ಯಡಿಯೂರಪ್ಪರನ್ನೇ ಪಂಕ್ಚರ್ ಮಾಡಿರುವ ಬಿಜೆಪಿ ಹೈಕಮಾಂಡ್: ಸಿದ್ದರಾಮಯ್ಯ ತಿರುಗೇಟು
ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಬಸ್ ಪಂಕ್ಚರ್ ಆಗಿದೆ ಎಂಬ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
Published: 05th February 2023 03:43 PM | Last Updated: 06th February 2023 02:15 PM | A+A A-

ಸಿದ್ದರಾಮಯ್ಯ
ಕಲಬುರಗಿ: ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಬಸ್ ಪಂಕ್ಚರ್ ಆಗಿದೆ ಎಂಬ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಹುದ್ದೆಯಿಂದ ತೆಗೆದು ಈಗಾಗಲೇ ಯಡಿಯೂರಪ್ಪರನ್ನು ಬಿಜೆಪಿ ಹೈ ಕಮಾಂಡ್ ಈಗಾಗಲೇ ಪಂಕ್ಚರ್ ಮಾಡಿದೆ ಎಂದರು.
ಬಿಎಸ್ ವೈ ಬಗ್ಗೆ ಅಪಾರವಾದ ಗೌರವ ಮತ್ತು ಅನುಕಂಪವಿದೆ. ಅವರು ಆರೋಗ್ಯವಾಗಿದ್ದು, ಬಿಜೆಪಿಯನ್ನು ಅಧಿಕಾರಕ್ಕೆ ತರಲು ಹೋರಾಡುತ್ತಿದ್ದಾರೆ. ಕಳೆದ ಬಾರಿ ಯಡಿಯೂರಪ್ಪ ಇದ್ದಾಗಲೇ 104 ಸೀಟು ಬಂದಿತ್ತು ಈಗ ಅವರು ಮೈಸಸ್ ಆಗಿದ್ದಾರೆ. ಈಗೆಷ್ಟು ಬರ್ತಾವೆ ನೋಡಿ ಎಂದು ಲೇವಡಿ ಮಾಡಿದರು.
Yediyurappa has already been punched by the BJP high command by removing him from the post of Chief Minister. Will people trust him and vote for him again? The people of Karnataka are fed up with the BJP govt: Siddaramaiah, Congress leader & former Karnataka CM, in Kalaburagi pic.twitter.com/bWp4mG1GwE
— ANI (@ANI) February 5, 2023
ಜನ ಇವರನ್ನು ನಂಬಿ ಮತ್ತೆ ಮತ ಹಾಕುತ್ತಾರಾ? ರಾಜ್ಯದ ಜನತೆ ಬಿಜೆಪಿ ಆಡಳಿತದಿಂದ ಬೇಸತ್ತಿದ್ದು, ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.