ಉಪೇಂದ್ರ 'ಪ್ರಜಾಕೀಯ' ಪಕ್ಷದ ಅಧಿಕೃತ ಚಿಹ್ನೆ 'ಆಟೋ'; ಚುನಾವಣಾ ಆಯೋಗ ಆದೇಶ; ಮಾಹಿತಿ ಹಂಚಿಕೊಂಡ ನಟ
ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲ ರಾಜಕೀಯ ಪಕ್ಷಗಳು ಅಬ್ಬರ ಪ್ರಚಾರವನ್ನ ನಡೆಸುತ್ತಿವೆ. ಈ ನಡುವೆ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಆಟೋ ರಿಕ್ಷಾ ಚಿಹ್ನೆ ಲಭಿಸಿದೆ.
Published: 24th February 2023 01:54 PM | Last Updated: 24th February 2023 02:00 PM | A+A A-

ಉಪೇಂದ್ರ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲ ರಾಜಕೀಯ ಪಕ್ಷಗಳು ಅಬ್ಬರ ಪ್ರಚಾರವನ್ನ ನಡೆಸುತ್ತಿವೆ. ಈ ನಡುವೆ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಆಟೋ ರಿಕ್ಷಾ ಚಿಹ್ನೆ ಲಭಿಸಿದೆ.
ಈ ಕುರಿತು ಚುನಾವಣಾ ಆಯೋಗ ಆದೇಶ ಹೊರಡಿಸಿದ್ದು, ಚುನಾವಣಾ ಆಯೋಗದ ಆದೇಶವನ್ನು ನಟ ಹಾಗೂ ರಾಜಕಾರಣಿ ಉಪೇಂದ್ರ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಉತ್ತಮ ಪ್ರಜಾಕೀಯ ಪಕ್ಷಕ್ಕೆ ಈ ಬಾರಿಯ 2023 ವಿಧಾನಸಭಾ ಚುನಾವಣೆಗೆ ಕಾಮನ್ ಸಿಂಬಲ್ "ಆಟೋ ರಿಕ್ಷಾ " ಚಿಹ್ನೆ ಲಭಿಸಿದೆ. ಎಲ್ಲರಿಗೂ ಶುಭಾಶಯಗಳು ಎಂದು ಉಪೇಂದ್ರ ಟ್ವೀಟ್ ಮೂಲಕ ಹೇಳಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಉತ್ತಮ ಪ್ರಜಾಕೀಯ ಪಕ್ಷದಿಂದ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳಿಗೆ ಆಟೋ ರಿಕ್ಷಾವನ್ನು ಸಾಮಾನ್ಯ ಚಿಹ್ನೆ ಎಂದು ಚುನಾವಣಾ ಆಯೋಗ ನಿಗದಿಪಡಿಸಿದೆ. ಉಪೇಂದ್ರ ಅವರು ರಾಜಕಾರಣಕ್ಕೆ ಎಂಟ್ರಿ ಕೊಟ್ಟು ಹಲವು ವರ್ಷಗಳೇ ಕಳೆದಿವೆ.
ಉತ್ತಮ ಪ್ರಜಾಕೀಯ ಪಾರ್ಟಿ ಹೆಸರಿನಲ್ಲಿ ಅವರು ಪಕ್ಷವೊಂದನ್ನು ಶುರು ಮಾಡುವ ಮೂಲಕ ರಾಜ್ಯಾದ್ಯಂತ ಪ್ರವಾಸ ಕೂಡ ಮಾಡಿದ್ದಾರೆ. ಈ ಪಕ್ಷದಿಂದ ಈಗಾಗಲೇ ಪಂಚಾಯತಿ ಚುನಾವಣೆಯನ್ನು ಅವರು ಎದುರಿಸಿದ್ದರು. ಈ ಪಕ್ಷದಿಂದ ಪಂಚಾಯತಿ ಚುನಾವಣೆಯಲ್ಲಿ ಒಬ್ಬ ಸದಸ್ಯ ಕೂಡ ಗೆದ್ದಿದ್ದಾರೆ.
ಇದುವರೆಗೂ ಉತ್ತಮ ಪ್ರಜಾಕಿಯ ಪಕ್ಷಕ್ಕೆ ಯಾವುದೇ ಅಧಿಕೃತವಾಗಿ ಈ ಪಕ್ಷಕ್ಕೆ ಚಿಹ್ನೆ ಇರಲಿಲ್ಲ. ಇದೀಗ ಕೇಂದ್ರ ಚುನಾವಣೆ ಆಯೋಗ ಪಕ್ಷಕ್ಕೆ ಅಧಿಕೃತವಾಗಿ ಚಿಹ್ನೆ ನೀಡಿದೆ. 2018 ರಿಂದ ತಮ್ಮದೇ ಆದ ಸಿದ್ಧಾಂತ ಮೂಲಕ ಉಪೇಂದ್ರ ತಮ್ಮ ಪಕ್ಷಕ್ಕೆ ಅಭ್ಯರ್ಥಿಗಳನ್ನು ಸೆಳೆಯುತ್ತಿದ್ದಾರೆ. ಅಲ್ಲದೇ ಪಕ್ಷಕ್ಕೆ ಅಭ್ಯರ್ಥಿಯಗಳ ಆಯ್ಕೆ ವಿಚಾರದಲ್ಲೂ ವಿನೂತನವಾಗಿ ಆಯ್ಕೆ ಮಾಡಿಕೊಂಡು ಬಂದಿದ್ದಾರೆ.
ಉತ್ತಮ ಪ್ರಜಾಕೀಯ ಪಕ್ಷಕ್ಕೆ ಈ ಬಾರಿಯ 2023 ವಿಧಾನಸಭಾ ಚುನಾವಣೆಗೆ ಕಾಮನ್ ಸಿಂಬಲ್
— Upendra (@nimmaupendra) February 23, 2023
“ ಆಟೋ ರಿಕ್ಷಾ “ ಚಿಹ್ನೆ ಲಭಿಸಿದೆ. ಎಲ್ಲರಿಗೂ ಶುಭಾಶಯಗಳು
Uttama Prajaakeeya party has got “Auto Riksha “ as common symbol for this Karnataka Assembly election 2023. Congratulations pic.twitter.com/RAQKU0TT8U