ಸರ್ಪ ಎಂದಿಗೂ ಶಿವನ ಕೊರಳಿನಲ್ಲಿರುತ್ತೆ: ಖರ್ಗೆ 'ವಿಷ ಸರ್ಪ' ಹೇಳಿಕೆ ವಿರುದ್ಧ ಪ್ರಧಾನಿ ಮೋದಿ ಕಿಡಿ
ಅಭಿವೃದ್ಧಿಯ ಬಗ್ಗೆ ಚರ್ಚಿಸುವ ಬದಲು ಕಾಂಗ್ರೆಸ್ ನಾಯಕರು ವಿಷದ ಹಾವಿನ ಬಗ್ಗೆ ಚರ್ಚಿಸುತ್ತಿದ್ದಾರೆ. ಈ ಬಗ್ಗೆ ನನಗೇನು ಬೇಸರವಿಲ್ಲ. ಶಿವನ ಕೊರಳಿಗೆ ಶೋಭಾಯ ಮಾನವಾಗಿರುವುದು ಹಾವು. ನನಗೆ ಈ ದೇಶದ ಜನತೆ ಶಿವ ಸ್ವರೂಪಿ. ಶಿವ ಸ್ವರೂಪಿಯಾದ ನಿಮ್ಮ ಕೊರಳಲ್ಲಿ ಹಾವಾಗಿ ಇರಲು ನನಗೆ ಖುಷಿ ಇದೆ...
Published: 30th April 2023 01:29 PM | Last Updated: 02nd May 2023 06:45 PM | A+A A-

ಪ್ರಧಾನಿ ಮೋದಿ
ಕೋಲಾರ: ಅಭಿವೃದ್ಧಿಯ ಬಗ್ಗೆ ಚರ್ಚಿಸುವ ಬದಲು ಕಾಂಗ್ರೆಸ್ ನಾಯಕರು ವಿಷದ ಹಾವಿನ ಬಗ್ಗೆ ಚರ್ಚಿಸುತ್ತಿದ್ದಾರೆ. ಈ ಬಗ್ಗೆ ನನಗೇನು ಬೇಸರವಿಲ್ಲ. ಶಿವನ ಕೊರಳಿಗೆ ಶೋಭಾಯ ಮಾನವಾಗಿರುವುದು ಹಾವು. ನನಗೆ ಈ ದೇಶದ ಜನತೆ ಶಿವ ಸ್ವರೂಪಿ. ಶಿವ ಸ್ವರೂಪಿಯಾದ ನಿಮ್ಮ ಕೊರಳಲ್ಲಿ ಹಾವಾಗಿ ಇರಲು ನನಗೆ ಖುಷಿ ಇದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.
ಕೋಲಾರದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ವಿಷ ಸರ್ಪ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು.
ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಇದರಿಂದ ಹೆಚ್ಚು ತೊಂದರೆಗೆ ಒಳಗಾದವರು, ನೊಂದಿರುವವರು ಎಂದರೆ ಅದು ಕಾಂಗ್ರೆಸ್ನವರು. ಇದನ್ನು ಅವರಿಗೆ ಸಹಿಸೋಕೆ ಆಗತಿಲ್ಲ. ಹೀಗಾಗಿ ನನಗೆ ಬೆದರಿಕೆ ಹಾಕುತ್ತಿದ್ದಾರೆಂದು ಹೇಳಿದರು.
ಇದನ್ನೂ ಓದಿ: ಪ್ರಧಾನಿ ಮೋದಿಯವರು 'ನೀಲಕಂಠ', ಹಾವುಗಳನ್ನು ಹೇಗೆ ಪಳಗಿಸಬೇಕು ಎಂಬುದು ಅವರಿಗೆ ಗೊತ್ತು: ಸಿಎಂ ಬೊಮ್ಮಾಯಿ
ಅಭಿವೃದ್ದಿ ಬಗ್ಗೆ ಚರ್ಚಿಸಬೇಕಿರುವ ಸಂದರ್ಭದಲ್ಲಿ ಹಾವಿನ ವಿಷದ ಬಗ್ಗೆ ಚರ್ಚಿಸುತ್ತಿದ್ದಾರೆ. ಆದರೆ, ಇದರ ಬಗ್ಗೆ ನನಗೆ ಬೇಸರವಿಲ್ಲ. ಶಿವನ ಕೊರಳಿಗೆ ಶೋಭಾಯ ಮಾನವಾಗಿರುವುದು ಹಾವು. ನನಗೆ ಈ ದೇಶದ ಜನತೆ ಶಿವ ಸ್ವರೂಪಿ. ಶಿವ ಸ್ವರೂಪಿಯಾದ ನಿಮ್ಮ ಕೊರಳಲ್ಲಿ ಹಾವಾಗಿ ಇರಲು ನನಗೆ ಖುಷಿ ಇದೆ. ಆದರೆ, ಇವರ ಮತ್ತು ಇಂತಹ ಮಾತುಗಳಿಂದ ದೂರವಿಡಲು ಮೇ 10 ರಂದು ನಮಗೆ ಮತ ಹಾಕಿ ಆಶಿರ್ವಾದ ಮಾಡಿ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತನ್ನಿ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ. ಮೇ 10 ರಂದು ನಮಗೆ ಮತ ಹಾಕಿ ಆಶಿರ್ವದಿಸಿ. ಕರ್ನಾಟಕದ ಜನತೆ ಸೇವೆ ಮಾಡಲು ನನಗೆ ಮತ್ತೊಂದು ಅವಕಾಶ ನೀಡಿ ಎಂದರು. ಇದೇ ವೇಳೆ ಮನೆ ಮನೆಗೆ ತೆರಳಿ ಮೋದಿಗೆ ಆಶೀರ್ವದಿಸುವಂತೆ ಮನವಿ ಮಾಡಿಕೊಳ್ಳಿ ಎಂದು ನೆರೆದಿದ್ದವರಲ್ಲಿ ಮನವಿ ಮಾಡಿಕೊಂಡರು.