ ಇನ್ನೊಂದು ಪಟ್ಟಿ ಬಿಡುಗಡೆಯಾಗಬೇಕಿದೆ. 

ನಿನ್ನೆ ಗುರುವಾರ ರಾತ್ರಿ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮುಗಿಸಿ ಬೆಂಗಳೂರಿಗೆ ಹೊರಟ ಮಾಜಿ ಮುಖ್ಯಮಂತ್ರಿಗಳು, ಮಾರ್ಗಮಧ್ಯದಲ್ಲಿಯೇ ಕಾರಿನಲ್ಲಿ ಕುಳಿತು ಊಟ ಮಾಡಿದರು. ಬಳಿಕ ಅವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com