ಬೊಮ್ಮಾಯಿ ಚುನಾವಣಾ ಲಹರಿ: ಆಹ್ವಾನ ಬಂದ ಎಲ್ಲಾ ಕಾರ್ಯಕ್ರಮಗಳಿಗೂ ಹಾಜರಿ; ಕಾಮನ್ ಮ್ಯಾನ್ ಸಿಎಂ ಪಟ್ಟ ಉಳಿಸಿಕೊಳ್ಳಲು ತಯಾರಿ!

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಮಾಜದ ಎಲ್ಲಾ ವರ್ಗಗಳೊಂದಿಗೆ ಸಂಪರ್ಕ ಸಾಧಿಸಲು ಬರುತ್ತಿರುವ ಅವಕಾಶಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಸಿಕೊಳ್ಳುತ್ತಿದ್ದಾರೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದ ಆಹ್ವಾನಗಳಲ್ಲಿ ಮುಖ್ಯಮಂತ್ರಿಗಳು ಕೇವಲ ಕೆಲವೇ ಆಹ್ವಾನಗಳನ್ನು ಮಾತ್ರ ಸ್ವೀಕರಿಸುತ್ತಾರೆ, ಆದರೆ ಬಸವರಾಜ ಬೊಮ್ಮಾಯಿ ಅವರು ಪಡೆಯುವ ಪ್ರತಿಯೊಂದು ಆಹ್ವಾನವನ್ನು ಒಪ್ಪಿಕೊಳ್ಳುತ್ತಿದ್ದಾರೆ ಮತ್ತು ಎಲ್ಲಾ ಕಾರ್ಯ್ರಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಮಾಜದ ಎಲ್ಲಾ ವರ್ಗಗಳೊಂದಿಗೆ ಸಂಪರ್ಕ ಸಾಧಿಸಲು ಬರುತ್ತಿರುವ ಅವಕಾಶಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಸಿಕೊಳ್ಳುತ್ತಿದ್ದಾರೆ.

ಸಿಎಂ ಕಾರ್ಯಕ್ರಮಗಳು ಮುಂಜಾನೆಯಿಂದ ಸಂಜೆವರೆಗೂ ಸಂಪೂರ್ಣವಾಗಿ ತುಂಬಿ ಹೋಗಿವೆ. ಮಂಗಳವಾರ ಶಕ್ತಿಗಣಪತಿನಗರ ವಾರ್ಡ್ ನಂ. 14 ರಲ್ಲಿ  ನಟರಾದ ಡಾ ರಾಜ್‌ಕುಮಾರ್, ಶಂಕರನಾಗ್ ಮತ್ತು ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

ನಂತರ ಅವರು ಮೂರು  ಬಿಬಿಎಂಪಿ ಪಾರ್ಕ್‌ಗಳನ್ನು ಉದ್ಘಾಟಿಸಿದರು. ವಾರ್ಡ್ ನಂ. 182ರಲ್ಲಿ ಪಾರ್ಕ್ ಗಳನ್ನು ಉದ್ಘಾಟಿಸಿದರು. ಆದರೆ ಇದು ಮೇಯರ್ ಮತ್ತು ಸ್ಥಳೀಯ ಶಾಸಕರು ಮೇಯರ್ ಗಳು ಭಾಗವಹಿಸುವ  ಕಾರ್ಯಕ್ರಮಗಳಾಗಿದ್ದವು.

ಬುಧವಾರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಇತರರೊಂದಿಗೆ ಶಿವಮೊಗ್ಗಕ್ಕೆ ತೆರಳಲಿದ್ದಾರೆ.  ಆದರೆ ಮಾರ್ಚ್‌ನಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿರುವುದರಿಂದ ಮುಂದಿನ ಕೆಲವು ವಾರಗಳಲ್ಲಿ ಅವರು ಬ್ಯುಸಿಯಾಗಲಿದ್ದಾರೆ.

ಇದು ಬೊಮ್ಮಾಯಿ ಅವರ ಹತಾಶೆಯನ್ನು ತೋರಿಸುತ್ತಿದೆ. ದೆಹಲಿಯಿಂದ ಸೂಚನೆಗಳು ಬರುತ್ತಿವೆ, ಅದರಂತೆ ಬೊಮ್ಮಾಯಿ ನಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ. ಆದರೆ ಮೊಯ್ಲಿ ಅವರ ಈ ಆರೋಪವನ್ನು ಸಿಎಂ ಕಚೇರಿ ನಿರಾಕರಿಸಿದೆ.

ನೆನಪಿಡಿ, ಇದು ಚುನಾವಣಾ ಸಮಯ. ಬೊಮ್ಮಾಯಿ ಮುಖ್ಯಮಂತ್ರಿಗಳಂತೆ ವರ್ತಿಸುವುದಿಲ್ಲ, ಅಭ್ಯರ್ಥಿಗಳಾಗಿ ವರ್ತಿಸುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ ಕೆಲವು ವಾರಗಳಲ್ಲಿ ಕರ್ನಾಟಕಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ ಮತ್ತು ಮುಂಬರುವ ವಾರಗಳಲ್ಲಿ ಮತ್ತೆ ಹಲವು ಬಾರಿ ಇಲ್ಲಿಗೆ ಬರುವ ನಿರೀಕ್ಷೆಯಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರ ಮಾಧ್ಯಮ ಸಲಹೆಗಾರರಾಗಿಯೂ ಕೆಲಸ ಮಾಡಿದ ಆರ್ ಪಿ ಜಗದೀಶ್ ಹೇಳಿದ್ದಾರೆ.

ಮುಖ್ಯಮಂತ್ರಿಗಳಿಗೆ  ಚುನಾವಣೆಯೊಂದೇ ಗುರಿಯಾಗಿರುತ್ತದೆ, ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮಾಜಿ ಸಿಎಂ ದಿವಂಗತ  ವಿರೇಂದ್ರ ಪಾಟೀಲ್ ವ್ಯತಿರಿಕ್ತವಾಗಿದ್ದರು. ಅವರು ಅನಾವಶ್ಯಕವಾಗಿ ಯಾವುದೇ ಕಾರ್ಯಕ್ರಮಗಳಿಗೆ ಹೋಗುತ್ತಿರಲಿಲ್ಲ, ಪ್ರಚಾರ ಮಾಡುತ್ತಿರಲಿಲ್ಲ, ಹೀಗಿದ್ದೂ 177 ಸ್ಥಾನಗಳನ್ನು ಗೆದ್ದಿದ್ದರು ಎಂದು ಸ್ಮರಿಸಿದ್ದಾರೆ.

ಬೊಮ್ಮಾಯಿ ಸಾಮಾನ್ಯರ ಸಿಎಂ ಎಂದು ಭಾವಿಸಲಾಗಿದ್ದು, ಆ ಪಟ್ಟಕ್ಕೆ ತಕ್ಕಂತೆ ಬದುಕಬೇಕು. ಎಲ್ಲಾ ಕಾರ್ಯಕ್ರಮಗಳಿಗೂ ಹಾಜರಾಗಿ ಅದನ್ನು ಸಾಬೀತುಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಟರ ಪ್ರತಿಮೆಗಳನ್ನು ಉದ್ಘಾಟಿಸುವುದು ಅವರ ಅಭಿಮಾನಿಗಳನ್ನು ಸಂತೋಷಪಡಿಸುವ ಮಾರ್ಗವಾಗಿದೆ ಎಂದು ಮತ್ತೊರ್ವ ಹಿರಿಯ ಪತ್ರಕರ್ತ ಎಸ್ ಸಿದ್ದರಾಜು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com