ಯಡಿಯೂರಪ್ಪ ಪುತ್ರನಾಗಿರುವುದಕ್ಕೆ ಟಿಕೆಟ್ ಸಿಕ್ಕಿದೆ ಎಂದು ಹೇಳುವುದು ಸರಿಯಲ್ಲ: ಬಿವೈ ವಿಜಯೇಂದ್ರ
ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರನಾಗಿರುವುದಕ್ಕೇ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಬಿವೈ ವಿಜಯೇಂದ್ರ ಅವರು ಹೇಳಿದ್ದಾರೆ.
Published: 14th April 2023 01:24 PM | Last Updated: 14th April 2023 01:33 PM | A+A A-

ವಿವೈ ವಿಜಯೇಂದ್ರ
ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರನಾಗಿರುವುದಕ್ಕೇ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಬಿವೈ ವಿಜಯೇಂದ್ರ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷವು ನನಗೆ ಟಿಕೆಟ್ ನೀಡಿದೆ. ಆದರೆ, ಯಡಿಯೂರಪ್ಪ ಅವರ ಪುತ್ರನಾಗಿರುವುದಕ್ಕೇ ಟಿಕೆಟ್ ನೀಡಲಾಗಿದೆ ಎಂದು ಹೇಳುವುದು ಸರಿಯಲ್ಲ. 40 ವರ್ಷಗಳಿಂದ ನನ್ನ ತಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದ ಸ್ಪರ್ಧೆಗಿಳಿಯುತ್ತಿರುವುದು ನಾನು ಮಾಡಿದ ಪುಣ್ಯ. ಶಿಕಾರಿಪುರದಿಂದ ಸ್ಪರ್ಧಿಸಲು ನನಗೆ ಬಹಳ ಸಂತಸ ತಂದಿದೆ. ಇದು ನನ್ನ ಕನಸು ನನಸಾಗಿತ್ತು ಎಂದು ಹೇಳಿದರು.
ಇದನ್ನೂ ಓದಿ: ಪಕ್ಷಕ್ಕೆ ಬಹುಮತ ಖಚಿತ, ಇದರಲ್ಲಿ ಯಾವುದೇ ಸಂದೇಹವಿಲ್ಲ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (ಸಂದರ್ಶನ)
"ಬಿಎಸ್ ಯಡಿಯೂರಪ್ಪ ಮತ್ತು ಇತರ ಹಿರಿಯ ನಾಯಕರಿಂದ ಇಂದು ಬಿಜೆಪಿ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಪ್ರದೇಶವನ್ನು ತಲುಪಿದೆ. ಇಂದು ಕರ್ನಾಟಕವು ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ಡಬಲ್ ಇಂಜಿನ್ ಸರ್ಕಾರದಿಂದ ಸಂತಸದಿಂದ ಇದೆ ಎಂದು ತಿಳಿಸಿದರು.