ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ
ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ

ಪ್ರತಿ ಬಾರಿ ಇಡಿ ದಾಳಿ ನಡೆದಾಗ ಮೋದಿ ಸರ್ಕಾರವನ್ನು ದೂಷಿಸಲಾಗುತ್ತದೆ; ಚುನಾವಣೆಯಲ್ಲಿ ಪಕ್ಷ-ನಾಯಕ ಎರಡೂ ಮುಖ್ಯ: ಅಮಿತ್ ಶಾ

ಭ್ರಷ್ಟರ ಮೇಲೆ ಛಾಟಿ ಬೀಸಲು ಮತ್ತು ವ್ಯಾಪಕವಾಗಿ ಪಿಡುಗು ಎನಿಸಿರುವ ಭ್ರಷ್ಟಾಚಾರವನ್ನು ಉನ್ನತ ಮಟ್ಟದಲ್ಲಿ ತಡೆಯಲು ಜಾರಿ ನಿರ್ದೇಶನಾಲಯ (ED) ದಾಳಿಗಳು ನಡೆಯುತ್ತಿದ್ದು ಇವು ಸದುದ್ದೇಶದಿಂದ ಕೂಡಿದ್ದರೂ ಪ್ರತಿ ಬಾರಿ ಮೋದಿ ಸರ್ಕಾರವನ್ನು ದೂಷಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.

ಬೆಂಗಳೂರು: ಭ್ರಷ್ಟರ ಮೇಲೆ ಛಾಟಿ ಬೀಸಲು ಮತ್ತು ವ್ಯಾಪಕವಾಗಿ ಪಿಡುಗು ಎನಿಸಿರುವ ಭ್ರಷ್ಟಾಚಾರವನ್ನು ಉನ್ನತ ಮಟ್ಟದಲ್ಲಿ ತಡೆಯಲು ಜಾರಿ ನಿರ್ದೇಶನಾಲಯ (ED) ದಾಳಿಗಳು ನಡೆಯುತ್ತಿದ್ದು ಇವು ಸದುದ್ದೇಶದಿಂದ ಕೂಡಿದ್ದರೂ ಪ್ರತಿ ಬಾರಿ ಮೋದಿ ಸರ್ಕಾರವನ್ನು ದೂಷಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.

ಭ್ರಷ್ಟಾಚಾರವನ್ನು ಕೊನೆಗಾಣಿಸುವುದು ಕೇಂದ್ರದ ಧ್ಯೇಯದ ಭಾಗವಾಗಿದೆ. ದುರದೃಷ್ಟವಶಾತ್, ಜೈಲು ಶಿಕ್ಷೆಗೆ ಅವಕಾಶವಿರುವ ಭ್ರಷ್ಟಾಚಾರ-ವಿರೋಧಿ ಕಾನೂನಿನಡಿಯಲ್ಲಿ ಮೋದಿ ಸರ್ಕಾರ ಮಾಡುತ್ತಿರುವ ಒಳ್ಳೆಯ ಕೆಲಸಕ್ಕೆ ದೂಷಿಸಲಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರು ಮಾಡಿರುವ ಶೇ.40 ಕಮಿಷನ್ ಆರೋಪಕ್ಕೆ ಉತ್ತರಿಸಿದ ಶಾ, ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಹೊಂದಿದೆ ಎಂದು ಹೇಳಿದರು.

ನಿನ್ನೆ ಬೆಂಗಳೂರಿನ ಟೌನ್ ಹಾಲ್ ನಲ್ಲಿ 'ಭಾರತೀಯ ರಾಜಕೀಯ: 65 ವರ್ಷಗಳ ಸನ್ನಿವೇಶ ಮತ್ತು ಪ್ರಧಾನಿ ಮೋದಿ ನೇತೃತ್ವದಲ್ಲಿ ಮಾದರಿ ಬದಲಾವಣೆ' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

"2014 ರ ನಂತರ ಉನ್ನತ ಮಟ್ಟದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಡೆದುಹಾಕಲಾಗಿದೆ ಎಂದು ನಾನು ಹೇಳಿಕೊಳ್ಳುವುದಿಲ್ಲ. ಆದರೆ ಪ್ರಧಾನಿಯವರು ತಂತ್ರಜ್ಞಾನವನ್ನು ಬಳಸಿಕೊಂಡು ವಿವಿಧ ಹಂತಗಳಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡಿದ್ದಾರೆ, ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ನೇರವಾಗಿ ಬಡವರು ಮತ್ತು ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ ಎಂದರು. ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯಲ್ಲಿನ ಭ್ರಷ್ಟಾಚಾರವನ್ನು ಮೋದಿ ಪರಿಶೀಲಿಸಿದರು, 2,000 ರೂ.ಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ನೀಡಲಾಗುವುದಿಲ್ಲ ಎಂದು ಹೇಳಿದರು.

ಶಾಲೆಗಳಲ್ಲಿ ಡ್ರೆಸ್ ಕೋಡ್ ಇರಬೇಕು: 'ಹಿಜಾಬ್' ವಿವಾದದ ಬಗ್ಗೆ ಮಾತನಾಡಿದ ಅವರು, ಸಾಂಸ್ಕೃತಿಕ ಸಮಾನತೆಯನ್ನು ಕಾಪಾಡಿಕೊಳ್ಳಲು, ಶಾಲೆಗಳಲ್ಲಿ ಡ್ರೆಸ್ ಕೋಡ್ ಇರಬೇಕು ಅದು ಹಿಜಾಬ್ ಮತ್ತು ಭಗವಾ (ಕೇಸರಿ ಬಟ್ಟೆ) ಎರಡಕ್ಕೂ ಅನ್ವಯಿಸುತ್ತದೆ ಎಂದು ಪ್ರತಿಪಾದಿಸಿದರು. ರಾಷ್ಟ್ರೀಯ ಪೌರತ್ವ ನೋಂದಣಿಗೆ (NRC) ವಿರೋಧ ಹೆಚ್ಚು ಕಾಲ ಉಳಿಯುವುದಿಲ್ಲ, ಎನ್‌ಆರ್‌ಸಿ ಒಬ್ಬರ ಪೌರತ್ವವನ್ನು ಹಿಂತೆಗೆದುಕೊಳ್ಳುವುದಲ್ಲ, ಆದರೆ ನೆರೆಯ ದೇಶಗಳಲ್ಲಿ ವಾಸಿಸುವ ಹಿಂದೂಗಳು, ಸಿಖ್‌ಗಳು, ಜೈನರು ಮತ್ತು ಬೌದ್ಧರಿಗೆ ಪೌರತ್ವವನ್ನು ನೀಡುತ್ತದೆ ಎಂದು ಶಾ ಸ್ಪಷ್ಟಪಡಿಸಿದರು.

"ಕೃಷಿ ಬಿಲ್‌ಗಳನ್ನು ಹಿಂಪಡೆಯಲಾಗಿದೆ ಆದ್ದರಿಂದ ಮಧ್ಯಸ್ಥಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಂತರ ಅವುಗಳನ್ನು ಕಾರ್ಯಗತಗೊಳಿಸಬಹುದು" ಎಂದು ಅವರು ಹೇಳಿದರು.

ಕಳೆದ ಒಂಬತ್ತು ವರ್ಷಗಳಲ್ಲಿ, ಕುಟುಂಬಗಳ ಆಧಾರದ ಮೇಲೆ ಅವಕಾಶಗಳನ್ನು ನೀಡದ ಕಾರಣ ಮತ್ತು ನಿರ್ದಿಷ್ಟ ಸಮುದಾಯಗಳನ್ನು ಸಮಾಧಾನಪಡಿಸಲು ಬಜೆಟ್ ಹಂಚಿಕೆಗಳನ್ನು ಮಾಡದ ಕಾರಣ, ರಾಜಕೀಯ ಸವಲತ್ತುಗಳಿಂದ ಸಾಮರ್ಥ್ಯಕ್ಕೆ ಬದಲಾಗಿದೆ ಎಂದು ಅವರು ಟೀಕಿಸಿದರು.

ಪಕ್ಷ ಮತ್ತು ನಾಯಕ ಇಬ್ಬರೂ ಮುಖ್ಯ: ಇತರ ಪಕ್ಷಗಳೊಂದಿಗೆ ನಮ್ಮನ್ನು ಹೋಲಿಕೆ ಮಾಡಿ ನೋಡಿ, ನಾವು ಉತ್ತಮ ಯೋಜನೆಗಳು, ಜನಪರ ಕೆಲಸಗಳನ್ನು ನೀಡಿದ್ದೇವೆ. ವ್ಯಕ್ತಿಗಳಿಗೆ ಮಾತ್ರ ಮತ ಹಾಕಬೇಡಿ. ಒಬ್ಬ ವ್ಯಕ್ತಿಗೆ ಮತ ಹಾಕಿದರೆ ತಪ್ಪು ಮಾಡುವ ಸಂಭವವಿದೆ. ಪಕ್ಷ ಮತ್ತು ನಾಯಕ ಎರಡನ್ನೂ ಪರಿಗಣಿಸಿದರೆ ಸರಿಯಾದ ಸರ್ಕಾರವನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದರು.

ಬೆಂಗಳೂರಿಗೆ ಒತ್ತು: ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ನಗರಾಭಿವೃದ್ಧಿ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿರುವುದರಿಂದ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಸಾಕಷ್ಟು ಹಣ ಮಂಜೂರು ಮಾಡಲು ಕೇಂದ್ರ ಪರಿಗಣಿಸಲಿದೆ ಎಂದು ಶಾ ಹೇಳಿದರು. 

Related Stories

No stories found.

Advertisement

X
Kannada Prabha
www.kannadaprabha.com