ಮತದಾರರ ಪಟ್ಟಿ ಬಿಜೆಪಿ ಕಾರ್ಯಕರ್ತರಿಗೆ ಭಗವದ್ಗೀತೆ; ಭಾರತವನ್ನು ಒಗ್ಗೂಡಿಸಿದ್ದು ಜೋಡೋ ಯಾತ್ರೆಯಲ್ಲ, ಪ್ರಧಾನಿ ಮೋದಿ: ನಳಿನ್ ಕುಮಾರ್ ಕಟೀಲ್

ಶಿವಮೊಗ್ಗದಲ್ಲಿ ನಡೆಯುತ್ತಿರುವ ಪೇಜ್ ಪ್ರಮುಖ್ ಸಮಾವೇಶದಲ್ಲಿ ಮಾತನಾಡಿದ ಅವರು, ಪೇಜ್ ಪ್ರಮುಖ್ ಮತದಾರರ ಜೊತೆ ನಿರಂತರ ಸಂಪರ್ಕದಲ್ಲಿರಬೇಕು, ಸಂಕಲ್ಪ ಅಭಿಯಾನ ಯಾತ್ರೆಯನ್ನು ಯಶಸ್ವಿಗೊಳಿಸಿದ್ದಕ್ಕಾಗಿ ನಾನು ಸಂತಸಗೊಂಡಿದ್ದೇನೆ ಎಂದಿದ್ದಾರೆ.
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

ಶಿವಮೊಗ್ಗ: ರಾಜ್ಯ ಮತದಾರರ ಪಟ್ಟಿ ಬಿಜೆಪಿ ಕಾರ್ಯಕರ್ತರಿಗೆ ಭಗವದ್ಗೀತೆ ಇದ್ದಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ನಡೆಯುತ್ತಿರುವ ಪೇಜ್ ಪ್ರಮುಖ್ ಸಮಾವೇಶದಲ್ಲಿ ಮಾತನಾಡಿದ ಅವರು, ಪೇಜ್ ಪ್ರಮುಖ್ ಮತದಾರರ ಜೊತೆ ನಿರಂತರ ಸಂಪರ್ಕದಲ್ಲಿರಬೇಕು, ಸಂಕಲ್ಪ ಅಭಿಯಾನ ಯಾತ್ರೆಯನ್ನು ಯಶಸ್ವಿಗೊಳಿಸಿದ್ದಕ್ಕಾಗಿ ನಾನು ಸಂತಸಗೊಂಡಿದ್ದೇನೆ ಎಂದಿದ್ದಾರೆ.

ಶಿವಮೊಗ್ಗ ನಗರವೊಂದರಲ್ಲೇ 21,000 ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಪೇಜ್ ಪ್ರಮುಖರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಭಾರತವನ್ನು ಒಗ್ಗೂಡಿಸಿದವರು ಪ್ರಧಾನಿ ನರೇಂದ್ರ ಮೋದಿಯೇ ಹೊರತು ಇತ್ತೀಚೆಗೆ ಭಾರತ್ ಜೋಡೋ ಯಾತ್ರೆಯನ್ನು ಭಾರತದಾದ್ಯಂತ ನಡೆಸಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಲ್ಲ ಎಂದು ಕಟೀಲ್ ಹೇಳಿದರು.

ಸಾಂಸ್ಕೃತಿಕ ಭಾರತವು ಉದಯಿಸುತ್ತಿದೆ ಮತ್ತು ಅರಬ್ ದೇಶದಲ್ಲಿ ಗಣೇಶ ಮಂದಿರವನ್ನು ನಿರ್ಮಿಸಲು ಸುಮಾರು 24 ಎಕರೆ ಭೂಮಿಯನ್ನು ನೀಡಲಾಗಿದೆ ಎಂದು ಅವರು ಮಾಹಿತಿ  ನೀಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿಯನ್ನು ಅಧಿಕೃತವಾಗಿ ಆಚರಿಸುವ ಮೂಲಕ ಸಮಾಜವನ್ನು ಒಡೆದಿದ್ದಾರೆ. “ಬಿಜೆಪಿ ಸರ್ಕಾರವು ಗೋಹತ್ಯೆ ವಿರೋಧಿ ಕಾಯ್ದೆ ಮತ್ತು ಮತಾಂತರ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಿತು.

ಪ್ರತಿ ಜಿಲ್ಲೆಗೆ ಗೋಶಾಲೆ ಮಂಜೂರು ಮಾಡಿದ್ದು ಬಿಜೆಪಿ. ಕರ್ನಾಟಕ ಸರ್ಕಾರವೂ ಜಾನುವಾರುಗಳಿಗೆ ಆಂಬ್ಯುಲೆನ್ಸ್‌ಗಳನ್ನು ಒದಗಿಸಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 24 ಹಿಂದೂಗಳನ್ನು ಹತ್ಯೆ ಮಾಡಲಾಗಿತ್ತು ಎಂದು ಕಟೀಲ್ ವಾಗ್ದಾಳಿ ನಡೆಸಿದರು.

ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಯಾದಾಗ ಬಿಜೆಪಿ ಸರ್ಕಾರ ಪ್ರಥಮ ಬಾರಿಗೆ ಅವರ ಕುಟುಂಬಕ್ಕೆ ಪರಿಹಾರ ನೀಡಿದೆ ಎಂದು ಕಟೀಲ್ ಹೇಳಿದರು. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾದಾಗಲೂ ಪರಿಹಾರ ನೀಡಲಾಗಿತ್ತು. ಮೋದಿ ಸರಕಾರವೇ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿ ಹಿಂದೂ ಕಾರ್ಯಕರ್ತರ ಹತ್ಯೆಗೆ ನ್ಯಾಯ ದೊರಕಿಸಿಕೊಟ್ಟಿದೆ,'' ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com