ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಸೈಟ್ ದೋಖಾ; ವಂಚಕನೊಂದಿಗೆ ಕಟೀಲ್ ಆತ್ಮೀಯ ಒಡನಾಟ: ಕಾಂಗ್ರೆಸ್ ಆರೋಪ
ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಸೈಟ್ ಹೆಸರಿನಲ್ಲಿ ವಂಚನೆ ನಡೆಸಿದ ಜಯ ಕುಮಾರ್ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.
Published: 06th February 2023 07:51 PM | Last Updated: 07th February 2023 01:44 PM | A+A A-

ನಳಿನ್ ಕುಮಾರ್ ಕಟೀಲ್ ಜೊತೆಗೆ ಜಯ ಕುಮಾರ್ ಇರುವ ಫೋಟೋ
ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಸೈಟ್ ಹೆಸರಿನಲ್ಲಿ ವಂಚನೆ ನಡೆಸಿದ ಜಯ ಕುಮಾರ್ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.
ಈ ಸಂಬಂಧ ಜಾಲತಾಣ ಟ್ವೀಟರ್ ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್, ಈತನ ವಂಚನೆಯಲ್ಲಿ ನಿಮ್ಮದೂ ಪಾಲಿದೆಯೇ? ಎಂದು ನಳಿನ್ ಕುಮಾರ್ ಅವರನ್ನು ಪ್ರಶ್ನಿಸಿದೆ.ಈ ವಂಚಕನಿಗೆ ಬಿಜೆಪಿ ರಾಜ್ಯ ನಾಯಕರ ರಕ್ಷಣೆ ಇರುವಾಗ ಲಕ್ಷಾಂತರ ರೂಪಾಯಿ ಕಳೆದುಕೊಂಡು ಜನರಿಗೆ ನ್ಯಾಯ ಸಿಗಲು ಸಾಧ್ಯವೇ ಎಂದಿದೆ.
ಅತ್ಯಾಚಾರಿಗಳು, ಬ್ರೋಕರ್ ಗಳು, ವೇಶ್ಯಾವಾಟಿಕೆ ದಂಧೆಕೋರರು, ಭ್ರಷ್ಟರು, ವಂಚಕರು, ರೌಡಿಗಳು, ಕ್ರಿಮಿನಲ್ ಗಳ ಏಕೈಕ ತವರು ಮನೆ ಬಿಜೆಪಿ. ಬಿಜೆಪಿ ಎಂದರೆ ಭ್ರಷ್ಟರ ಕೂಟವಾಗಿರುವಾಗ ಈತ ಬಿಜೆಪಿ ಸದಸ್ಯನಾಗಿರುವುದರಲ್ಲಿ ವಿಶೇಷವೆನಿಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.