ಗಾಂಧಿ ಹತ್ಯೆಗೂ ಆರ್‌ಎಸ್‌ಎಸ್‌ಗೂ ಸಂಬಂಧ ಕಲ್ಪಿಸಿದ ಎಚ್‌ಡಿ.ಕುಮಾರಸ್ವಾಮಿ: ವಿವಾದ ಸೃಷ್ಟಿ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ್ದು ಆರ್‌ಎಸ್‌ಎಸ್. ಅವರು ಬ್ರಾಹ್ಮಣರು, ಅವರು ನಮ್ಮ ಸಾಂಪ್ರದಾಯಿಕ ಕರ್ನಾಟಕ ಬ್ರಾಹ್ಮಣರಂತಲ್ಲ, ಎರಡು ಮೂರು ವಿಭಿನ್ನ ರೀತಿಯ ಬ್ರಾಹ್ಮಣರಿದ್ದಾರೆ ಎಂದು ಜೆಡಿಎಸ್‌ನ ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಭಾನುವಾರ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.
Published: 06th February 2023 07:55 AM | Last Updated: 27th February 2023 05:58 PM | A+A A-

ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ್ದು ಆರ್‌ಎಸ್‌ಎಸ್. ಅವರು ಬ್ರಾಹ್ಮಣರು, ಅವರು ನಮ್ಮ ಸಾಂಪ್ರದಾಯಿಕ ಕರ್ನಾಟಕ ಬ್ರಾಹ್ಮಣರಂತಲ್ಲ, ಎರಡು ಮೂರು ವಿಭಿನ್ನ ರೀತಿಯ ಬ್ರಾಹ್ಮಣರಿದ್ದಾರೆ ಎಂದು ಜೆಡಿಎಸ್‌ನ ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಭಾನುವಾರ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.
ಉತ್ತರ ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದ ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಅವರು, ಸರ್ವೇ ಜನ ಸುಖಿನೋಭವಂತು -- ಎಲ್ಲಾ ಜನರ ಸಂತೋಷವನ್ನು ನಂಬಿದ ನಾವು ಸಾಂಪ್ರದಾಯಿಕ ಬ್ರಾಹ್ಮಣರ ಪಾದಗಳಿಗೆ ಗೌರವಪೂರ್ವಕವಾಗಿ ಬೀಳುತ್ತಿದ್ದೆವು, ಆದರೆ ಈ ಬ್ರಾಹ್ಮಣರು ಅವರಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಕುತಂತ್ರಕ್ಕೆ ಯಾರೂ ಬಲಿಯಾಗಬಾರದು. 'ಬಿಜೆಪಿ ಗೆದ್ದರೆ ಬಿಜೆಪಿಯ ಬೆನ್ನೆಲುಬಾಗಿರುವ ಸಂಘಪರಿವಾರ ಮರಾಠ ಪೇಶ್ವೆ ಸಮುದಾಯದ ವಂಶಸ್ಥರಾದ ಕೇಂದ್ರ ರಸಗೊಬ್ಬರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡಲು ನಿರ್ಧರಿಸಲಾಗಿದೆ. ಅವರು ನಮ್ಮ ಹಿಂದಿನ ಕಾಲದ ಬ್ರಾಹ್ಮಣರಂತೆ ಅಲ್ಲ. ಶ್ರೇಷ್ಟ ಸಮಾಜ ಸುಧಾರಕ ಶಂಕರಾಚಾರ್ಯರ ವಂಶಸ್ಥರನ್ನು ಶೃಂಗೇರಿ ಶಂಕರ ಮಠದಿಂದ ಹೊರಹಾಕಿದ್ದು ಇದೇ ಸಮುದಾಯದವರೇ. ಮಹಾತ್ಮಾ ಗಾಂಧೀಜಿಯವರ ಹತ್ಯೆ ಮಾಡಿದರು. ರಾಜ್ಯದಲ್ಲಿ ಸುಮಾರು ಎಂಟು ಉಪಮುಖ್ಯಮಂತ್ರಿಗಳನ್ನು ಹೊಂದಲು ನಿರ್ಧರಿಸಿದ್ದಾರೆ. ಅಗತ್ಯವಿದ್ದರೆ ನಾನು ಎಂಟು ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಬಲ್ಲೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಅದು ನಮ್ಮ ರಾಜ್ಯವನ್ನು ನಾಶ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಹ್ಲಾದ್ ಜೋಷಿ ಸಂಸ್ಕೃತಿ ಇರುವ ಬ್ರಾಹ್ಮಣರಲ್ಲ, ಸಮಾಜವನ್ನು ಒಡೆಯುವ ಬ್ರಾಹ್ಮಣರ ಗುಂಪಿಗೆ ಸೇರಿದವರು: ಹೆಚ್ ಡಿ ಕುಮಾರಸ್ವಾಮಿ
ಜೆಡಿಎಸ್ ಪಂಚರತ್ನ ಯಾತ್ರೆ ಮತ್ತು ಜನರ ಪ್ರತಿಕ್ರಿಯೆ ಜೋಶಿ ಅವರನ್ನು ಚಿಂತೆಗೀಡು ಮಾಡಿದೆ. ಜೋಶಿಯವರು ಪಂಚರತ್ನ ಯಾತ್ರೆಯನ್ನು ಕೀಳಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದು, ಅದು ಒಳ್ಳೆಯದಲ್ಲ. ಮಾರ್ಚ್ ಕೊನೆಯ ವಾರದವರೆಗೆ ಬೆಂಗಳೂರು, ಹಾಸನ ಮೈಸೂರು ಮತ್ತು ವಿವಿಧ ಪ್ರದೇಶಗಳಲ್ಲಿ ಯಾತ್ರೆ ನಡೆಸಲಾಗುವುದು ಎಂದು ಅವರು ಹೇಳಿದರು.
ಈ ನಡುವೆ ಹೇಳಿಕೆ ಸಂಬಂಧ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ರವಿಕುಮಾರ್ ಅವರು, ಸ್ವಾರ್ಥ, ಬೂಟಾಟಿಕೆಗೆ ಜ್ವಲಂತ ಉದಾಹರಣೆ ಕುಮಾರಸ್ವಾಮಿ ಆಗಿದ್ದಾರೆ. ಪ್ರಹ್ಲಾದ್ ಜೋಶಿ ವಿರುದ್ಧ ಅವಹೇಳನಕಾರಿ ಹೇಳಿಕೆನ್ನು ಬಿಜೆಪಿ ಖಂಡಿಸುತ್ತದೆ. ಗೋಪಾಲಕೃಷ್ಣ ಗೋಖಲೆ, ರಾನಡೆ, ಬಾಲಗಂಗಾಧರ ತಿಲಕ್ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು ಮತ್ತು ಅವರೆಲ್ಲರೂ ಬ್ರಾಹ್ಮಣರಾಗಿದ್ದರು ಎಂದು ಹೇಳಿದರು.
ಬಳಿಕ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಜೆಡಿಎಸ್‌ಗೆ ಪ್ರಶ್ನಿಸಿದ ಅವರು, ಜೆಡಿಎಸ್‌ನ ಮೊದಲ ಕುಟುಂಬದವರು ಯಾರು ಎಂದು ಪರೋಕ್ಷವಾಗಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ನಮಗೆ ಬ್ರಾಹ್ಮಣರು ಸಮಸ್ಯೆಯಲ್ಲ, ಬ್ರಾಹ್ಮಣ್ಯವೇ ದೊಡ್ಡ ಸಮಸ್ಯೆ; ಜೆಡಿಎಸ್ ಒಂದು ಬ್ರಾಹ್ಮಣ್ಯದ ಪಕ್ಷ: ಚೇತನ್
ಮಹಾತ್ಮ ಗಾಂಧಿಯವರ ಹತ್ಯೆಯಲ್ಲಿ ಆರ್‌ಎಸ್‌ಎಸ್‌ನ ಪಾತ್ರವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ, ಆದರೆ. ಇದೀಗ ಹೇಳಿಕೆ ನೀಡುತ್ತಿರುವ ಕುಮಾರಸ್ವಾಮಿಯವರು ಯಾವುದೇ ಪುರಾವೆಗಳನ್ನು ನೀಡಿಲ್ಲ ಎಂದು ತಿಳಿಸಿದರು.
ವಿಧಾನಸಭೆಯಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್‌ಗೆ ಬಹುಮತ ಪಡೆಯುವುದು ಕುಮಾರಸ್ವಾಮಿ ಅವರಿಗೆ ಇಷ್ಟವಿಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಹುದು ಎಂಬ ಭಯದಲ್ಲಿ ಅತಂತ್ರರಾಗುತ್ತಿದ್ದಾರೆ. ಅವರ ಕುತಂತ್ರಗಳನ್ನು ಬಯಲಿಗೆಳೆಯುತ್ತೇವೆ. ನಾವೂ ರಾಜಕೀಯ ಮಾಡಲೇ ಬಂದಿದ್ದೇವೆಂದು ಹೇಳಿದರು.
ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರತಿಕ್ರಿಯೆ ನೀಡಿ, ರಾಜಕೀಯದಲ್ಲಿ ಜಾತಿ ಅಪ್ರಸ್ತುತ. ಈ ಸಂದರ್ಭದಲ್ಲಿ ಪಕ್ಷ ಮತ್ತು ಅದರ ಕಾರ್ಯಕ್ರಮಗಳ ಬಗ್ಗೆ ಮಾತನಾಡುವುದು ಮುಖ್ಯ, ವೈಯಕ್ತಿಕ ಮಾತು ಪ್ರಸ್ತುತವಲ್ಲ ಎಂದರು.
ಕುಮಾರಸ್ವಾಮಿ ಅವರು ನಮ್ಮ ಪಕ್ಷದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ, ಅವರು ಮೊದಲು ತಮ್ಮ ಪಕ್ಷವನ್ನು ತಿದ್ದಿಕೊಳ್ಳಲಿ, ಜನರು ಬ್ರಾಹ್ಮಣ ಜಾತಿಗೆ ಸೇರಿದವರೇ ಎಂದು ನೋಡುವುದಿಲ್ಲ ಎಂದರು.